ಆಡಿದ್ದು ಒಂದೇ ಪದ! ಬಾಸ್​ಗೆ ಬೆಂಡೆತ್ತಿದ ಉದ್ಯೋಗಿ; ಕೋರ್ಟ್​ ಮೆಟ್ಟಿಲೇರಿದ ಯುವತಿಗೆ ಸಿಕ್ತು 29 ಲಕ್ಷ ರೂ. ಪರಿಹಾರ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಉದ್ಯೋಗಿಗೆ ಕಚೇರಿಯಲ್ಲಿ ಅವಹೇಳನ ಮಾಡುತ್ತಿದ್ದ ಬಾಸ್​
  • ಮಹಿಳಾ ಉದ್ಯೋಗಿಗೆ 'ಪೊಟ್ಯಾಟೋ' ಎಂದಿದ್ದಕ್ಕೆ 29 ಲಕ್ಷ ರೂ. ದಂಡ
  • ಯುವತಿಯ ನಡೆಗೆ ಕಂಪನಿಯ ಬಾಸ್​ ಹೇಳಿದ್ದಿಷ್ಟು
Women Employee: ಹೆಣ್ಣು ಸಹನಾಮಯಿ, ತ್ಯಾಗಮಯಿ. ಏನೇ ಆದರೂ ಸಹಿಸಿಕೊಂಡು ಅನುಸರಿಸಿಕೊಂಡು ಹೋಗುತ್ತಾಳೆ ಎನ್ನುವ ಕಾಲ ಹೋಯ್ತು. ಈಗ ಏನಿದ್ದರೂ ದಂಡಂ ದಶಗುಣಂ ಅಷ್ಟೇ. ತನ್ನ ಮಾನ ಮತ್ತು ಪ್ರಾಣಕ್ಕೆ ಕುತ್ತು ಎದುರಾಗುತ್ತಿದೆ ಎಂದು ತಿಳಿದರೆ, ಆಕೆ ಭಯ, ಆತಂಕ ಎಲ್ಲವನ್ನೂ ತೊರೆದು ನಿಲ್ಲುತ್ತಾಳೆ. ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ ಎನ್ನುವುದಕ್ಕೆ ಈ ಘಟನೆ ಮತ್ತೊಂದು ಸಾಕ್ಷಿ.
'ಹಿಂದೂಸ್ತಾನ್ ಟೈಮ್ಸ್'​ ವರದಿ ಪ್ರಕಾರ, ಐರಿಶ್​ನಲ್ಲಿ ಸಂಸ್ಥೆಯ ಬಾಸ್​ವೊಬ್ಬರು, ತಮ್ಮ ಮಹಿಳಾ ಉದ್ಯೋಗಿಗೆ ಪದೇ ಪದೇ `ಆಲೂಗಡ್ಡೆ' ಎಂದು ಎಲ್ಲರೆದಿರೂ ಕರೆದು ತಪ್ಪುಗಳನ್ನು ಹೇಳುತ್ತಿದ್ದದೇ ಈ ದಂಡಕ್ಕೆ ಗುರಿಯಾಗಲು ಕಾರಣ. ಒಂದು ಬಾರಿ ಓಕೆ. ಆದರೆ, ಆಗಾಗ್ಗೆ ಸಹೋದ್ಯೋಗಿಗಳ ಎದುರು ಹೀಗೆ ಕರೆಯೋದನ್ನು ಸಹಿಸದ ಯುವತಿ, ನೇರವಾಗಿ ಕೋರ್ಟ್​ ಮೆಟ್ಟಿಲೇರಿದಳು.
ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ, ಕಂಪನಿಯ ನಿರ್ದೇಶಕರು ಮಹಿಳಾ ಉದ್ಯೋಗಿಯ ಕುಟುಂಬದ ಬಗ್ಗೆ ಮತ್ತು ಆಕೆಯ ತೇಜೋವಧೆ ಮಾಡಿದ್ದಾರೆ ಎಂದು 29 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶ ನೀಡಿದೆ. ಯುವತಿಯ ಈ ನಡೆಗೆ ಕೆಲವರು ಮೆಚ್ಚುಗೆ ಸೂಚಿಸಿದರೆ, ಇನ್ನೂ ಕೆಲವರು ಬೆರಗಾಗಿದ್ದಾರೆ. 

ಅಷ್ಟಕ್ಕೂ ಏನಿದು ಘಟನೆ?

ಮಿಕ್​ ಅಟ್ಕಿನ್ಸ್​ ಎಂಬಾತ ಒಂದು ಖಾಸಗಿ ಕಂಪನಿಯ ನಿರ್ದೇಶಕ. ಈತನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ವಾಟ್ಸ್​ಆ್ಯಪ್​ ಸಂದೇಶದಲ್ಲಿ ಮತ್ತು ಕಚೇರಿಯಲ್ಲಿ ಆಗಾಗ್ಗೆ ಆಲೂಗಡ್ಡೆ ಎಂದು ಅವಹೇಳನ ಮಾಡುತ್ತಿದ್ದ. ಇದು ಯಾವ ಹಂತಕ್ಕೆ ಹೋಗಿತ್ತು ಎಂದರೆ, ಆಕೆಗೆ ಆಲೂಗಡ್ಡೆಯ ಫೋಟೋ ಇರುವ ಮೆಸೇಜ್​ಗಳನ್ನು ಕಳುಹಿಸಿ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದನಂತೆ.
ಮಹಿಳೆಯ ಸಂಬಂಧಿ ಬರ್ನಾಡೆಟ್ ಹೇಯ್ಸ್ ಎಂಬಾಕೆ ಮಾಧ್ಯಮಗಳೊಂದಿಗೆ ಮಾತನಾಡಿ, ಮಿಕ್ ಅಟ್ಕಿನ್ಸ್​ ಅವರ ಈ ವರ್ತನೆಯಿಂದ ಆಕೆ ತುಂಬ ಮಾನಸಿಕ ನೋವು ಅನುಭವಿಸಿದ್ದಾಳೆ. ನಿದ್ರಾ ಹೀನತೆ ಸಮಸ್ಯೆಯಿಂದಲೂ ಬಳಲುತ್ತಿದ್ದಳು. ನಿತ್ಯ ಕೆಲಸಕ್ಕೆ ತೆರಳಲು ಭಯ ಪಡುತ್ತಿದ್ದಳು. ಅಷ್ಟು ಕ್ರೂರವಾಗಿ ಆತ ಆಕೆಯನ್ನು ನಡೆಸಿಕೊಂಡಿದ್ದ. ಆಕೆಯಲ್ಲಿ ಒಂದು ಭಯದ ವಾತಾವರಣವೇ ಸೃಷ್ಟಿಯಾಗಿತ್ತು ಎಂದು ಹೇಳಿದ್ದಾರೆ.

ಇಷ್ಟೆಲ್ಲ ಆದರೂ ಕೆಲಸ ಬಿಡಲಿಲ್ಲ

ಇಷ್ಟೆಲ್ಲ ಸಮಸ್ಯೆ ಮತ್ತು ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದರೂ ಸಹ ಆಕೆ ಏಕೆ ಕೆಲಸ ಬಿಡಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸ್ನೇಹಿತೆ, ಅವಳಿಗೆ ಮನೆಯ ಸಂಪೂರ್ಣ ಜವಾಬ್ದಾರಿ ಹೆಗಲ ಮೇಲಿತ್ತು. ಹೀಗಾಗಿ, ತಕ್ಷಣಕ್ಕೆ ಕೆಲಸ ಬಿಡಲು ಸಾಧ್ಯವಿರಲಿಲ್ಲ. ತ್ಯಜಿಸುವಂತೆ ಹಿಂಸೆ ಕೊಟ್ಟರೂ ಬಿಡದ ಪರಿಸ್ಥಿತಿಯಲ್ಲಿ ಆಕೆಯಿದ್ದಳು ಎಂದರು. 

'ಆಲೂಗಡ್ಡೆ' ಇಲ್ಲಿ ಕಾಮನ್​ ಪದ!

ಆಲೂಗಡ್ಡೆ ಅನ್ನೋದು ಒಂದು ತಮಾಷೆಯ ಪದ. ಅವಳು ನಾರ್ದನ್​ ಐರ್ಲ್ಯಾಂಡಿನವಳು. ಅಸಲಿಗೆ, ಇಲ್ಲಿ ಇದೆಲ್ಲ ತುಂಬ ಕಾಮನ್​ ಪದ. ಇರಲಿ ನನಗೆ ಬಹಳ ಹೇಳೋಕೆ ಇದೆ. ಆದರೆ, ನಾನೀಗ ಕೋಪದಲ್ಲಿ ಏನೋ ಮಾತಾಡಿ, ಮತ್ತೇನೋ ಆಗುವುದು ಬೇಡ. ನನ್ನ ರಕ್ತ ಕುದಿಯುತ್ತಿದೆ ಎಂದು ಮಿಕ್ ಅಟ್ಕಿನ್ಸ್ ಘಟನೆಗೆ ಪ್ರತಿಕ್ರಿಯಿಸಿದ್ದಾರೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net