ಆಹಾರ ವ್ಯರ್ಥ ಮಾಡಿದರೆ ಬೀಳುತ್ತೆ ₹68 ಲಕ್ಷ ದಂಡ ಅಥವಾ ಜೈಲು! ಎಲ್ಲಿ ಗೊತ್ತೆ? | Wasting food

Wasting food
Wasting food
Published on

ನವದೆಹಲಿ: ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ಅವರ ಭಾರತ ಭೇಟಿಯು ಕೇವಲ ರಾಜತಾಂತ್ರಿಕ ಸಂಬಂಧಗಳನ್ನಷ್ಟೇ ಅಲ್ಲದೆ, ಆಹಾರ ಸಂರಕ್ಷಣೆಯ ಬಗ್ಗೆ ವಿಶ್ವದಅತ್ಯಂತ ಕಠಿಣ ಕಾನೂನಿನ ಕಡೆಗೆ ಗಮನ ಸೆಳೆದಿದೆ. ಫ್ರಾನ್ಸ್‌ನಲ್ಲಿ ಆಹಾರ ವ್ಯರ್ಥ(Wasting food)ಮಾಡುವುದು ಅಪರಾಧವಾಗಿದ್ದು, ಇದಕ್ಕೆ ಭಾರಿ ದಂಡ ತೆರಬೇಕಾಗುತ್ತದೆ.

2016ರಲ್ಲಿ ಫ್ರಾನ್ಸ್ಒಂದು ಐತಿಹಾಸಿಕ ನಿರ್ಧಾರ ಕೈಗೊಂಡಿತು. ಸೂಪರ್‌ಮಾರ್ಕೆಟ್‌ಗಳು ಮಾರಾಟವಾಗದ ಖಾದ್ಯ ಆಹಾರವನ್ನು ಎಸೆಯುವುದನ್ನುನಿಷೇಧಿಸಿದ ವಿಶ್ವದ ಮೊದಲ ದೇಶವಾಯಿತು.

ದಾನ ಮಾಡುವುದುಕಡ್ಡಾಯ: 400 ಚದರ ಮೀಟರ್‌ಗಿಂತದೊಡ್ಡದಾದ ಸೂಪರ್‌ಮಾರ್ಕೆಟ್‌ಗಳು ಹೆಚ್ಚುವರಿ ಆಹಾರವನ್ನು ಕಸಕ್ಕೆ ಎಸೆಯುವಂತಿಲ್ಲ. ಬದಲಾಗಿ ಅದನ್ನುದತ್ತಿ ಸಂಸ್ಥೆಗಳಿಗೆ ಅಥವಾ ಆಹಾರ ಬ್ಯಾಂಕ್‌ಗಳಿಗೆ ದಾನ ಮಾಡಲು ಒಪ್ಪಂದ ಮಾಡಿಕೊಳ್ಳಬೇಕು.

ಭಾರಿ ದಂಡ: ಒಂದು ವೇಳೆ ನಿಯಮ ಉಲ್ಲಂಘಿಸಿ ಉದ್ದೇಶಪೂರ್ವಕವಾಗಿಆಹಾರ ವ್ಯರ್ಥ ಮಾಡಿದರೆ, €75,000 (ಅಂದಾಜು ₹68 ಲಕ್ಷಕ್ಕೂ ಹೆಚ್ಚು) ವರೆಗೆ ದಂಡ ಅಥವಾ ಎರಡು ವರ್ಷಗಳಜೈಲು ಶಿಕ್ಷೆ ವಿಧಿಸಲಾಗುತ್ತದೆ.

ಭಾರತದ ಪರಿಸ್ಥಿತಿಏನು?

ಫ್ರಾನ್ಸ್‌ನಂತೆಭಾರತದಲ್ಲಿ ಆಹಾರ ವ್ಯರ್ಥ ಮಾಡುವುದನ್ನು ಶಿಕ್ಷಾರ್ಹ ಅಪರಾಧವಾಗಿಸುವ ಯಾವುದೇ ನೇರ ಅಥವಾ ಕಡ್ಡಾಯಕಾನೂನುಗಳಿಲ್ಲ. ಭಾರತದ ಕಾನೂನು ವ್ಯವಸ್ಥೆಯು ಸದ್ಯಕ್ಕೆ ಈ ಕೆಳಗಿನ ಅಂಶಗಳ ಮೇಲೆ ಕೇಂದ್ರೀಕರಿಸಿದೆ.

ಸ್ವಯಂಪ್ರೇರಿತದಾನ: ಭಾರತದಲ್ಲಿ ಆಹಾರಹಂಚಿಕೆಯು ಹೆಚ್ಚಾಗಿ ಸ್ವಯಂಪ್ರೇರಿತವಾಗಿದೆ. ಎಫ್‌ಎಸ್‌ಎಸ್‌ಎಐ (FSSAI) 'ಭಾರತೀಯ ಆಹಾರ ಹಂಚಿಕೆಒಕ್ಕೂಟ'ದಂತಹ ಉಪಕ್ರಮಗಳ ಮೂಲಕ ಉದ್ಯಮಿಗಳು ಮತ್ತು ಸಂಘಟಕರಿಗೆ ಹೆಚ್ಚುವರಿ ಆಹಾರವನ್ನು ಅಗತ್ಯವಿರುವವರಿಗೆತಲುಪಿಸಲು ಪ್ರೋತ್ಸಾಹ ನೀಡುತ್ತದೆ.

ಆಹಾರ ಸುರಕ್ಷತೆಗೆಆದ್ಯತೆ: ಭಾರತದ 'ಆಹಾರಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ'ಯು ಕೇವಲ ಆಹಾರದ ಗುಣಮಟ್ಟ ಮತ್ತು ಸುರಕ್ಷತೆಯ ಮೇಲೆ ಕೇಂದ್ರೀಕರಿಸುತ್ತದೆ.ಅಸುರಕ್ಷಿತ ಆಹಾರ ಮಾರಾಟ ಮಾಡಿದರೆ ₹1 ಲಕ್ಷದಿಂದ ₹10 ಲಕ್ಷದವರೆಗೆ ದಂಡ ವಿಧಿಸುವ ಅವಕಾಶವಿದೆ.

ಜಾರಿಯ ವ್ಯತ್ಯಾಸ: ಫ್ರಾನ್ಸ್‌ನಲ್ಲಿ ದಾನ ಮಾಡುವುದು ಕಾನೂನುಬದ್ಧವಾಗಿಕಡ್ಡಾಯವಾಗಿದ್ದರೆ, ಭಾರತದಲ್ಲಿ ಇದು ಕೇವಲ ಜಾಗೃತಿ ಮತ್ತು ಪ್ರಚಾರಕ್ಕೆ ಸೀಮಿತವಾಗಿದೆ.

ವಿಶ್ವದ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಹಸಿವಿನ ಸಮಸ್ಯೆ ದೊಡ್ಡದಾಗಿದೆ. ಇಂತಹ ಸಮಯದಲ್ಲಿ ಫ್ರಾನ್ಸ್ಮಾದರಿಯ ಕಾನೂನುಗಳು ಭಾರತದಂತಹ ರಾಷ್ಟ್ರಗಳಲ್ಲಿ ಜಾರಿಗೆ ಬಂದರೆ, ಟನ್‌ಗಟ್ಟಲೆ ವ್ಯರ್ಥವಾಗುವ ಆಹಾರವನ್ನುಲಕ್ಷಾಂತರ ಜನರ ಹಸಿವು ನೀಗಿಸಲು ಬಳಸಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ,(ಏಜೆನ್ಸೀಸ್‌).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net