ಜಗತ್ತು ಹಾರ್ಮುಜ್ ಜಲಸಂಧಿಯಲ್ಲಿನ ತೈಲ ಟ್ಯಾಂಕರ್‌ಗಳನ್ನು ಎಣಿಸುತ್ತಿರುವಾಗ, ಇತ್ತ ಗಡಿಯಾರ ನೀರಿನ ಹನಿಗಳಿಗಾಗಿ ಟಿಕ್ ಟಿಕ್ ಎನ್ನುತ್ತಿದೆ. ಇರಾನ್ ಮತ್ತು ಅಮೆರಿಕ ನಡುವಿನ ಈ ಅಹಂನ ಹೋರಾಟದಲ್ಲಿ ಕೋಟ್ಯಂತರ ಜನರ ಕುಡಿಯುವ ನೀರು ಆಹುತಿಯಾಗುವ ಲಕ್ಷಣಗಳು ದಟ್ಟವಾಗಿವೆ. ಒಂದು ವೇಳೆ ಡಿಸಲಿನೇಷನ್ ಪ್ಲಾಂಟ್‌ಗಳು ಧ್ವಂಸಗೊಂಡರೆ, ಅದು ಕೇವಲ ಆರ್ಥಿಕ ಬಿಕ್ಕಟ್ಟಾಗದೆ, ಇತಿಹಾಸ ಕಂಡ ಅತಿದೊಡ್ಡ ಜಲ ವಲಸೆಗೆ ಕಾರಣವಾಗಲಿದೆ,(ಏಜೆನ್ಸೀಸ್).