ಇರಾನ್ನ ಸವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿಯನ್ನು ಹತ್ಯೆ ಮಾಡಿದ ಬಳಿಕ ಅಮೆರಿಕ ಇನ್ನೇನು ಯುದ್ಧವೇ ಮುಗಿಯಿತು ಎಂದು ಭಾವಿಸಿತ್ತು. ಆದರೆ, ಖಮೇನಿ ಹತರಾದ ಬಳಿಕ ಇರಾನ್ ಮತ್ತಷ್ಟು ಆಕ್ರಮಕವಾಗಿ ಅಮೆರಿಕವನ್ನು ಎದುರಿಸುತ್ತಿದ್ದು, ಅದರ ಸೇನಾನೆಲೆಗಳ ಮೇಲೆ ದಾಳಿ ನಡೆಸುತ್ತಿದೆ. ಇದಕ್ಕೆ ಮುಖ್ಯ ಕಾರಣ ಇರಾನ್ನ ರಣನೀತಿ ಮತ್ತು ಅದರ ಹಿಂದಿರುವ ವ್ಯಕ್ತಿ ಮೊಹಮ್ಮದ್ ಅಲಿ ಜಾಫರಿ. ಇರಾನ್ ಸೇನೆ ಸಮರಕ್ಕೆ ಭಾರಿ ಸಿದ್ಧತೆ ಮಾಡಿಕೊಂಡಿದ್ದು, ಯಾವುದೇ ವಿಭಾಗದ ಮುಖ್ಯಸ್ಥ ಯುದ್ಧದಲ್ಲಿ ಹತನಾದರೂ, ಅವರ ಜಾಗಕ್ಕೆ ನಾಲ್ವರು ಉತ್ತರಾಧಿಕಾರಿಗಳನ್ನು ಸಿದ್ಧಪಡಿಸಿದೆ. ಹೀಗಾಗಿ, ಇನ್ನೂ ಹಲವು ವಾರಗಳವರೆಗೆ ಯುದ್ಧ ನಡೆದರೂ ಇರಾನ್ ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಕಾದಾಡಲು ಸಜ್ಜಾಗಿದೆ. ಈ ಎಲ್ಲ ವಿದ್ಯಮಾನದ ವಿವರ ಇಲ್ಲಿದೆ.