ಇಂಟರ್ನ್ಯಾಷನಲ್ ಕ್ರೈಸಿಸ್ ಗ್ರೂಪ್‌ನ ಅಲಿ ವೇಜ್ ಪ್ರಕಾರ, ಇರಾನ್‌ನ ಆಡಳಿತ ವ್ಯವಸ್ಥೆಯು ಮೊಜ್ತಬಾ ಅವರ ಹೆಸರನ್ನು ಬೇಕಂತಲೇ ಮುನ್ನೆಲೆಗೆ ತರುತ್ತಿದೆ. ಒಳಾಂಗಣ ಟೀಕೆಗಳಿಂದ ರಕ್ಷಣೆ ಪಡೆಯಲು ಮೊಜ್ತಬಾ ಅವರ ಹೆಸರನ್ನು ಬಳಸಲಾಗುತ್ತಿದೆ. ಅವರು ನೇರವಾಗಿ ಬಂದು ಮಾತನಾಡದ ಕಾರಣ, ಸಂಧಾನಕಾರರು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಮೊಜ್ತಬಾ ಅವರ ಅನುಮೋದನೆ ಇದೆ ಎಂದು ಹೇಳಿ ಜನರನ್ನು ಸಮಾಧಾನಪಡಿಸಲಾಗುತ್ತಿದೆ ಎಂದು ವಿಶ್ಲೇಷಿಸಿದ್ದಾರೆ.