ಭೂಮಿಯ ನಕ್ಷೆಯಲ್ಲೇ ಇರಾನ್ ಇರುವುದಿಲ್ಲವೇ..? ಅಮೆರಿಕದ ಈ ಸೀಕ್ರೆಟ್ ಪ್ಲಾನ್ ಕೇಳಿದರೆ ನೀವು ಬೆಚ್ಚಿಬೀಳ್ತೀರಾ! ಟ್ರಂಪ್ ಕೈಯಲ್ಲಿದೆ ಆ ಡೆತ್ ಬಟನ್! Donald Trump

ಭೂಮಿಯ ನಕ್ಷೆಯಲ್ಲೇ ಇರಾನ್ ಇರುವುದಿಲ್ಲವೇ..? ಅಮೆರಿಕದ ಈ ಸೀಕ್ರೆಟ್ ಪ್ಲಾನ್ ಕೇಳಿದರೆ ನೀವು ಬೆಚ್ಚಿಬೀಳ್ತೀರಾ! ಟ್ರಂಪ್ ಕೈಯಲ್ಲಿದೆ ಆ ಡೆತ್ ಬಟನ್!
ಭೂಮಿಯ ನಕ್ಷೆಯಲ್ಲೇ ಇರಾನ್ ಇರುವುದಿಲ್ಲವೇ..? ಅಮೆರಿಕದ ಈ ಸೀಕ್ರೆಟ್ ಪ್ಲಾನ್ ಕೇಳಿದರೆ ನೀವು ಬೆಚ್ಚಿಬೀಳ್ತೀರಾ! ಟ್ರಂಪ್ ಕೈಯಲ್ಲಿದೆ ಆ ಡೆತ್ ಬಟನ್!
Published on
ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡಗಳು ಕವಿದಿವೆ. ಇರಾನ್ ಮೇಲೆ ಯಾವುದೇ ಕ್ಷಣದಲ್ಲಾದರೂ ಅಮೆರಿಕ ಸೇನೆ ಭೀಕರ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಸಿಎನ್‌ಎನ್ ವರದಿ ಮಾಡಿದೆ. ಅಮೆರಿಕದ ಸೇನಾ ಪಡೆಗಳು ಈ ವಾರಾಂತ್ಯವೇ ಕಾರ್ಯಾಚರಣೆಗೆ ಸಜ್ಜಾಗಿವೆ ಎಂದು ಮೂಲಗಳು ತಿಳಿಸಿವೆ. ಆದರೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರು ಈ ಬಗ್ಗೆ ಅಂತಿಮ ನಿರ್ಧಾರವನ್ನು ಇನ್ನೂ ಕೈಗೊಂಡಿಲ್ಲ.

ಟ್ರಂಪ್ ಅಂಗಳದಲ್ಲಿ ಅಂತಿಮ ನಿರ್ಧಾರ

ವರದಿಗಳ ಪ್ರಕಾರ, ಅಮೆರಿಕದ ಸೇನಾ ಸನ್ನದ್ಧತೆ ಪೂರ್ಣಗೊಂಡಿದ್ದು, ಶ್ವೇತಭವನಕ್ಕೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಪ್ರಸ್ತುತ ಪರಿಸ್ಥಿತಿಯ ಮುಖ್ಯಾಂಶಗಳು ಇಲ್ಲಿವೆ.
ಚಿಂತನೆಯಲ್ಲಿ ಟ್ರಂಪ್: ಅಧ್ಯಕ್ಷ ಟ್ರಂಪ್ ಅವರು ದಾಳಿಯ ಪರ ಮತ್ತು ವಿರುದ್ಧವಾಗಿ ಇರುವ ಅಂಶಗಳನ್ನು ಗಂಭೀರವಾಗಿ ಪರಿಶೀಲಿಸುತ್ತಿದ್ದಾರೆ. ಅವರು ಈ ಬಗ್ಗೆ ಬಹಳ ಸಮಯವನ್ನು ಚಿಂತನೆಯಲ್ಲಿ ಕಳೆಯುತ್ತಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ.
ಮಧ್ಯಪ್ರಾಚ್ಯದಲ್ಲಿ ಸೇನಾ ಜಮಾವಣೆ: ಕಳೆದ ಕೆಲವು ದಿನಗಳಿಂದ ಅಮೆರಿಕವು ಮಧ್ಯಪ್ರಾಚ್ಯಕ್ಕೆ ತನ್ನ ಬೃಹತ್ ನೌಕಾಪಡೆ ಮತ್ತು ವಾಯುಪಡೆಯನ್ನು ರವಾನಿಸಿದೆ. 2003ರ ಇರಾಕ್ ಆಕ್ರಮಣದ ನಂತರ ಅಮೆರಿಕ ಮಾಡಿರುವ ಅತಿದೊಡ್ಡ ಸೇನಾ ನಿಯೋಜನೆ ಇದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸಂದಿಗ್ಧ ಪರಿಸ್ಥಿತಿ: ಒಂದು ಕಡೆ ಇರಾನ್‌ನ ಪರಮಾಣು ಕಾರ್ಯಕ್ರಮಕ್ಕೆ ಬ್ರೇಕ್ ಹಾಕುವ ಉದ್ದೇಶವಿದ್ದರೆ, ಮತ್ತೊಂದು ಕಡೆ ಯುದ್ಧವು ಜಾಗತಿಕ ತೈಲ ಮಾರುಕಟ್ಟೆ ಮತ್ತು ಆರ್ಥಿಕತೆಯ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ಟ್ರಂಪ್ ಚಿಂತಿತರಾಗಿದ್ದಾರೆ ಎನ್ನಲಾಗಿದೆ.

ರಾಜತಾಂತ್ರಿಕ ವಿಫಲತೆ ಮತ್ತು ಯುದ್ಧದ ಭೀತಿ

ಇತ್ತೀಚೆಗೆ ಜಿನೀವಾದಲ್ಲಿ ನಡೆದ ಪರೋಕ್ಷ ಮಾತುಕತೆಗಳಲ್ಲಿ ಯಾವುದೇ ಗಟ್ಟಿಯಾದ ಫಲಿತಾಂಶ ಬಂದಿಲ್ಲ. ಇರಾನ್ ತನ್ನ ಪರಮಾಣು ಕಾರ್ಯಕ್ರಮ ಮತ್ತು ಕ್ಷಿಪಣಿ ಅಭಿವೃದ್ಧಿಯಿಂದ ಹಿಂದೆ ಸರಿಯುವ ಲಕ್ಷಣಗಳು ಕಾಣುತ್ತಿಲ್ಲ.
ಇರಾನ್ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳುವುದು ಬುದ್ಧಿವಂತಿಕೆಯ ಕೆಲಸ. ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಶ್ವೇತಭವನದ ವಕ್ತಾರೆಯ ಎಚ್ಚರಿಕೆ ನೀಡಿದ್ದಾರೆ.

ಜಾಗತಿಕ ಪರಿಣಾಮಗಳು

ಒಂದು ವೇಳೆ ಅಮೆರಿಕ ದಾಳಿ ಆರಂಭಿಸಿದರೆ, ಅದು ಕೇವಲ ಒಂದು ದಿನದ ಕಾರ್ಯಾಚರಣೆಯಾಗಿರದೆ, ಹಲವು ವಾರಗಳ ಕಾಲ ನಡೆಯುವ ಭೀಕರ ಯುದ್ಧವಾಗಿರಲಿದೆ. ಇದು ಹಾರ್ಮುಜ್ ಜಲಸಂಧಿಯ ಮೇಲೆ ಪರಿಣಾಮ ಬೀರಲಿದ್ದು, ಜಾಗತಿಕ ಮಟ್ಟದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೇರುವ ಆತಂಕವಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net