ಏನಿದು ಚೈನಾಮ್ಯಾಕ್ಸಿಂಗ್? ಬೀಜಿಂಗ್ ಸ್ಟೈಲ್‌ಗೆ ಅಮೆರಿಕದ ಜೆನ್-ಝಡ್ ಫಿದಾ ಆಗಿದ್ದೇಕೆ! China maxxing

China maxxing (ಚಿತ್ರ Instagram)
China maxxing (ಚಿತ್ರ Instagram)
Published on
ಚೀನಾ: ಚೀನಾ ದೇಶದ ಸಂಸ್ಕೃತಿ, ಆಹಾರ ಮತ್ತು ಸೌಂದರ್ಯವರ್ಧಕ ವಿಧಾನಗಳು ಇಂದು ಜಾಗತಿಕವಾಗಿ, ಅದರಲ್ಲೂ ವಿಶೇಷವಾಗಿ ಅಮೆರಿಕದ ಯುವಜನತೆಯಲ್ಲಿ (China maxxing) ಹೊಸ ಸಂಚಲನ ಮೂಡಿಸುತ್ತಿವೆ. ಜಪಾನಿನ 'ಮಚ್ಚಾ' ಟೀ ಮತ್ತು ಕೊರಿಯನ್ 'ಗ್ಲಾಸ್ ಸ್ಕಿನ್' ಚರ್ಮದ ಆರೈಕೆಯ ಗೀಳು ಜಗತ್ತಿನಾದ್ಯಂತ ಹರಡಿದ್ದರೂ, ಈಗ ಇಂಟರ್ನೆಟ್ ಲೋಕವು ಚೈನೀಸ್ ಸಂಸ್ಕೃತಿಯ ಕಡೆಗೆ ಹೆಚ್ಚು ಆಕರ್ಷಿತವಾಗುತ್ತಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ವಿಡಿಯೋಗಳಲ್ಲಿ ಜನರಲ್​ ಝಡ್​ ತಲೆಮಾರಿನ ಯುವಕ ಯುವತಿಯರು ತಂಪು ಪಾನೀಯಗಳ ಬದಲಿಗೆ ಕೈಯಲ್ಲಿ ಥರ್ಮಸ್ ಹಿಡಿದು ಬಿಸಿನೀರು ಹೀರುತ್ತಾ ಕಾಣಿಸಿಕೊಳ್ಳುತ್ತಿದ್ದಾರೆ. ಅಡುಗೆ ಮನೆಯಲ್ಲಿ ತೈಚಿ ಅಭ್ಯಾಸ ಮಾಡುತ್ತಿದ್ದಾರೆ. ಜೊತೆಗೆ ಮನೆಯ ಸುತ್ತಲೂ ಚಪ್ಪಲಿಗಳಲ್ಲಿ ಓಡಾಡುತ್ತಾ, ಅಡಿಡಾಸ್​ ಟ್ರಾಕ್​ ಸೂಟ್​ಗಳನ್ನು ಧರಿಸುತ್ತಿದ್ದಾರೆ. ಇದು ಅವರು ಚೀನೀಯರಾಗಿ ಪರಿವರ್ತನೆಗೊಳ್ಳುತ್ತಿರುವುದನ್ನು ತೋರಿಸುತ್ತದೆ.

ಚೀನೀ ಸಂಸ್ಕೃತಿ ಮತ್ತು ಜೀವನಶೈಲಿ ವೈರಲ್​ ಆಗಲು ಕಾರಣವೇನು?

ಸಾಮಾಜಿಕ ಮಾಧ್ಯಮದಲ್ಲಿ "ಚೈನಾಮ್ಯಾಕ್ಸಿಂಗ್" ಟ್ರೆಂಡಿಂಗ್ ಆಗುತ್ತಿರುವುದು ಅಚ್ಚರಿಯೇನಲ್ಲ. ಇದು ನಿಧಾನಗತಿಯ ಜೀವನಕ್ಕೆ ಆದ್ಯತೆ ನೀಡುವ ಸಂಸ್ಕೃತಿ ಮತ್ತು ಜೀವನಶೈಲಿಯನ್ನು ಒತ್ತಿಹೇಳುತ್ತದೆ.
ಜನರೇಷನ್ ಝಡ್ ಯುವಕರು ಅವರಸದ ಜೀವನಶೈಲಿಯನ್ನು ವಿರೋಧಿಸುತ್ತಾರೆ. ಒಂದು ಕಾಲದಲ್ಲಿ ವಿಶ್ರಾಂತಿ ಇಲ್ಲದಿರುವ ಜೀವನವನ್ನುನಡೆಸಲು ಬಯಸುತ್ತಿದ್ದರು. ಆದರೆ, ಇಂದಿನ ದಿನಗಳಲ್ಲಿ ಚೀನಿ ಸಂಸ್ಕೃತಿ ಮತ್ತು ಜೀವನಶೈಲಿ ಸಂಪೂರ್ಣವಾಗಿ ಅದರ ವಿರುದ್ಧವಾಗಿದ್ದು, ಇಲ್ಲಿ ಬರೀ ಶಾಂತಿ ಮತ್ತು ಹೆಚ್ಚು ಉದ್ದೇಶಪೂರ್ವಕ ಆಚರಣೆಗಳನ್ನು ಅಳವಡಿಸಿಕೊಂಡಿದ್ದಾರೆ.
ಈ ವರ್ಷದ ಆರಂಭದಲ್ಲಿ ಚೀನೀ-ಅಮೇರಿಕನ್ ಸೃಷ್ಟಿಕರ್ತೆ ಶೆರ್ರಿ ಝು ಅವರು ತಮ್ಮ ಮನೆಯಲ್ಲಿ ಅನುಸರಿಸಿದ ಅಭ್ಯಾಸಗಳ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಗ ಈ ಪ್ರವೃತ್ತಿ ಜನಪ್ರಿಯವಾಯಿತು. ಇದರಲ್ಲಿ ದೇಹಕ್ಕೆ ಪೋಷಣೆ ನೀಡುವ ಆಹಾರಗಳು ಮತ್ತು ಆರೋಗ್ಯಕರ ಮಿಶ್ರಣದ ಪಾನೀಯಗಳನ್ನು ಕುಡಿಯುವುದನ್ನು ನೋಡಬಹುದಾಗಿತ್ತು. ಇಂತಹ ವಿಡಿಯೋಗಳು ಜನರನ್ನು ಚೀನೀ ವಿಧಾನಗಳ ಬಗ್ಗೆ ಇರುವ ಆಸಕ್ತಿಯನ್ನು ಹೆಚ್ಚಿಸಿತು.

ಚೀನೀ ಯುಗವನ್ನು ನೀವು ಹೇಗೆ ಪ್ರವೇಶಿಸುತ್ತೀರಿ?

ಬಿಸಿನೀರು ಕುಡಿಯುವುದು, ಮನೆಯಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡುವುದು ಅಥವಾ ಅಡುಗೆಮನೆಯಲ್ಲಿ ತೈ ಚಿ ಮಾಡುವುದಷ್ಟೇ ಅಲ್ಲ, ಯುವಜನತೆ ತಮ್ಮ ಬೆಳಗಿನ ದಿನಚರಿಯ ಭಾಗವಾಗಿ ಸಾಂಪ್ರದಾಯಿಕ ಚೀನೀ ವ್ಯಾಯಾಮಗಳನ್ನು ಮಾಡುವ ವೀಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಸಿ ಸೌಂದರ್ಯಶಾಸ್ತ್ರದ ಸ್ವಾಧೀನ

ಕಳೆದ ಕೆಲವು ವರ್ಷಗಳಿಂದ ಮಹಿಳೆಯರು ಹೊಳೆಯುವ ಚರ್ಮಕ್ಕಾಗಿ ಹತ್ತಾರು ಕ್ರೀಮ್‌ಗಳು ಮತ್ತು ಸೀರಮ್‌ಗಳನ್ನು ಬಳಸುತ್ತಿದ್ದರು. ಆದರೆ ಈಗಿನ ಹೊಸ ಟ್ರೆಂಡ್ ಪ್ರಕಾರ, ಅತಿಯಾದ ರಾಸಾಯನಿಕ ಬಳಕೆಗಿಂತ ಚರ್ಮದ ಆಂತರಿಕ ಆರೋಗ್ಯ ಮತ್ತು ನೈಸರ್ಗಿಕ ರೂಪಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಹಾಗಾಗಿ ಕ್ರೀಮ್​ಗಳ ಮೇಲೆ ಮೊರೆ ಹೋಗುವ ಬದಲಿಗೆ ಚೈನೀಸ್ ​ಮೂಲದ 'ಗುವಾ ಶಾ' ನಂತಹ ಕಲ್ಲುಗಳ ಮೊರೆ ಹೋಗುತ್ತಿದ್ದಾರೆ.
ಒಂದು ಕಾಲದಲ್ಲಿ "ಗಾಜಿನಂತೆ ಹೊಳೆಯುವ" ಮುಖದ ಮೇಲೆ ಮಾತ್ರ ಗಮನವಿತ್ತು. ಆದರೆ ಈಗಿನ ಜೆನ್-ಝಡ್ ತಲೆಮಾರು ಚರ್ಮದ ವಿನ್ಯಾಸ ಮತ್ತು ಆಂತರಿಕ ಸ್ನಾಯುಗಳ ಆರೋಗ್ಯಕ್ಕೆ ಒತ್ತು ನೀಡುತ್ತಿದೆ. ಅತಿಯಾದ ಲೇಪನಗಳ ಬದಲಿಗೆ ಮುಖಕ್ಕೆ ಆಳವಾದ ಮಸಾಜ್ ನೀಡುವುದು ಮತ್ತು ಚರ್ಮಕ್ಕೆ ಉಸಿರಾಡಲು ಅವಕಾಶ ನೀಡುವುದು ಈಗಿನ 'ಹೈ-ಪರ್ಫಾರ್ಮೆನ್ಸ್' ಸೌಂದರ್ಯ ಸೂತ್ರವಾಗಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net