ಕುತೂಹಲಕಾರಿ ವಿಷಯವೆಂದರೆ, ಈ ಮಾತುಕತೆಗಳಿಗಿಂತ ಮೊದಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮಗೆ ಯಾವುದೇ ಬ್ಯಾಕ್ ಅಪ್ ಪ್ಲಾನ್ ಇಲ್ಲ ಎಂದು ಘೋಷಿಸಿದ್ದರು. ಅವರ ಮಿಲಿಟರಿ ಸೋತಿದೆ, ಅವರ ಉತ್ಪಾದನಾ ಸಾಮರ್ಥ್ಯ ಕುಸಿದಿದೆ. ನಾವು ಅವರನ್ನು ತೀವ್ರವಾಗಿ ಹೊಡೆದಿದ್ದೇವೆ, ಹೀಗಾಗಿ ನಮಗೆ ಬೇರೆ ಪ್ಲಾನ್ ಅವಶ್ಯಕತೆಯಿಲ್ಲ ಎಂದು ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಈಗ ಸಂಧಾನ ವಿಫಲವಾಗಿರುವುದು ಟ್ರಂಪ್ ಮುಂದಿನ ನಡೆಯ ಬಗ್ಗೆ ಕುತೂಹಲ ಮೂಡಿಸಿದೆ.