ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಅಲ್ ಜಜೀರಾಗೆ ನೀಡಿದ ಸಂದರ್ಶನದಲ್ಲಿ, ಅಮೆರಿಕದ ಮೇಲಿನ ವಿಶ್ವಾಸ ತುಂಬಾ ಕೆಳ ಮಟ್ಟದಲ್ಲಿದೆ, ಈ ಹಿಂದೆ ಒಪ್ಪಂದಗಳನ್ನು ಮಾಡಿಕೊಂಡಿದ್ದರೂ ಅಮೆರಿಕ ಯಾವುದೇ ಮುನ್ಸೂಚನೆಯಿಲ್ಲದೆ ಅದರಿಂದ ಹಿಂದೆ ಸರಿದ ಇತಿಹಾಸವಿದೆ, ಕಳೆದ ವರ್ಷಗಳಲ್ಲಿ ನಡೆಸಿದ ಮಾತುಕತೆಗಳ ಅಂತಿಮ ಫಲಿತಾಂಶ ದಾಳಿಯ ರೂಪದಲ್ಲಿ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾ, ವಾಷಿಂಗ್ಟನ್‌ನ ಕ್ರಮಗಳಲ್ಲಿ ಯಾವುದೇ ಪ್ರಾಮಾಣಿಕತೆ ಕಂಡುಬರುತ್ತಿಲ್ಲ ಎಂದು ಆರೋಪಿಸಿದ್ದಾರೆ.