ಇದನ್ನು ನಾವು ಸಹಿಸಲ್ಲ...ಭಾರತದ ಹಡಗಿನ ಮೇಲೆ ಅಮೆರಿಕ ದಾಳಿ; ವಿದೇಶಾಂಗ ಇಲಾಖೆ ವಕ್ತಾರ ರಣಧೀರ್ ಜೈಸ್ವಾಲ್ ಖಡಕ್ ಎಚ್ಚರಿಕೆ! Randhir Jaiswal warns America
ಅಮೆರಿಕದ ದಾಳಿಯನ್ನು ಖಂಡಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಓಮಾನ್ ಸಮುದ್ರದಲ್ಲಿ ಭಾರತದ ಕಾರ್ಗೊ ಹಡಗಿನ ಮೇಲೆ ಅಮೆರಿಕ ದಾಳಿ
ವೈಮಾನಿಕ ದಾಳಿಗೆ ಮೂವರು ಭಾರತೀಯ ನಾವಿಕರು ಬಲಿ
ಘಟನೆಯನ್ನು ಕಟುವಾಗಿ ಖಂಡಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್
ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಸಂಘರ್ಷ ದಿನಕಳೆದಂತೆ ಹೆಚ್ಚಾಗುತ್ತಿದ್ದು, ಭಾರತದ ಹಡಗಿನ ಮೇಲೆ ಅಮೆರಿಕದ ಪಡೆಗಳು ನಡೆಸಿರುವ ದಾಳಿಯಲ್ಲಿ ಭಾರತದ ನಾವಿಕರು ಸಾವನ್ನಪ್ಪಿದ್ದು, ಈ ಘಟನೆಯನ್ನು ವಿದೇಶಾಂಗ ಸಚಿವಾಲಯ (Randhir Jaiswal warns America) ಕಟುವಾಗಿ ಟೀಕಿಸಿದೆ.
ಓಮಾನ್ ಸಮುದ್ರದಲ್ಲಿದ್ದ ಭಾರತದ ಕಾರ್ಗೊ ಹಡಗಿನ ಮೇಲೆ ಅಮೆರಿಕ ವೈಮಾನಿಕ ದಾಳಿ ನಡೆಸಿದ ಪರಿಣಾಮ ಭಾರತದ ಮೂವರು ನಾವಿಕರು ಸಾವನ್ನಪ್ಪಿದ್ದರು.
ಭಾರತದ ಹಡಗಿನ ಮೇಲೆ ಅಮೆರಿಕದ ದಾಳಿ ಖಂಡಿಸಿರುವ ವಿದೇಶಾಂಗ ಸಚಿವಾಲಯದ ವಕ್ತಾರ, ರಣಧೀರ್ ಜೈಸ್ವಾಲ್ ನಾವು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆವೆ. ಪಶ್ಚಿಮ ಏಷ್ಯಾನಲ್ಲಿ ಭಾರತದ ನಾವಿಕರನ್ನು ಗುರಿಯಾಗಿಸಿ ದಾಳಿ ನಡೆಸಿರುವುದು ನಮ್ಮ ಗಮನಕ್ಕೆ ಬಂದಿದೆ. ನಿನ್ನೆ ಅಮೆರಿಕ ನಮ್ಮ ಕಾರ್ಗೊ ನೌಕೆ ಮೇಲೆ ನಡೆಸಿರುವ ದಾಳಿಯನ್ನು ನಾನು ವಿರೋಧಿಸುತ್ತೆವೆ ಎಂದು ಅವರು ಹೇಳಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಈಡೀ ಜಗತ್ತೆ ತಲ್ಲಣಗೊಂಡಿದೆ. ಸಮಸ್ಯೆ ಏನೇ ಇದ್ದರು ಅದನ್ನು ಶಾಂತಿ, ಮಾತುಕತೆ ಮೂಲಕ ಪರಿಹಾರ ಹುಡುಕಬೇಕೆಂದು ಭಾರತ ಹೇಳುತ್ತದೆ. ಹಾಗೆಯೇ ನಮ್ಮ ಹಡಗಿನ ಮೇಲೆ ನಡೆದ ದಾಳಿ ಬಗ್ಗೆ ಅಮೆರಿಕಕ್ಕೆ ನಾವು ಸಮನ್ಸ್ ನೀಡಿದ್ದು, ಉತ್ತರದ ನೀರಿಕ್ಷೆಯಲ್ಲಿದ್ದೆವೆ ಎಂದು ಹೇಳಿದ್ದಾರೆ.
ಜೂನ್ 10 ಬುಧವಾರ ಭಾರತದ ಕಾರ್ಗೊ ಹಡಗಾದ ಮಾರ್ವಿಎಕ್ಸ್ ಮೇಲೆ ಅಮೆರಿಕ ದಾಳಿ ಮಾಡಿದೆ. ಈ ದಾಳಿಗೆ ಸುಮಾರು 24 ಜನ ನಾವಿಕರು ತುತ್ತಾಗಿದ್ದು, ಮೂರು ಜನ ನಾವಿಕರು ಸಾವನ್ನಪ್ಪಿದ್ದಾರೆ, ಉಳಿದ ನಾವಿಕರನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ, (ಏಜನ್ಸೀಸ್).