ಯುಎಇ ವ್ಯಕ್ತಿಗಳ ಮೇಲೆ ಯಾವುದೇ ಆದಾಯ ತೆರಿಗೆ ವಿಧಿಸುವುದಿಲ್ಲ. ಆದಾಗ್ಯೂ, ಸರಕು ಮತ್ತು ಸೇವೆಗಳ ಖರೀದಿಯ ಮೇಲೆ ಶೇ. 5 ರಷ್ಟು ಮೌಲ್ಯವರ್ಧಿತ ತೆರಿಗೆಯನ್ನು ವಿಧಿಸುತ್ತದೆ. ಇದನ್ನು ಪೂರೈಕೆ ಸರಪಳಿಯ ಪ್ರತಿಯೊಂದು ಹಂತದಲ್ಲಿ ವಿಧಿಸಲಾಗುತ್ತದೆ ಮತ್ತು ಅಂತಿಮವಾಗಿ ಗ್ರಾಹಕರು ಇದನ್ನು ಭರಿಸುತ್ತಾರೆ. ಯುಎಇ ಆರೋಗ್ಯಕ್ಕೆ ಹಾನಿಕಾರಕವಾದ ನಿರ್ದಿಷ್ಟ ಸರಕುಗಳ ಮೇಲೆ ಅಬಕಾರಿ ತೆರಿಗೆಯನ್ನು ವಿಧಿಸುತ್ತದೆ. ಇದರೊಂದಿಗೆ ನಿಗಮಗಳು ಮತ್ತು ಇತರ ಘಟಕಗಳ ನಿವ್ವಳ ಆದಾಯ ಅಥವಾ ಲಾಭದ ಮೇಲೆ ಕಾರ್ಪೊರೇಟ್ ತೆರಿಗೆ ವಿಧಿಸುತ್ತದೆ. ತೈಲ ಕಂಪನಿಗಳು ಮತ್ತು ವಿದೇಶಿ ಬ್ಯಾಂಕ್‌ಗಳ ಶಾಖೆಗಳನ್ನು ಹೊರತುಪಡಿಸಿ, ವ್ಯಕ್ತಿಗಳು, ಹೂಡಿಕೆದಾರರು ಅಥವಾ ಕಾರ್ಪೊರೇಟ್‌ಗಳ ಮೇಲೆ ಯುಎಇ ಆದಾಯ ತೆರಿಗೆಯನ್ನು ವಿಧಿಸುವುದಿಲ್ಲ. ಆರಂಭದಿಂದಲೂ ಮುಕ್ತ ಆರ್ಥಿಕ ಮಾದರಿಯನ್ನು ಹೊಂದಿರುವ ದೇಶವಾಗಿ, ಇದು ವ್ಯಕ್ತಿಗಳು ಮತ್ತು ಹೂಡಿಕೆದಾರರು ತಮ್ಮ ಲಾಭವನ್ನು ಸಂಪೂರ್ಣವಾಗಿ ಸ್ವದೇಶಕ್ಕೆ ಹಿಂದಿರುಗಿಸಲು ಅನುವು ಮಾಡಿಕೊಡುತ್ತದೆ. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಏಳು ಎಮಿರೇಟ್‌ಗಳನ್ನು ಒಳಗೊಂಡಿದೆ. ಅವುಗಳೆಂದರೆ, ಅಬುಧಾಬಿ, ದುಬೈ, ಶಾರ್ಜಾ, ಅಜ್ಮಾನ್, ಉಮ್ ಅಲ್ ಕುವೈನ್, ರಾಸ್ ಅಲ್ ಖೈಮಾ ಮತ್ತು ಫುಜೈರಾ. ಅಬುಧಾಬಿ ರಾಜಧಾನಿ ಮತ್ತು ಅತಿದೊಡ್ಡ ಎಮಿರೇಟ್ ಆಗಿದ್ದು, ದುಬೈ ಜಾಗತಿಕ ವ್ಯಾಪಾರ ಕೇಂದ್ರವಾಗಿ ಗುರುತಿಸಲ್ಪಟ್ಟಿದೆ.