ಒಂದೆಡೆ ಇರಾನ್ ಸಮಾಧಾನದ ಮಾತುಗಳನ್ನಾಡುತ್ತಿದ್ದರೆ, ಮತ್ತೊಂದೆಡೆ ಅಮೆರಿಕದ ಸಾಂಪ್ರದಾಯಿಕ ಮಿತ್ರ ರಾಷ್ಟ್ರಗಳಾದ ಸೌದಿ ಅರೇಬಿಯಾ, ಯುಎಇ, ಕುವೈತ್ ಮತ್ತು ಬಹ್ರೇನ್ ಗುಪ್ತವಾಗಿ ವಿಭಿನ್ನ ತಂತ್ರ ಹೂಡಿವೆ ಎಂದು ವರದಿಯಾಗಿದೆ. ಅಸೋಸಿಯೇಟೆಡ್ ಪ್ರೆಸ್ ವರದಿಯ ಪ್ರಕಾರ, ಈ ದೇಶಗಳು ಅಧ್ಯಕ್ಷ ಟ್ರಂಪ್ ಅವರಿಗೆ ಇರಾನ್ ವಿರುದ್ಧದ ಯುದ್ಧವನ್ನು ಈಗಲೇ ನಿಲ್ಲಿಸಬೇಡಿ ಎಂದು ಖಾಸಗಿಯಾಗಿ ಮನವಿ ಮಾಡಿವೆ. ಇರಾನ್‌ನ ಇಸ್ಲಾಮಿಕ್ ಆಡಳಿತವನ್ನು ಸಂಪೂರ್ಣವಾಗಿ ದುರ್ಬಲಗೊಳಿಸಲು ಇದೊಂದು ಐತಿಹಾಸಿಕ ಅವಕಾಶ ಎಂದು ಈ ರಾಷ್ಟ್ರಗಳು ವಾದಿಸುತ್ತಿವೆ.