ಯಾರಿಗೂ ತಿಳಿಯದ ಅತಿ ಭಯಾನಕ ಆಯುಧಗಳು ನಮ್ಮ ಬಳಿ ಇವೆ: ಡೊನಾಲ್ಡ್ ಟ್ರಂಪ್ ಸ್ಫೋಟಕ ಹೇಳಿಕೆ | Donald Trump

ಯಾರಿಗೂ ತಿಳಿಯದ ಅತಿ ಭಯಾನಕ ಆಯುಧಗಳು ನಮ್ಮ ಬಳಿ ಇವೆ: ಡೊನಾಲ್ಡ್ ಟ್ರಂಪ್ ಸ್ಫೋಟಕ ಹೇಳಿಕೆ
ಯಾರಿಗೂ ತಿಳಿಯದ ಅತಿ ಭಯಾನಕ ಆಯುಧಗಳು ನಮ್ಮ ಬಳಿ ಇವೆ: ಡೊನಾಲ್ಡ್ ಟ್ರಂಪ್ ಸ್ಫೋಟಕ ಹೇಳಿಕೆ
Published on
ನ್ಯೂಯಾರ್ಕ್: ಜಗತ್ತಿನ ಯಾರಿಗೂ ಕಲ್ಪನೆಯೂ ಇಲ್ಲದಂತಹ ಅತ್ಯಾಧುನಿಕ ಮತ್ತು ಭಯಾನಕ ಆಯುಧಗಳು ಅಮೆರಿಕದ ಬಳಿ ಇವೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಹೇಳಿದ್ದಾರೆ. ಅಲ್ಲದೆ, ಶತ್ರು ರಾಷ್ಟ್ರಗಳಿಗೆ ನೇರ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊರ ಬಂಧನದ ಕಾರ್ಯಾಚರಣೆಯ ಕುರಿತು ಮಾತನಾಡುತ್ತಾ ಹೇಳಿದ ಟ್ರಂಪ್​, ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊರನ್ನು ಸೆರೆಹಿಡಿಯಲು ನಡೆಸಲಾದ ಕಾರ್ಯಾಚರಣೆಯು ಅದ್ಭುತ ದಾಳಿ ಎಂದು ಬಣ್ಣಿಸಿದ್ದಾರೆ. ಅಲ್ಲದೆ, ಮಡುರೊ ಅವರು ಇದ್ದ ಮನೆ ಒಂದು ಬೃಹತ್ ಕೋಟೆಯ ಮಧ್ಯಭಾಗದಲ್ಲಿತ್ತು ಎಂಬುದನ್ನು ನೆನಪಿಸಿದ ಟ್ರಂಪ್, ಅಂತಹ ಸುರಕ್ಷಿತ ವಲಯದ ಒಳಗೂ ನುಗ್ಗಿ ಕಾರ್ಯಾಚರಣೆ ನಡೆಸಿರುವುದು ಅಮೆರಿಕದ ಸೈನಿಕ ಶಕ್ತಿಗೆ ಸಾಕ್ಷಿ ಎಂದರು. ಆ ಮನೆ ಒಂದು ಕೋಟೆಯ ಒಳಗಿತ್ತು ಎಂಬುದನ್ನು ಮರೆಯಬೇಡಿ, ಆದರೂ ನಾವು ಅಲ್ಲಿಗೆ ತಲುಪಿದೆವು," ಎಂದು ಟ್ರಂಪ್​ ಹೆಮ್ಮೆಯಿಂದ ತಿಳಿಸಿದ್ದಾರೆ.

ಸೋನಿಕ್ ವೆಪನ್ ರಹಸ್ಯ..?

ಮಡುರೊ ಬಂಧನಕ್ಕೆ ಸೋನಿಕ್ ವೆಪನ್ (ಶಬ್ದ ತರಂಗಗಳ ಆಯುಧ) ಬಳಸಲಾಗಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಟ್ರಂಪ್, ಆಯುಧಗಳ ತಾಂತ್ರಿಕತೆಯ ಬಗ್ಗೆ ಹೆಚ್ಚು ಮಾತನಾಡಲು ನಿರಾಕರಿಸಿದರು. ಅಲ್ಲದೆ, ನಮ್ಮಲ್ಲಿ ಅಂತಹ ಆಯುಧಗಳಿವೆ, ಅದರ ಬಗ್ಗೆ ಜಗತ್ತಿನ ಯಾರಿಗೂ ತಿಳಿದಿಲ್ಲ. ಅವುಗಳ ಬಗ್ಗೆ ಬಹಿರಂಗವಾಗಿ ಮಾತನಾಡುವುದು ಸರಿಯಲ್ಲ ಎಂದು ನಾನು ಭಾವಿಸುತ್ತೇನೆ ಎಂದರು.
ಸೋನಿಕ್ ಆಯುಧಗಳು ಶಬ್ದದ ಅಲೆಗಳ ಮೂಲಕ ಮನುಷ್ಯನ ಮೇಲೆ ಪರಿಣಾಮ ಬೀರಿ, ಅವರನ್ನು ಪ್ರಜ್ಞಾಹೀನರನ್ನಾಗಿ ಮಾಡುವ ಅಥವಾ ದಿಕ್ಕೆಡುವಂತೆ ಮಾಡುವ ಸಾಮರ್ಥ್ಯ ಹೊಂದಿವೆ ಎಂದು ಹೇಳಲಾಗುತ್ತಿದೆ.

ಜಾಗತಿಕ ಮಟ್ಟದಲ್ಲಿ ತಲ್ಲಣ

ಟ್ರಂಪ್​ರ ಈ ಹೇಳಿಕೆಯು ಚೀನಾ, ರಷ್ಯಾ ಮತ್ತು ಇರಾನ್‌ನಂತಹ ದೇಶಗಳಲ್ಲಿ ಆತಂಕ ಮೂಡಿಸಿದೆ. ಅಮೆರಿಕವು ತನ್ನ ಮಿಲಿಟರಿ ತಂತ್ರಜ್ಞಾನದಲ್ಲಿ ಇತರ ದೇಶಗಳಿಗಿಂತ ಹತ್ತಾರು ವರ್ಷಗಳಷ್ಟು ಮುಂದಿದೆ ಎಂಬುದು ಈ ಮೂಲಕ ಸಾಬೀತಾದಂತಾಗಿದೆ. ನಮ್ಮ ಶಕ್ತಿಯ ಬಗ್ಗೆ ನಾವು ಹೆಚ್ಚು ಪ್ರಚಾರ ಮಾಡುವುದಿಲ್ಲ. ಆದರೆ ಸಮಯ ಬಂದಾಗ ಅದನ್ನು ಪ್ರದರ್ಶಿಸುತ್ತೇವೆ ಎಂಬ ಟ್ರಂಪ್ ಸಂದೇಶವು ಶೀತಲ ಸಮರದಂತಹ ವಾತಾವರಣವನ್ನು ಸೃಷ್ಟಿಸಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net