ಪ್ರಜಾಪ್ರಭುತ್ವದ ತಾಯಿಯನ್ನು ಕಳೆದುಕೊಂಡೆವು; ಖಲೀದಾ ಜಿಯಾ ನಿಧನಕ್ಕೆ ಪುತ್ರ ತಾರಿಕ್ ರೆಹಮಾನ್ ಭಾವುಕ ವಿದಾಯ | Tariq Rehman

ಪ್ರಜಾಪ್ರಭುತ್ವದ ತಾಯಿಯನ್ನು ಕಳೆದುಕೊಂಡೆವು; ಖಲೀದಾ ಜಿಯಾ ನಿಧನಕ್ಕೆ ಪುತ್ರ ತಾರಿಕ್ ರೆಹಮಾನ್ ಭಾವುಕ ವಿದಾಯ
ಪ್ರಜಾಪ್ರಭುತ್ವದ ತಾಯಿಯನ್ನು ಕಳೆದುಕೊಂಡೆವು; ಖಲೀದಾ ಜಿಯಾ ನಿಧನಕ್ಕೆ ಪುತ್ರ ತಾರಿಕ್ ರೆಹಮಾನ್ ಭಾವುಕ ವಿದಾಯ
Published on

ಪ್ರಮುಖ ಮುಖ್ಯಾಂಶಗಳು

  • ತಾರಿಕ್ ರೆಹಮಾನ್ ಭಾವುಕ ಸಂದೇಶ
  • ಖಲೀದಾ ಜಿಯಾ ಅವರ ಜೀವನ ಸಾಧನೆ
ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಮತ್ತು ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (BNP) ಅಧ್ಯಕ್ಷೆ ಬೇಗಂ ಖಲೀದಾ ಜಿಯಾ (80) ಅವರ ಸಾವಿಗೆ ಮಗ ತಾರಿಕ್ ರೆಹಮಾನ್(Tariq Rehman) ತೀವ್ರ ದುಖಃ ವ್ಯಕ್ತಪಡಿಸಿದ್ದಾರೆ.
ತಮ್ಮ ತಾಯಿಯ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ, 17 ವರ್ಷಗಳ ದೇಶಭ್ರಷ್ಟ ವಾಸ ಮುಗಿಸಿ ಇತ್ತೀಚೆಗಷ್ಟೇ ಸ್ವದೇಶಕ್ಕೆ ಮರಳಿದ್ದ ಪುತ್ರ ಮತ್ತು ಬಿಎನ್‌ಪಿ ಕಾರ್ಯಾಧ್ಯಕ್ಷ ತಾರಿಕ್ ರೆಹಮಾನ್ ಅವರು ತೀವ್ರ ಭಾವುಕರಾಗಿ ಸೋಶಿಯಲ್ ಮೀಡಿಯಾದಲ್ಲಿ ಸಂದೇಶ ಹಂಚಿಕೊಂಡಿದ್ದಾರೆ. 

ತಾರಿಕ್ ರೆಹಮಾನ್ ಭಾವುಕ ಸಂದೇಶ

ತಾಯಿಯ ನಿಧನದ ಬಗ್ಗೆ ಎಕ್ಸ್​ ಪೋಸ್ಟ್​ ಮಾಡಿರುವ ತಾರಿಕ್ ರೆಹಮಾನ್, ತಮ್ಮ ತಾಯಿಯ ನಿಧನವನ್ನು ದೃಢಪಡಿಸುತ್ತಾ, ಇಸ್ಲಾಮಿಕ್ ಸಂಪ್ರದಾಯದಂತೆ ನಾವೆಲ್ಲರೂ ದೇವರಿಗೆ ಸೇರಿದವರು ಮತ್ತು ಅವನ ಕಡೆಗೆ ಹಿಂತಿರುಗುತ್ತೇವೆ ಎಂದು ಬರೆದಿದ್ದಾರೆ.
ಮುಂದುವರೆದು ಮಾತನಾಡಿದ ತಾರಿಕ್​, ನನ್ನ ತಾಯಿ ಬೇಗಂ ಖಲೀದಾ ಜಿಯಾ ಅವರು ಇಂದು ಸರ್ವಶಕ್ತನಾದ ಅಲ್ಲಾಹನ ಕರೆಗೆ ಓಗೊಟ್ಟು ನಮ್ಮನ್ನು ಬಿಟ್ಟು ಅಗಲಿದ್ದಾರೆ. ಈ ದೇಶದ ಜನರು ತೋರಿಸಿದ ಪ್ರೀತಿ, ಗೌರವ ಮತ್ತು ಭಾವನೆಗಳಿಗೆ ನನ್ನ ಕುಟುಂಬ ಎಂದಿಗೂ ಚಿರಋಣಿಯಾಗಿರುತ್ತದೆ. ನನ್ನ ತಾಯಿಗಾಗಿ ಪ್ರಾರ್ಥಿಸಿ ಎಂದು ನಾನು ನಿಮ್ಮೆಲ್ಲರಲ್ಲಿ ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.
ತಮ್ಮ ತಾಯಿಯನ್ನು ಪ್ರಜಾಪ್ರಭುತ್ವದ ತಾಯಿ ಮತ್ತು ಸಂಧಾನ ಮಾಡಿಕೊಳ್ಳದ ನಾಯಕಿ ಎಂದು ಬಣ್ಣಿಸಿದ್ದಾರೆ. ದೇಶಕ್ಕಾಗಿ ಅವರು ಪತಿ ಜಿಯಾವುರ್ ರೆಹಮಾನ್ ಮತ್ತು ಮಕ್ಕಳನ್ನು ಕಳೆದುಕೊಂಡು ತ್ಯಾಗದ ಜೀವನ ನಡೆಸಿದರು ಎಂದು ತಾರಿಕ್​ ಸ್ಮರಿಸಿದ್ದಾರೆ.

ಕೊನೆಯ ಕ್ಷಣಗಳು

ಖಲೀದಾ ಜಿಯಾ ಅವರು ಯಕೃತ್ತು (Liver), ಮೂತ್ರಪಿಂಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದರು. ನವೆಂಬರ್ 23 ರಿಂದ ಅವರು ಢಾಕಾದ ಎವರ್‌ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಿಗ್ಗೆ 6 ಗಂಟೆಗೆ ಅವರು ಕೊನೆಯುಸಿರೆಳೆದರು.

ರಾಜಕೀಯ ಮಹತ್ವ

80 ವರ್ಷದ ಖಲೀದಾ ಜಿಯಾ ಅವರು ಲಿವರ್ ಸಿರೋಸಿಸ್, ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದರು. 2026ರ ಫೆಬ್ರವರಿಯಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಮತ್ತೆ ಸ್ಪರ್ಧಿಸುವ ತಯಾರಿಯಲ್ಲಿದ್ದರು. ಇತ್ತೀಚೆಗಷ್ಟೇ ಅವರ ಮೇಲಿದ್ದ ಎಲ್ಲಾ ಭ್ರಷ್ಟಾಚಾರದ ಪ್ರಕರಣಗಳಿಂದ ಅವರನ್ನು ಬಿಡುಗಡೆ ಮಾಡಲಾಗಿತ್ತು. ಅವರ ನಿಧನವು ಬಾಂಗ್ಲಾದೇಶದ ರಾಜಕೀಯದಲ್ಲಿ ಒಂದು ಯುಗದ ಅಂತ್ಯವೆಂದೇ ಪರಿಗಣಿಸಲಾಗಿದೆ.

ಖಲೀದಾ ಜಿಯಾ ಅವರ ಜೀವನ ಸಾಧನೆ

ಮೊದಲ ಮಹಿಳಾ ಪ್ರಧಾನಿ

1991 ರಲ್ಲಿ ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿಯಾಗಿ ಆಯ್ಕೆಯಾದರು. ಮುಸ್ಲಿಂ ದೇಶವೊಂದರಲ್ಲಿ ಈ ಸ್ಥಾನ ಅಲಂಕರಿಸಿದ ವಿಶ್ವದ ಎರಡನೇ ಮಹಿಳೆ ಇವರಾಗಿದ್ಧಾರೆ.

ಪ್ರಜಾಪ್ರಭುತ್ವದ ಮರುಸ್ಥಾಪನೆ

1980 ರ ದಶಕದಲ್ಲಿ ಜನರಲ್ ಎಚ್.ಎಂ. ಎರ್ಷಾದ್ ಅವರ ಮಿಲಿಟರಿ ಸರ್ವಾಧಿಕಾರದ ವಿರುದ್ಧ ಕಠಿಣ ಹೋರಾಟ ನಡೆಸಿದರು. ಇದಕ್ಕಾಗಿ ಅವರು ಹಲವು ಬಾರಿ ಗೃಹಬಂಧನ ಮತ್ತು ಜೈಲು ಶಿಕ್ಷೆ ಅನುಭವಿಸಿದರು, ಇದರಿಂದ ಅವರಿಗೆ ಅಪೋಸ್ ಮಾಡದ ನಾಯಕಿ ಎಂಬ ಬಿರುದು ಬಂದಿತು.

ಶಿಕ್ಷಣ ಕ್ರಾಂತಿ

ಇವರ ಆಡಳಿತ ಅವಧಿಯಲ್ಲಿ (1991-96 ಮತ್ತು 2001-06) ಹೆಣ್ಣುಮಕ್ಕಳಿಗೆ 10ನೇ ತರಗತಿಯವರೆಗೆ ಉಚಿತ ಶಿಕ್ಷಣ ಮತ್ತು ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯಗೊಳಿಸುವಂತಹ ಕ್ರಾಂತಿಕಾರಿ ನಿರ್ಧಾರಗಳನ್ನು ಕೈಗೊಂಡರು.

ಆರ್ಥಿಕ ಸುಧಾರಣೆ

ವ್ಯಾಟ್ (VAT) ಪದ್ಧತಿಯ ಪರಿಚಯ ಮತ್ತು ಖಾಸಗೀಕರಣಕ್ಕೆ ಒತ್ತು ನೀಡುವ ಮೂಲಕ ಬಾಂಗ್ಲಾದೇಶದ ಮುಕ್ತ ಮಾರುಕಟ್ಟೆ ಆರ್ಥಿಕತೆಗೆ ಅಡಿಪಾಯ ಹಾಕಿದರು,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net