2026ರಲ್ಲಿ ಏನೆಲ್ಲ ನಡೆಯಲಿದೆ? ಬಾಬಾ ವಂಗಾರ ಭಯಾನಕ ಭವಿಷ್ಯವಾಣಿಗಳು ಹೀಗಿವೆ ನೋಡಿ...Baba Vanga

ಬಾಬಾ ವಂಗಾರ ಭಯಾನಕ ಭವಿಷ್ಯವಾಣಿಗಳು
ಬಾಬಾ ವಂಗಾರ ಭಯಾನಕ ಭವಿಷ್ಯವಾಣಿಗಳು
Published on

ಪ್ರಮುಖ ಮುಖ್ಯಾಂಶಗಳು

  • ಬಲ್ಗೇರಿಯನ್​ನ ನಿಗೂಢ ಮಹಿಳೆ, ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ಖ್ಯಾತಿ ಪಡೆದಿರುವ ಬಾಬಾ ವಂಗಾ
  • ಹೊಸ ವರ್ಷಕ್ಕೆ ಒಂದು ತಿಂಗಳು ಬಾಕಿ ಇದ್ದು ಬಾಬಾ ವಂಗಾರ ಭವಿಷ್ಯವಾಣಿಗಳು ಮತ್ತೆ ಮುನ್ನಲೆಗೆ ಬಂದಿವೆ
  • ಬಾಬಾ ವಂಗಾ ಅವರ ಭವಿಷ್ಯವಾಣಿಗಳು ಶೇಕಡ 85ರಷ್ಟು ನಿಜವಾಗಿವೆ ಎಂದು ಹೇಳಲಾಗುತ್ತಿದೆ
Baba Vanga : ಬಲ್ಗೇರಿಯನ್​ನ ನಿಗೂಢ ಮಹಿಳೆ, ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ಖ್ಯಾತಿ ಪಡೆದಿರುವ ಬಾಬಾ ವಂಗಾ ಅವರ ಭವಿಷ್ಯವಾಣಿಗಳು ಪ್ರತಿ ವರ್ಷವೂ ಸಾಕಷ್ಟು ಸದ್ದು ಮಾಡುತ್ತಿರುತ್ತವೆ. 2025ನೇ ವರ್ಷದಲ್ಲೂ ಬಾಬಾ ವಂಗಾರ ಕೆಲ ಭವಿಷ್ಯಗಳು ನಿಜವಾದವು. ಇದೀಗ 2026ನೇ ಹೊಸ ವರ್ಷಕ್ಕೆ ಕೇವಲ ಒಂದು ತಿಂಗಳು ಬಾಕಿ ಇದ್ದು, ಬಾಬಾ ವಂಗಾರ ಭವಿಷ್ಯವಾಣಿಗಳು ಮತ್ತೆ ಮುನ್ನಲೆಗೆ ಬಂದಿವೆ. ಅವರ ಪ್ರಕಾರ, ಮುಂದಿನ ವರ್ಷದಲ್ಲಿ ಏನೆಲ್ಲ ಆಗಲಿದೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ಯಾರೀ ಬಾಬಾ ವಂಗಾ?

ವರದಿಗಳ ಪ್ರಕಾರ, ಬಾಬಾ ವಂಗಾ ಅವರು 1911ರಲ್ಲಿ ಉತ್ತರ ಮ್ಯಾಸಿಡೋನಿಯಾದ ಸ್ಟ್ರುಮಿಕಾದಲ್ಲಿ ಜನಿಸಿದರು. ಅವರ ಮೂಲ ಹೆಸರು ವಾಂಜೆಲಿಯಾ ಪಾಂಡೆವಾ ಡಿಮಿಟ್ರೋವಾ ಎಂದು. ತಮ್ಮ 12ನೇ ವಯಸ್ಸಿನಲ್ಲಿ ಭಾರೀ ಚಂಡಮಾರುತದ ಸಮಯದಲ್ಲಿ ನಿಗೂಢವಾಗಿ ದೃಷ್ಟಿ ಕಳೆದುಕೊಂಡರಂತೆ. 1996ರಲ್ಲಿ ಮೃತಪಟ್ಟಿರುವ ಬಾಬಾ ವಂಗಾ 5079ನೇ ಇಸವಿಯವರೆಗೂ ಏನೇನಾಗಲಿದೆ ಎನ್ನುವುದನ್ನು ಕಂಡು ಕೊಂಡಿದ್ದಾಗಿ ಹೇಳಿದ್ದು, ಅದನ್ನು ಸಮಾಜಕ್ಕೆ ತಿಳಿಸಿಯೇ ಕೊನೆಯುಸಿರೆಳೆದಿದ್ದರು ಎಂದು ಹೇಳಲಾಗಿದೆ.

ಅನೇಕ ಭವಿಷ್ಯಗಳು ನಿಜವಾಗಿವೆ

ಉಗ್ರರು ಅಮೆರಿಕದ ಮೇಲೆ ನಡೆಸಿದ ದಾಳಿ (9/11), ಚೆರ್ನೋಬಿಲ್‌ ದುರಂತ, ಪ್ರಿನ್ಸೆಸ್ ಡಯಾನಾ ಸಾವು, 2004ರ ಥಾಯ್ಲೆಂಡ್‌ ಸುನಾಮಿ, ಬರಾಕ್‌ ಒಬಾಮಾ ಅಧ್ಯಕ್ಷ ಪಟ್ಟಕ್ಕೇರುವುದು…ಇಂಥ ನೂರಾರು ಘಟನೆಗಳ ಕುರಿತು ಹಲವು ದಶಕಗಳ ಮುಂಚೆಯೇ ನುಡಿದಿದ್ದರು ಇವರು. ಅಷ್ಟೇ ಏಕೆ ಮಹಾಮಾರಿ ಕರೊನಾ ವೈರಸ್​ ಕುರಿತು ಅವರು ಮಾಹಿತಿ ನೀಡಿದ್ದರು ಎನ್ನಲಾಗಿದೆ. 15ನೇ ಶತಮಾನದ ಜ್ಯೋತಿಷಿ ನಾಸ್ಟ್ರಾಡಮಸ್‌ಗೆ ಬಾಬಾ ವಂಗಾ ಅವರನ್ನು ಹೋಲಿಕೆ ಮಾಡಲಾಗುತ್ತದೆ. ಅವರ ಭವಿಷ್ಯವಾಣಿಗಳು ಶೇಕಡ 85ರಷ್ಟು ನಿಖರ ಎನ್ನಲಾಗುತ್ತಿದೆ.

2026ರ ಭವಿಷ್ಯವಾಣಿಗಳು ಏನು?

* ಬಾಬಾ ವಂಗಾ ಅವರ ಪ್ರಕಾರ, ಮುಂಬರುವ ಹೊಸ ವರ್ಷದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಮಾನವ ಜೀವನದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಎಐ ಜನರ ಜೀವನೋಪಾಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದಿಷ್ಟೇ ಅಲ್ಲದೆ, ಮಾನವ ನಿರ್ಧಾರಗಳ ಮೇಲೆ ಹಿಡಿತ ಸಾಧಿಸಿ, ಉದ್ಯಮಗಳು ಮತ್ತು ದೈನಂದಿನ ಜೀವನವನ್ನು ನಿಯಂತ್ರಿಸುತ್ತದೆ. ಇದು ಮಾನವೀಯತೆಗೆ ಅಪಾಯವನ್ನು ತರುತ್ತದೆ.
* ಬಾಬಾ ವಂಗಾ ಹೇಳಿದಂತೆ ರಷ್ಯಾದಲ್ಲಿ ಹೊಸ ನಾಯಕ ಹೊರಹೊಮ್ಮುತ್ತಾನೆ. ಆ ನಾಯಕನನ್ನು ಜನರು ವಿಶ್ವ ನಾಯಕ ಎಂದು ಆಚರಿಸುತ್ತಾರಂತೆ. ಆತ ಅಂತಾರಾಷ್ಟ್ರೀಯ ಶಕ್ತಿ ಸಮೀಕರಣವನ್ನು ಬದಲಾಯಿಸುತ್ತಾನೆ ಎಂದು ಬಾಂಬಾ ವಂಗಾ ಭವಿಷ್ಯ ನುಡಿದಿದ್ದಾರೆ.
* ಜಗತ್ತಿನಲ್ಲಿ ಉಂಟಾಗುವ ತಾಂತ್ರಿಕ ಅಡಚಣೆಗಳು ಮತ್ತು ರಾಜಕೀಯ ಬಿಕ್ಕಟ್ಟುಗಳು ಸಮಾಜದಲ್ಲಿ ಅಶಾಂತಿಯನ್ನು ಉಂಟುಮಾಡುತ್ತವೆ. ಇದರಿಂದ ಜನಸಂಖ್ಯೆಯ ಮಹಾ ಸ್ಥಳಾಂತರ, ಸಾಮಾಜಿಕ ಅಸ್ಥಿರತೆ ಮತ್ತು ಸಮಾಜದ ಪರಿವರ್ತನೆಯಾಗಲಿದೆ.
* ಭೂಕಂಪಗಳು, ಅಗ್ನಿಪರ್ವತ ಸ್ಫೋಟಗಳು ಮತ್ತು ಅತ್ಯಂತ ಹವಾಮಾನ ಬದಲಾವಣೆಗಳು ಭೂಮಿಯ ಶೇ. 7 ರಿಂದ 8 ರಷ್ಟು ಪ್ರದೇಶವನ್ನು ನಾಶ ಮಾಡುತ್ತವೆ.
* 2026ರ ನವೆಂಬರ್ ತಿಂಗಳಲ್ಲಿ ಒಂದು ದೊಡ್ಡ ಅನ್ಯಗ್ರಹ ವಾಹನ ಭೂಮಿಯ ವಾತಾವರಣಕ್ಕೆ ಪ್ರವೇಶಿಸಲಿದೆ. ಇದರಿಂದ ಅನ್ಯಗ್ರಹ ಜೀವಿಗಳೊಂದಿಗೆ ಸಂಪರ್ಕ ಸಾಧ್ಯತೆ ಇದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ.
* ಬ್ಯಾಂಕ್ ಸಂಸ್ಥೆಗಳ ಕುಸಿತ, ಬೆಲೆ ಏರಿಕೆ ಮತ್ತು ಹಣಕಾಸು ವ್ಯವಸ್ಥೆಯು ತೀವ್ರ ಸಂಕಷ್ಟ ಎದುರಿಸಲಿದೆ. ಚಿನ್ನದ ಬೆಲೆಯು ಅಸಾಧಾರಣವಾಗಿ ಏರಿದ ನಂತರ ಕುಸಿಯಬಹುದು ಎಂದು ಬಾಬಾ ವಂಗಾ ಹೇಳಿದ್ದಾರೆ.
* ಲ್ಯಾಬ್‌ನಲ್ಲಿ ಬೆಳೆಸಿದ ಅಂಗಗಳು ಮತ್ತು ಜೀನ್ ಚಿಕಿತ್ಸೆ ಹಾಗೂ ನ್ಯೂರೋ ಟೆಕ್ನಾಲಜಿಯಲ್ಲಿ ಸಾಕಷ್ಟು ಪ್ರಗತಿ ಕಾಣಲಿದೆ.

5079ರಲ್ಲಿ ಬ್ರಹ್ಮಾಂಡವು ಕೊನೆಗೊಳ್ಳುತ್ತದೆ

ಇಡೀ ಜಗತ್ತಿನ ನೂರಾರು ವರ್ಷಗಳ ಹಾಗುಹೋಗುಗಳ ಬಗೆಗೆ ಭವಿಷ್ಯ ನುಡಿದಿರುವ ಬಾಗಾ ವಂಗಾ ಪ್ರಕಾರ, 5079ಕ್ಕೆ ಜಗತ್ತು ಕೊನೆಯಾಗುತ್ತದೆ. 2028ರಲ್ಲಿ ಮಾನವರು ಶುಕ್ರವನ್ನು ಭೇಟಿ ಮಾಡುತ್ತಾರೆ, 2033ರಲ್ಲಿ ಧ್ರುವೀಯ ಮಂಜುಗಡ್ಡೆಗಳು ಕರಗಿ, ಜಾಗತಿಕವಾಗಿ ಸಮುದ್ರ ಮಟ್ಟವು ವೇಗವಾಗಿ ಏರುತ್ತೆ, ಮುಸ್ಲಿಮರು 2043 ರಲ್ಲಿ ಯುರೋಪ್ ಅನ್ನು ಆಳುತ್ತಾರೆ, 2076ರಲ್ಲಿ ಕಮ್ಯುನಿಸಂ ಪ್ರಪಂಚದಾದ್ಯಂತ ಹರಡುತ್ತದೆ, 2130ರಲ್ಲಿ ಮಾನವರು ಅನ್ಯಗ್ರಹ ಜೀವಿಗಳೊಂದಿಗೆ ಸಂಪರ್ಕ ಹೊಂದುತ್ತಾರೆ, 2170ರಲ್ಲಿ ಭೂಮಿಯ ಬಹುತೇಕ ಭಾಗಗಳಲ್ಲಿ ಬರ ಉಂಟಾಗುತ್ತದೆ, 3005ರಲ್ಲಿ ಭೂಮಿಯು ಮಂಗಳದ ನಾಗರಿಕತೆಯೊಂದಿಗೆ ಯುದ್ಧದಲ್ಲಿ ತೊಡಗುತ್ತದೆ, 3797ರಲ್ಲಿ ವಾಸಯೋಗ್ಯವಲ್ಲದ ಕಾರಣ ಮಾನವರು ಭೂಮಿಯಿಂದ ಸ್ಥಳಾಂತರವಾಗುತ್ತಾರೆ ಮತ್ತು 5079 ರಲ್ಲಿ ಬ್ರಹ್ಮಾಂಡವು ಕೊನೆಗೊಳ್ಳುತ್ತದೆ ಎಂದು ಬಾಂಬಾ ವಂಗಾರ ಭವಿಷ್ಯದ ಭವಿಷ್ಯವಾಣಿಗಳಾಗಿವೆ.
ಅಂದಹಾಗೆ, ಈ ಭವಿಷ್ಯವಾಣಿಗಳು ಬಾಬಾ ವಂಗಾ ಅವರ ಅನುಯಾಯಿಗಳಿಂದ ವ್ಯಾಖ್ಯಾನಿಸಲ್ಪಟ್ಟಿವೆ ಹೊರತು ಅದಕ್ಕೆ ನಿಖರ ದಾಖಲೆಗಳು ಇಲ್ಲ. ಹೀಗಾಗಿ ಈ ಭವಿಷ್ಯವಾಣಿಗಳನ್ನು ಕೇವಲ ಮನರಂಜನೆಯಾಗಿ ಅಥವಾ ಚಿಂತನೆಗೆ ಒಳಪಡಿಸಿ ನೋಡಿ. ಯಾವುದೇ ಕಾರಣಕ್ಕೂ ವೈಜ್ಞಾನಿಕವಾಗಿ ನಂಬಬೇಡಿ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net