ಟ್ರಂಪ್ ಅವರ ವಾಗ್ದಾಳಿಯ ಬೆನ್ನಲ್ಲೇ, ಬ್ರಿಟನ್, ಫ್ರಾನ್ಸ್, ಜರ್ಮನಿ, ಇಟಲಿ, ನೆದರ್ಲ್ಯಾಂಡ್ಸ್ ಮತ್ತು ಜಪಾನ್ ದೇಶಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ. ಇರಾನ್ ನಡೆಸುತ್ತಿರುವ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ಖಂಡಿಸಿರುವ ಈ ರಾಷ್ಟ್ರಗಳು, ಸುರಕ್ಷಿತ ಹಡಗು ಸಂಚಾರಕ್ಕಾಗಿ "ಸೂಕ್ತ ಪ್ರಯತ್ನ"ಗಳನ್ನು ಮಾಡುವುದಾಗಿ ಒಪ್ಪಿಕೊಂಡಿವೆ. ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರ ಕಚೇರಿಯಿಂದ ಹೊರಬಿದ್ದ ಈ ಹೇಳಿಕೆಯು ಇರಾನ್ ತನ್ನ ಬೆದರಿಕೆಗಳನ್ನು ಕೂಡಲೇ ನಿಲ್ಲಿಸಬೇಕೆಂದು ಆಗ್ರಹಿಸಿದೆ.