ದುಬೈನಲ್ಲಿ ಯಶಸ್ವಿಯಾಗಿ ನಡೆದ ವಿಜಯರತ್ನ ಇಂಟರ್ ನ್ಯಾಷನಲ್ ಅವಾರ್ಡ್: ಸಾಧಕರೆಲ್ಲ ಸುರಕ್ಷಿತ! Vijayaratna Award

ದುಬೈನಲ್ಲಿ ಯಶಸ್ವಿಯಾಗಿ ನಡೆದ ವಿಜಯರತ್ನ ಇಂಟರ್ ನ್ಯಾಷನಲ್ ಅವಾರ್ಡ್: ಸಾಧಕರೆಲ್ಲ ಸುರಕ್ಷಿತ! Vijayaratna Award
ದುಬೈನಲ್ಲಿ ಯಶಸ್ವಿಯಾಗಿ ನಡೆದ ವಿಜಯರತ್ನ ಇಂಟರ್ ನ್ಯಾಷನಲ್ ಅವಾರ್ಡ್: ಸಾಧಕರೆಲ್ಲ ಸುರಕ್ಷಿತ! Vijayaratna Award
Published on

ಪ್ರಮುಖ ಮುಖ್ಯಾಂಶಗಳು

  • ವಿಜಯವಾಣಿಯ ವತಿಯಿಂದ ದುಬೈನಲ್ಲಿ ನಡೆದ ವಿಜಯರತ್ನ ಇಂಟರ್‌ನ್ಯಾಷನಲ್ ಅವಾರ್ಡ್-2026
  • ಕನ್ನಡ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 27 ಸಾಧಕರಿಗೆ ಪ್ರಶಸ್ತಿ ಪ್ರದಾನ
  • ಇರಾನ್​ ಮತ್ತು ಇಸ್ರೇಲ್​ ಸಂಘರ್ಷದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ದುಬೈ ಏರ್​ಪೋರ್ಟ್​ ಸ್ಥಗಿತ
  • ಸಮಾರಂಭಕ್ಕೆ ತೆರಳಿದ್ದ 27 ಸಾಧಕರು, ಕುಟುಂಬಸ್ಥರು, ವಿಜಯವಾಣಿ ಸಿಬ್ಬಂದಿ ಸೇರಿ 64 ಮಂದಿ ದುಬೈನಲ್ಲೇ ಸುರಕ್ಷಿತ
  • ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರರಿಂದ ಖುದ್ದು ಮೇಲ್ವಿಚಾರಣೆ
ದುಬೈ: ಕನ್ನಡದ ನಂ.1 ದಿನಪತ್ರಿಕೆ 'ವಿಜಯವಾಣಿ'ಯ ಹೆಮ್ಮೆಯ ಕೊಡುಗೆ ‘ವಿಜಯರತ್ನ ಇಂಟರ್ ನ್ಯಾಷನಲ್ ಅವಾರ್ಡ್ - 2026’ ಪ್ರಶಸ್ತಿ ( Vijayaratna Award ) ಪ್ರದಾನ ಸಮಾರಂಭ ಇತ್ತೀಚಿಗೆ ಯುನೈಟೆಡ್​ ಎಮಿರೇಟ್ಸ್​ ಅರಬ್​ನ ದುಬೈನಲ್ಲಿ ಯಶಸ್ವಿಯಾಗಿ ಜರುಗಿತು.
ಶನಿವಾರ (ಫೆ.28) ನಡೆದ ಈ ಅದ್ಧೂರಿ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕನ್ನಡ ನಾಡಿನ 27 ಸಾಧಕರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ ಅವರು ಪ್ರಶಸ್ತಿ ಪುರಸ್ಕೃತರಿಗೆ ಟ್ರೋಫಿ ನೀಡಿ ಗೌರವಿಸಿದರು.
ಇರಾನ್​ ಮತ್ತು ಇಸ್ರೇಲ್​ ಸಂಘರ್ಷದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ದುಬೈನಲ್ಲಿ ವಿಮಾನ ನಿಲ್ದಾಣವನ್ನು ಸ್ಥಗಿತಗೊಳಿಸಲಾಗಿದೆ. ಹೀಗಾಗಿ, ವಿಜಯರತ್ನ ಸಮಾರಂಭಕ್ಕೆ ತೆರಳಿದ್ದ 27 ಸಾಧಕರು, ಅವರ ಸಂಬಂಧಿಕರು ಹಾಗೂ ವಿಜಯವಾಣಿ ಸಿಬ್ಬಂದಿ ಸೇರಿದಂತೆ 64 ಮಂದಿ ದುಬೈನಲ್ಲೇ ಸುರಕ್ಷಿತವಾಗಿ ಇದ್ದಾರೆ.

ಖುದ್ದು ಡಾ. ಆನಂದ ಸಂಕೇಶ್ವರ ಮೇಲ್ವಿಚಾರಣೆ

ದುಬೈನ ಪ್ರತಿಷ್ಠಿತ ಹೋಟೆಲ್​ನಲ್ಲಿ ವಿಜಯರತ್ನ ಸಾಧಕರು ಮತ್ತು ಅವರ ಕುಟುಂಬಸ್ಥರು ತಂಗಿದ್ದು, ಡಾ.ಆನಂದ ಸಂಕೇಶ್ವರ ಅವರೇ ಖುದ್ದಾಗಿ ಅವರ ಸುರಕ್ಷತೆಯನ್ನು ನೋಡಿಕೊಳ್ಳುತ್ತಿದ್ದಾರೆ. ಭಾರತೀಯ ಹೋಟೆಲ್​ನಲ್ಲಿ ಊಟ-ಉಪಚಾರ ಸೇರಿದಂತೆ ಎಲ್ಲ ಅಗತ್ಯತೆಗಳನ್ನು ಆನಂದ ಸಂಕೇಶ್ವರ ಅವರೇ ವ್ಯವಸ್ಥೆ ಮಾಡುತ್ತಿದ್ದಾರೆ. ಹೀಗಾಗಿ, ಯಾವುದೇ ಚಿಂತೆಯಿಲ್ಲದೇ ಎಲ್ಲ ಸಾಧಕರು ಹೋಟೆಲ್​ನಲ್ಲಿ ಒಟ್ಟಿಗೆ ಉತ್ತಮ ಸಮಯ ಕಳೆಯುತ್ತಿದ್ದಾರೆ.

ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ

ಈ ಬಗ್ಗೆ ದುಬೈಗೆ ತೆರಳಿರುವ ಸಾಧಕರೇ ಮಾತನಾಡಿದ್ದಾರೆ. ನಮಗೆ ಇಲ್ಲಿ ಯಾವುದೇ ಸಮಸ್ಯೆ ಇಲ್ಲ. ಊಟ-ತಿಂಡಿಯಿಂದ ಹಿಡಿದು ಸುರಕ್ಷತೆಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಿದ್ದಾರೆ. ನಾವೆಲ್ಲ ಕನ್ನಡಿಗರು ಒಟ್ಟಿಗೆ, ಒಂದೇ ಹೋಟೆಲ್​ನಲ್ಲಿ ಇದ್ದೇವೆ. ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನು ಎರಡು ದಿನಗಳಲ್ಲಿ ವಾಪಸ್​

ಇಸ್ರೇಲ್​-ಇರಾನ್​ ಸಂಘರ್ಷದಿಂದ ದುಬೈ ವಿಮಾನ ನಿಲ್ದಾಣವನ್ನು ಸ್ಥಗಿತಗೊಳಿಸಲಾಗಿದೆ. ಇನ್ನು ಎರಡ್ಮೂರು ದಿನಗಳಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಬರಲಿದ್ದು, ಎಂದಿನಂತೆ ವಿಮಾನ ಹಾರಾಟಗಳು ನಡೆಯಲಿದೆ. ಬಳಿಕ ವಿಜಯರತ್ನ ಸಾಧಕರೆಲ್ಲರು ತಮ್ಮ ಕುಟುಂಬಸ್ಥರ ಜತೆ ಸುರಕ್ಷಿತವಾಗಿ ತಮ್ಮ ತವರಿಗೆ ಮರಳಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net