ಎನ್ವಿಡಿಯಾ ಸಿಇಒ ಅಕ್ರಮ ಸಂಬಂಧ ಕೇಸ್​ಗೆ ಬಿಗ್ ಟ್ವಿಸ್ಟ್: ಜೆನ್ಸೆನ್​-ಆಲಿಸ್​ರನ್ನು ಒಂದುಗೂಡಿಸಿದ್ದೇ ಆಕೆಯ ಪತಿ..! Jensen Huang

ಕಳೆದ ಸುಮಾರು 10 ವರ್ಷಗಳಿಂದ ಜೆನ್ಸೆನ್ ಹುವಾಂಗ್ ಅವರೊಂದಿಗೆ ವ್ಯಾಪಾರ ಸಂಬಂಧ ಹೊಂದಿದ್ದ ಕಾಂಗ್ ವೀ ಅವರಿಗೆ ತಮ್ಮ ಪತ್ನಿ ಮತ್ತು ಜೆನ್ಸೆನ್ ನಡುವಿನ ಆತ್ಮೀಯತೆಯ ಬಗ್ಗೆ ಸಂಪೂರ್ಣ ಅರಿವಿತ್ತು ಎನ್ನಲಾಗಿದೆ.
Jensen Huang
ಎನ್ವಿಡಿಯಾ ಸಿಇಒ ಅಕ್ರಮ ಸಂಬಂಧ ಕೇಸ್​ಗೆ ಬಿಗ್ ಟ್ವಿಸ್ಟ್: ಜೆನ್ಸೆನ್​-ಆಲಿಸ್​ರನ್ನು ಒಂದುಗೂಡಿಸಿದ್ದೇ ಆಕೆಯ ಪತಿ..!
Published on: 

ವಾಷಿಂಗ್ಟನ್​: ಜಾಗತಿಕ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (AI) ಕ್ಷೇತ್ರದ ದೈತ್ಯ ಕಂಪನಿ 'ಎನ್ವಿಡಿಯಾ' (Nvidia) ಸಿಇಒ ಜೆನ್ಸೆನ್ ಹುವಾಂಗ್ ( Jensen Huang ) ಅವರು ಸದ್ಯ ವಿಶ್ವದಾದ್ಯಂತ ಸಖತ್​ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಅವರ ಮೇಲಿರುವ ವಿವಾಹೇತರ ಸಂಬಂಧ ಮತ್ತು ಚೀನಾಗೆ ಎಐ ಚಿಪ್‌ಗಳನ್ನು ಅಕ್ರಮವಾಗಿ ಪೂರೈಸಿದ ಆರೋಪ. ಈ ಒಂದು ವಿಚಾರ ಇಡೀ ಟೆಕ್ ಲೋಕದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇನ್ನೂ ಈ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಮತ್ತೊಂದು ಸ್ಫೋಟಕ ಸಂಗತಿ ಬೆಳಕಿಗೆ ಬಂದಿದೆ.

ಚೀನಾದ ಶಂಕಿತ ಗೂಢಾಚಾರಿಣಿ ಹಾಗೂ ಉದ್ಯಮಿ ಆಲಿಸ್ ಹುವಾಂಗ್ ಅವರೊಂದಿಗೆ ತಮಗೆ ಸಂಬಂಧವಿತ್ತು ಎಂಬುದನ್ನು ಸ್ವತಃ ಜೆನ್ಸೆನ್ ಇತ್ತೀಚೆಗಷ್ಟೇ ಒಪ್ಪಿಕೊಂಡಿದ್ದು, ಇದೀಗ ಈ ಪ್ರಕರಣಕ್ಕೆ ಮತ್ತೊಂದು ಅಚ್ಚರಿಯ ತಿರುವು ಪಡೆದುಕೊಂಡಿದೆ. ಪ್ರತಿಷ್ಠಿತ 'ವಾಲ್ ಸ್ಟ್ರೀಟ್ ಜರ್ನಲ್' (The Wall Street Journal) ವರದಿಯ ಪ್ರಕಾರ, ಆಲಿಸ್ ಅವರನ್ನು ಜೆನ್ಸೆನ್ ಅವರಿಗೆ ಪರಿಚಯಿಸಿದ್ದು ಬೇರೆ ಯಾರೂ ಅಲ್ಲ, ಸ್ವತಃ ಆಕೆಯ ಪತಿ ಮತ್ತು ಚೀನಾ ಉದ್ಯಮಿಯಾಗಿರುವ ಕಾಂಗ್ ವೀ (Kang Wei).

Also Read
ನನ್ನ ಹೆಂಡ್ತಿಗೆ ಮೋಸ ಮಾಡಿದೆ...ಚೀನಾದ ಸ್ಪೈ ಜತೆ ಅಕ್ರಮ ಸಂಬಂಧ, ತಪ್ಪೊಪ್ಪಿಕೊಂಡು ಕಣ್ಣೀರಿಟ್ಟ Nvidia ಸಿಇಒ! Jensen Huang
Jensen Huang

ಕಳೆದ ಸುಮಾರು 10 ವರ್ಷಗಳಿಂದ ಜೆನ್ಸೆನ್ ಹುವಾಂಗ್ ಅವರೊಂದಿಗೆ ವ್ಯಾಪಾರ ಸಂಬಂಧ ಹೊಂದಿದ್ದ ಕಾಂಗ್ ವೀ ಅವರಿಗೆ ತಮ್ಮ ಪತ್ನಿ ಮತ್ತು ಜೆನ್ಸೆನ್ ನಡುವಿನ ಆತ್ಮೀಯತೆಯ ಬಗ್ಗೆ ಸಂಪೂರ್ಣ ಅರಿವಿತ್ತು ಎನ್ನಲಾಗಿದೆ. ಅಷ್ಟೇ ಅಲ್ಲದೆ, ಈ ವಿಷಯವನ್ನು ಅವರು ತಮ್ಮ ಪರಿಚಿತರ ಬಳಿ ಮುಕ್ತವಾಗಿ ಹೇಳಿಕೊಳ್ಳುತ್ತಿದ್ದರು ಮತ್ತು ಆಲಿಸ್ ಅವರನ್ನು ಜೆನ್ಸೆನ್ ಅವರ 'ಪರ್ಸನಲ್ ಅಸಿಸ್ಟೆಂಟ್' ಎಂದು ತಮಾಷೆ ಮಾಡುತ್ತಿದ್ದರು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಇದರ ನಡುವೆ, ಜೆನ್ಸೆನ್ ಹುವಾಂಗ್ ಮತ್ತು ಆಲಿಸ್ ನಡುವಿನ ಈ ಸಂಬಂಧವು ಕೇವಲ ವೈಯಕ್ತಿಕ ವಿಚಾರವಾಗಿ ಉಳಿಯದೆ ಅಂತಾರಾಷ್ಟ್ರೀಯ ಭದ್ರತಾ ತನಿಖೆಗೆ ಕಾರಣವಾಗಿದೆ. ಅಮೆರಿಕ, ಸಿಂಗಾಪುರ ಮತ್ತು ತೈವಾನ್ ದೇಶಗಳ ತನಿಖಾ ಸಂಸ್ಥೆಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತೀವ್ರ ತನಿಖೆ ನಡೆಸುತ್ತಿವೆ.

ಎನ್ವಿಡಿಯಾದ ಅತ್ಯಾಧುನಿಕ ಎಐ ಚಿಪ್‌ಗಳನ್ನು ಅಕ್ರಮವಾಗಿ ಚೀನಾಕ್ಕೆ ಸಾಗಿಸಲು ಮತ್ತು ಚೀನಾ ಪರವಾಗಿ ಬೇಹುಗಾರಿಕೆ ನಡೆಸಲು ಆಲಿಸ್ ಈ ಸಂಬಂಧವನ್ನು ಬಳಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಚೀನಾದ ಗುಪ್ತಚರ ಸಂಸ್ಥೆಗಳು ತಮ್ಮ ಪರವಾಗಿ ಕೆಲಸ ಮಾಡಲು ಮತ್ತು ರಹಸ್ಯ ಮಾಹಿತಿ ಕಲೆಹಾಕಲು ಆಲಿಸ್ ಅವರನ್ನು ನೇಮಿಸಿಕೊಂಡಿರಬಹುದು ಎಂದು ಅಮೆರಿಕದ ಅಧಿಕಾರಿಗಳು ಬಲವಾಗಿ ಶಂಕಿಸಿದ್ದಾರೆ.

Also Read
ಎನ್‌ವಿಡಿಯಾ ಸಿಇಒ ಜೆನ್ಸೆನ್ ಹುವಾಂಗ್​ಗೆ ಹನಿಟ್ರ್ಯಾಪ್:​ ಟೆಕ್​ ಲೋಕದಲ್ಲಿ ಸದ್ದು ಮಾಡುತ್ತಿರುವ ಈ ಚೀನಿ ಬೆಡಗಿ ಯಾರು? Alice Huang
Jensen Huang

ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ, ಕಳೆದ ಭಾನುವಾರ ಜೆನ್ಸನ್ ಹುವಾಂಗ್ ಅವರು ತಮ್ಮ ಕಂಪನಿಯ ಉದ್ಯೋಗಿಗಳಿಗೆ ಬರೆದ ಪತ್ರದಲ್ಲಿ ತಮ್ಮ ಪತ್ನಿಗೆ ದ್ರೋಹ ಬಗೆದಿರುವುದಾಗಿ ಮತ್ತು ವಿವಾಹೇತರ ಸಂಬಂಧ ಹೊಂದಿದ್ದಾಗಿ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ತಮ್ಮ ಕುಟುಂಬ ಹಾಗೂ ಉದ್ಯೋಗಿಗಳ ನಂಬಿಕೆಯನ್ನು ಮುರಿದಿದ್ದಕ್ಕಾಗಿ ಅವರು ಕ್ಷಮೆಯಾಚಿಸಿದ್ದಾರೆ. ಈ ಬೆಳವಣಿಗೆಗಳಿಂದಾಗಿ ಎನ್ವಿಡಿಯಾ ಕಂಪನಿಯ ಪ್ರತಿಷ್ಠೆಗೆ ಭಾರಿ ಧಕ್ಕೆಯಾಗಿದ್ದು, ಕಂಪನಿಯ ಆಡಳಿತ ಮಂಡಳಿಯು ಜೆನ್ಸೆನ್ ಹುವಾಂಗ್ ಅವರನ್ನು ಸಿಇಒ ಹುದ್ದೆಯಿಂದ ವಜಾಗೊಳಿಸುವ ಕುರಿತು ಗಂಭೀರ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ.

ಮತ್ತೊಂದೆಡೆ, ಅಮೆರಿಕದ ರಫ್ತು ನಿರ್ಬಂಧಗಳನ್ನು ಉಲ್ಲಂಘಿಸಿ ಎನ್ವಿಡಿಯಾ ಚಿಪ್‌ಗಳನ್ನು ಚೀನಾಕ್ಕೆ ರವಾನಿಸಲಾಗಿದೆ ಎಂಬ ಆರೋಪದ ಮೇಲೆ ಸಿಂಗಾಪುರ ಮೂಲದ ಕ್ಲೌಡ್ ಸೇವಾ ಕಂಪನಿ 'ಮೆಗಾಸ್ಪೀಡ್' (Megaspeed) ಮೇಲೂ ಅಮೆರಿಕ ಮತ್ತು ಸಿಂಗಾಪುರ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಎನ್ವಿಡಿಯಾ ಚಿಪ್‌ಗಳನ್ನು ಹೊಂದಿರುವ ಸರ್ವರ್‌ಗಳನ್ನು ಮೆಗಾಸ್ಪೀಡ್ ಕಂಪನಿಯು ಬೇರೆ ಮಾರ್ಗಗಳ ಮೂಲಕ ಚೀನಾಕ್ಕೆ ಕಳುಹಿಸಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಇದೇ ವೇಳೆ, ತೈವಾನ್ ಅಧಿಕಾರಿಗಳು ಆಲಿಸ್ ಹುವಾಂಗ್ ಅವರ ಪ್ರವೇಶ ಪರವಾನಗಿಯನ್ನು ರದ್ದುಗೊಳಿಸಿ ದೇಶಕ್ಕೆ ಬರದಂತೆ ನಿಷೇಧ ಹೇರಿದ್ದಾರೆ. ಆಲಿಸ್ ತೈವಾನ್‌ನಲ್ಲಿ ಹಲವು ಬಾರಿ ಜೆನ್ಸೆನ್ ಅವರನ್ನು ಭೇಟಿಯಾಗಿದ್ದು, ಆ ಸಮಯದಲ್ಲಿ ಅವರು ಬೇಹುಗಾರಿಕೆ ಚಟುವಟಿಕೆಗಳಲ್ಲಿ ತೊಡಗಿದ್ದರೇ ಮತ್ತು ದೇಶದ ಒಳನುಸುಳುವಿಕೆ ವಿರೋಧಿ ಕಾನೂನನ್ನು (Anti-infiltration law) ಉಲ್ಲಂಘಿಸಿದ್ದಾರೆಯೇ ಎಂಬ ಬಗ್ಗೆ ತೈವಾನ್ ತನಿಖೆ ನಡೆಸುತ್ತಿದೆ.

Also Read
ಸ್ಪೈ ಅನ್ನೋದೇ ಶುದ್ಧ ಸುಳ್ಳು! ಎನ್‌ವಿಡಿಯಾ ಸಿಇಒ ಜೆನ್ಸೆನ್ ಹುವಾಂಗ್​ಗೆ ಹನಿಟ್ರ್ಯಾಪ್ ಆರೋಪಕ್ಕೆ ಚೀನಾ ಕಿಡಿ | Nvidia Boss
Jensen Huang

ಇದಕ್ಕೂ ಮುನ್ನ, 2025ರ ಬೇಸಿಗೆಯಲ್ಲಿ ಸಿಂಗಾಪುರ ಅಧಿಕಾರಿಗಳು ಆಲಿಸ್ ಅವರನ್ನು ವಶಕ್ಕೆ ಪಡೆದು ದೇಶ ಬಿಟ್ಟು ಹೋಗದಂತೆ ನಿರ್ಬಂಧ ವಿಧಿಸಿದ್ದರು ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ನಂತರ ಆಕೆಯ ಮೇಲಿನ ಪ್ರಯಾಣ ನಿರ್ಬಂಧಗಳನ್ನು ಸಡಿಲಿಸಲಾಗಿದ್ದು, ಈ ವರ್ಷದ ಆರಂಭದಲ್ಲಿ ಆಕೆ ಚೀನಾದಲ್ಲಿ ಕಾಣಿಸಿಕೊಂಡಿದ್ದರು ಎನ್ನಲಾಗಿದೆ. ಸದ್ಯ ಮೆಗಾಸ್ಪೀಡ್ ಕಂಪನಿಯ ವ್ಯವಹಾರಗಳ ಕುರಿತು ತನಿಖೆ ಮುಂದುವರಿದಿದೆ ಎಂದು ಸಿಂಗಾಪುರ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ, (ಏಜೆನ್ಸೀಸ್​).