ವೈನ್ ವಾರ್; ಶಾಂತಿ ಮಂಡಳಿ ತಿರಸ್ಕರಿಸಿದ ಫ್ರಾನ್ಸ್: ಶೇ.200ರಷ್ಟು ಸುಂಕದ ಬೆದರಿಕೆ ಹಾಕಿದ ಡೊನಾಲ್ಡ್ ಟ್ರಂಪ್ | Donald Trump
ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Published on:
Copied
Follow Us
ನ್ಯೂಯಾರ್ಕ್: ಅಂತಾರಾಷ್ಟ್ರೀಯ ಸಂಘರ್ಷಗಳನ್ನು ಪರಿಹರಿಸಲು ಅಮೆರಿಕ ರೂಪಿಸಿರುವ ಶಾಂತಿ ಮಂಡಳಿ ಸೇರಲು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ನಿರಾಕರಿಸಿದ ಬೆನ್ನಲ್ಲೇ, ಡೊನಾಲ್ಡ್ ಟ್ರಂಪ್(Donald Trump) ಫ್ರಾನ್ಸ್ ವಿರುದ್ಧ ಆರ್ಥಿಕ ಅಸ್ತ್ರ ಪ್ರಯೋಗಿಸಿದ್ದಾರೆ. ಫ್ರಾನ್ಸ್‌ನ ಪ್ರಸಿದ್ಧ ವೈನ್ ಮತ್ತು ಶಾಂಪೇನ್ ಮೇಲೆ ಬರೋಬ್ಬರಿ 200 ಪ್ರತಿಶತ ಆಮದು ಸುಂಕ ಹೇರುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಖಡಕ್ ಎಚ್ಚರಿಕೆ ನೀಡಿದ ಟ್ರಂಪ್
ಈ ಬಗ್ಗೆ ಪಾಮ ಬೀಚ್ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಮ್ಯಾಕ್ರನ್ ಅವರ ನಿಲುವಿನ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಮ್ಯಾಕ್ರನ್ ಅವರ ಅವಧಿ ಶೀಘ್ರದಲ್ಲೇ ಮುಗಿಯಲಿದೆ. ಯಾರೂ ಅವರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ನಾನು ಅವರ ವೈನ್ ಮೇಲೆ ಶೇ.200 ಸುಂಕ ಹಾಕುತ್ತೇನೆ. ಆಗ ಅವರು ತಾನಾಗಿಯೇ ಶಾಂತಿ ಮಂಡಳಿ ಸೇರುತ್ತಾರೆ ಎಂದು ಟ್ರಂಪ್ ಗುಡುಗಿದ್ದಾರೆ.
ಟ್ರಂಪ್ ನೇತೃತ್ವದ ಈ ಮಂಡಳಿಯು ಗಾಜಾ ಸೇರಿದಂತೆ ಜಾಗತಿಕ ಸಂಘರ್ಷಗಳನ್ನು ನಿರ್ವಹಿಸುವ ಗುರಿಯನ್ನು ಹೊಂದಿದೆ. ಆದರೆ ಫ್ರಾನ್ಸ್ ಇದನ್ನು ಸೇರಲು ಹಿಂಜರಿಯುತ್ತಿರುವುದಕ್ಕೆ ಪ್ರಮುಖ ಕಾರಣಗಳಿವೆ.
ವಿಶ್ವಸಂಸ್ಥೆಯ ಹಿತಾಸಕ್ತಿ
ಈ ಮಂಡಳಿಯು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಪರ್ಯಾಯವಾಗಿ ಕೆಲಸ ಮಾಡಬಹುದು ಎಂಬುದು ಫ್ರಾನ್ಸ್ ಆತಂಕವಾಗಿದ್ದು, ಮಂಡಳಿಯ ಸದಸ್ಯತ್ವ ಪಡೆಯಲು ಸುಮಾರು 1 ಬಿಲಿಯನ್ ಡಾಲರ್ (ಅಂದಾಜು 8,300 ಕೋಟಿ ರೂ.)ಪಡೆಯಬೇಕು ಎಂಬ ನಿಯಮವಿದೆ.
ಅಮೆರಿಕದ ಎಲ್ಲಾ ಪ್ರಾಬಲ್ಯ
ಮಂಡಳಿಯ ನಿರ್ಧಾರಗಳ ಮೇಲೆ ಟ್ರಂಪ್ ಅವರಿಗೆ ವೀಟೋ ಅಧಿಕಾರ ಇರುವುದು ಮ್ಯಾಕ್ರನ್ ಅವರಿಗೆ ಸಮ್ಮತವಿಲ್ಲ ಎಂದು ತಿಳಿದು ಬಂದಿದೆ.
ಟ್ರಂಪ್ಗೆ ತಿರುಗೇಟು ನೀಡಿ ಫ್ರಾನ್ಸ್
ಟ್ರಂಪ್ರ ಬೆದರಿಕೆಗೆ ಫ್ರಾನ್ಸ್ ತೀವ್ರವಾಗಿ ಪ್ರತಿಕ್ರಿಯಿಸಿದ್ದು, ಫ್ರೆಂಚ್ ವಕ್ತಾರರು ಮತ್ತು ವಿದೇಶಾಂಗ ಸಚಿವಾಲಯವು ಈ ಕೆಳಗಿನ ಅಂಶಗಳನ್ನು ಸ್ಪಷ್ಟಪಡಿಸಿದೆ:
ರಾಜತಾಂತ್ರಿಕ ಬ್ಲ್ಯಾಕ್‌ಮೇಲ್
ಆರ್ಥಿಕ ಸುಂಕಗಳನ್ನು ಬಳಸಿ ವಿದೇಶಾಂಗವನ್ನು ಬದಲಿಸಲು ಪ್ರಯತ್ನಿಸುವುದು ರಾಜತಾಂತ್ರಿಕ ಬ್ಲ್ಯಾಕ್‌ಮೇಲ್ ಎಂದು ಫ್ರಾನ್ಸ್ ಕರೆದಿದೆ. ಸಾರ್ವಭೌಮ ರಾಷ್ಟ್ರವೊಂದಕ್ಕೆ ತನ್ನದೇ ಆದ ನಿರ್ಧಾರ ತೆಗೆದುಕೊಳ್ಳುವ ಹಕ್ಕಿದೆ ಎಂದು ಫ್ರಾನ್ಸ್ ಪ್ರತಿಪಾದಿಸಿದೆ.
ವಿಶ್ವಸಂಸ್ಥೆಯ ರಕ್ಷಣೆ
ಈ ಬಗ್ಗೆ ಮಾತನಾಡಿದ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್, ನಾವು ಇಂಟರ್ನ್ಯಾಷನಲ್ ಸಂಘರ್ಷಗಳನ್ನು ಪರಿಹರಿಸಲು ವಿಶ್ವಸಂಸ್ಥೆಯ (UN) ಚೌಕಟ್ಟನ್ನು ನಂಬುತ್ತೇವೆ. ಹೊಸದಾಗಿ ಪಾವತಿಸಿ ಸೇರುವ (ಪೇ-ಟು-ಪ್ಲೇ) ಮಂಡಳಿಗಳಾವತಿ ಅಗತ್ಯವಿಲ್ಲ ಎಂದು ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಐರೋಪ್ಯ ಒಕ್ಕೂಟದ ಬೆಂಬಲ
ಫ್ರಾನ್ಸ್ ಏಕಾಂಗಿಯಲ್ಲ, ಐರೋಪ್ಯ ಒಕ್ಕೂಟವು (EU) ಫ್ರಾನ್ಸ್ ಪರವಾಗಿ ನಿಂತಿದೆ. ಒಂದು ವೇಳೆ ಅಮೆರಿಕ ಸುಂಕ ಹೇರಿದರೆ, ನಾವು ಕೂಡ ಅಮೆರಿಕದ ಉತ್ಪನ್ನಗಳ ಮೇಲೆ (ಉದಾಹರಣೆಗೆ ಹಾರ್ಲೆ ಡೇವಿಡ್ಸನ್ ಬೈಕ್, ಬೋರ್ಬನ್ ವಿಸ್ಕಿ) ಭಾರಿ ಸುಂಕ ಹೇರುವುದಾಗಿ ಸೂಚಿಸಿದೆ.
ಗ್ರೀನ್ಲ್ಯಾಂಡ್ ವಿವಾದದ ನಂಟು
ಗ್ರೀನ್ಲ್ಯಾಂಡ್ ವಿಚಾರವಾಗಿ ಅಮೆರಿಕ ಮತ್ತು ಯುರೋಪ್ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿದೆ. ಡೆನ್ಮಾರ್ಕ್ ಮತ್ತು ಫ್ರಾನ್ಸ್ ದೇಶಗಳು ಟ್ರಂಪ್ ಅವರ ಗ್ರೀನ್‌ಲ್ಯಾಂಡ್ ಖರೀದಿಸುವ ಪ್ರಸ್ತಾಪವನ್ನು ವಿರೋಧಿಸಿವೆ. ಇದಕ್ಕೆ ಪ್ರತಿಯಾಗಿ ಫ್ರಾನ್ಸ್ ಒಳಗೊಂಡಂತೆ ಕೆಲವು ಪಟ್ಟಿ ದೇಶಗಳ ಮೇಲೆ ಶೇ.10ರಷ್ಟು ಸುಂಕ ಹೇರಲು ಟ್ರ್ಯಾಮ್ ಅನ್ನು ಸೂಚಿಸಲಾಗಿದೆ. ಈಗ ವೈನ್ ಮೇಲಿನ ಈ ಶೇ.200ರಷ್ಟು ಸುಂಕದ ಬೆದರಿಕೆ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ.
ಆರ್ಥಿಕ ಪರಿಣಾಮ
ಅಮೆರಿಕವು ಫ್ರೆಂಚ್ ವೈನ್ ಮತ್ತು ಶಾಂಪೇನ್‌ಗೆ ಅತಿದೊಡ್ಡ ಮಾರುಕಟ್ಟೆಯಾಗಿದೆ. ಒಂದು ವೇಳೆ ಈ ಸುಂಕ ಜಾರಿಗೆ ಬಂದರೆ, ಫ್ರಾನ್ಸ್‌ನ ಮದ್ಯ ಉದ್ಯಮಕ್ಕೆ ಭಾರಿ ಹೊಡೆತ ಬೀಳಲಿದೆ. ಇದಕ್ಕೆ ಪ್ರತಿಯಾಗಿ ಒಕ್ಕೂಟ ಕೂಡ ಅಮೆರಿಕದ ಉತ್ಪನ್ನಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ,(ಏಜೆನ್ಸೀಸ್).