ಯುದ್ಧ ಶುರು ಮಾಡಿದ್ದು ನಾವಲ್ಲ, ಆದರೆ ಅಂತ್ಯಗೊಳಿಸುವುದು ನಾವೇ: ಇರಾನ್‌ಗೆ ಅಮೆರಿಕ ವಾರ್ನಿಂಗ್​! | US vs Iran

 US vs Iran
US vs Iran
Published on
ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ಭುಗಿಲೆದ್ದಿರುವ ಸಂಘರ್ಷ ಈಗ ಅಮೆರಿಕ ಮತ್ತು ಇರಾನ್(US vs Iran ) ನಡುವಿನ ನೇರ ಮುಖಾಮುಖಿಯ ಹಂತಕ್ಕೆ ತಲುಪಿದೆ. ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆಯ ನಂತರ ಪ್ರತಿಕಾರ ತೀರಿಸಿಕೊಳ್ಳುತ್ತಿರುವ ಇರಾನ್‌ಗೆ, ಅಮೆರಿಕದ ರಕ್ಷಣಾ ಕಾರ್ಯದರ್ಶಿ (US War Secretary) ಪೀಟ್ ಹೆಗ್ಸೆತ್ ನೇರ ಎಚ್ಚರಿಕೆ ನೀಡಿದ್ದಾರೆ. "ಈ ಯುದ್ಧವನ್ನು ಅಮೆರಿಕ ಆರಂಭಿಸಿಲ್ಲ, ಆದರೆ ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದು ನಾವೇ" ಎಂದು ಅವರು ಘರ್ಜಿಸಿದ್ದಾರೆ.
ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ತಮ್ಮ ಹೇಳಿಕೆಯಲ್ಲಿ, "ಅಮೆರಿಕದ ಆಸ್ತಿಪಾಸ್ತಿ ಮತ್ತು ನಾಗರಿಕರ ಮೇಲೆ ದಾಳಿ ನಡೆಸುವ ಇರಾನ್‌ನ ಯಾವುದೇ ಪ್ರಯತ್ನಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. ನಮ್ಮ ಮಿತ್ರರಾಷ್ಟ್ರಗಳನ್ನು ರಕ್ಷಿಸಲು ನಾವು ಬದ್ಧರಾಗಿದ್ದೇವೆ," ಎಂದು ಸ್ಪಷ್ಟಪಡಿಸಿದ್ದಾರೆ. ಇದು ಇರಾನ್‌ನ ಮೇಲೆ ದೊಡ್ಡ ಮಟ್ಟದ ಮಿಲಿಟರಿ ಕಾರ್ಯಾಚರಣೆ ನಡೆಯಲಿದೆ ಎಂಬ ಸುಳಿವು ನೀಡಿದೆ.
ತೀವ್ರಗೊಂಡ ದಾಳಿ-ಪ್ರತಿದಾಳಿ
ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್‌ನ ಪರಮಾಣು ಮತ್ತು ಮಿಲಿಟರಿ ನೆಲೆಗಳ ಮೇಲೆ ನಡೆಸುತ್ತಿರುವ ದಾಳಿಗಳಿಗೆ ಪ್ರತಿಯಾಗಿ, ಇರಾನ್ ಗಲ್ಫ್ ರಾಷ್ಟ್ರಗಳಲ್ಲಿನ ಅಮೆರಿಕದ ನೆಲೆಗಳು ಮತ್ತು ಮಿತ್ರರಾಷ್ಟ್ರಗಳ ಮೇಲೆ ಕ್ಷಿಪಣಿ ಸುರಿಮಳೆಗೈಯುತ್ತಿದೆ. ಅಮೆರಿಕದ ಮೂರು F-15E 'Strike Eagle' ಯುದ್ಧ ವಿಮಾನಗಳನ್ನು ಕುವೈತ್‌ನ ವಾಯು ರಕ್ಷಣಾ ವ್ಯವಸ್ಥೆಯೇ ತಪ್ಪಾಗಿ ಹೊಡೆದುರುಳಿಸಿದ ಘಟನೆಯ ನಂತರ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿದೆ.
ಜಾಗತಿಕ ತಲ್ಲಣ ಮತ್ತು ಸಾವು-ನೋವು
ಈ ಭೀಕರ ಸಂಘರ್ಷದಲ್ಲಿ ಕನಿಷ್ಠ 555ಕ್ಕೂ ಹೆಚ್ಚು ಜನರು ಇರಾನ್‌ನಲ್ಲಿ ಸಾವನ್ನಪ್ಪಿದ್ದರೆ, ಗಲ್ಫ್ ರಾಷ್ಟ್ರಗಳಲ್ಲಿ ಇರಾನ್ ದಾಳಿಗೆ ಐವರು ಬಲಿಯಾಗಿದ್ದಾರೆ. ಇರಾನ್‌ನ ಮಿನಾಬ್ ಪಟ್ಟಣದಲ್ಲಿರುವ ಶಾಲೆಯ ಮೇಲೆ ನಡೆದ ದಾಳಿಯಲ್ಲಿ 160ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಎಂಬ ವರದಿ ಜಗತ್ತನ್ನೇ ಬೆಚ್ಚಿಬೀಳಿಸಿದೆ. ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದ್ದು, ಜಾಗತಿಕ ವಾಣಿಜ್ಯದ ಮೇಲೆ ಭಾರಿ ಪರಿಣಾಮ ಬೀರಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net