

ಫ್ರಾನ್ಸ್ನ ಬೀದಿಯಲ್ಲಿ ದುಬಾರಿ ಬೆಲೆಯ ವಸ್ತುಗಳು ಕಡಿಮೆ ಬೆಲೆಯಲ್ಲಿ ಮಾರಾಟ.
ಕದ್ದ ಬ್ರಾಂಡೆಡ್ ಬ್ಯಾಗ್, ವಾಚ್, ಬಟ್ಟೆಯನ್ನು ಅಗ್ಗದ ಬೆಲೆಗೆ ಮಾರಾಟ ಮಾಡುತ್ತಿರುವ ವರದಿ.
ಶಿಕ್ಷಣ ವ್ಯವಸ್ಥೆಯಲ್ಲಿನ ತೊಂದರೆ, ದುಬಾರಿ ಜನಜೀವನ ವಿರುದ್ಧ ನಡೆಸಿದ್ದ ಪ್ರತಿಭಟನೆ ವೇಳೆ ನಡೆಸಿದ್ದ ಲೂಟಿ.
Luxury Goods Looted In France Riots: ಬ್ರಾಂಡೆಡ್ ಬ್ಯಾಗ್ಗಳು, ದುಬಾರಿ ಬಟ್ಟೆಗಳು, ಹ್ಯಾಟ್, ಚಪ್ಪಲಿ, ಶೂಗಳು, ಪರ್ಫ್ಯೂಮ್ ಸೇರಿದಂತೆ ಕೋಟಿಗಟ್ಟಲೆ ರೂಪಾಯಿ ಮೌಲ್ಯದ ಹಲವು ವಸ್ತುಗಳನ್ನು ಫ್ರಾನ್ಸ್ನ ಬೀದಿಗಳಲ್ಲಿ.. ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹೌದು, ಆರ್ಥಿಕ ಸಂಕಷ್ಟ, ಬೆಲೆ ಏರಿಕೆ ಮತ್ತು ಸರ್ಕಾರದ ನೀತಿಗಳನ್ನು ವಿರೋಧಿಸಿ ಫ್ರಾನ್ಸ್ನ ಪ್ಯಾರಿಸ್ ಸೇರಿದಂತೆ ದೇಶದಾದ್ಯಂತ ಶುರುವಾದ ಪ್ರತಿಭಟನೆಯು ಹಿಂಸಾತ್ಮಕವಾಗಿ ತಿರುಗಿತ್ತು. ಐದು ಲಕ್ಷಕ್ಕೂ ಹೆಚ್ಚು ಜನರು ಪ್ರತಿಭಟನೆಯಲ್ಲಿ ಭಾಗಿಯಾಗಿ ವಾಹನಗಳಿಗೆ ಬೆಂಕಿ ಹಚ್ಚಿದರು. ಹೈ-ಎಂಡ್ ಮಳಿಗೆಗಳನ್ನು ಗುರಿಯಾಗಿಸಿಕೊಂಡು, ಅದರಲ್ಲಿದ್ದ ದುಬಾರಿ ಬೆಲೆಯ ವಸ್ತುಗಳನ್ನು ಲೂಟಿ ಮಾಡಿದ್ದರು. ಸದ್ಯ ಆ ವಸ್ತುಗಳನ್ನು ಫ್ರ್ಯಾನ್ಸ್ನ ಬೀದಿಗಳಲ್ಲಿ ಅಗ್ಗದ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎನ್ನುವ ವಿಡಿಯೋಗಳು ಹರಿದಾಡುತ್ತಿದೆ.
ವರದಿಯ ಪ್ರಕಾರ, ಪ್ರತಿಭಟನೆ ಮಧ್ಯೆ ಮುಖವಾಡ ಧರಿಸಿದ ಗುಂಪುಗಳು ಮಾರ್ಸಲ್ಲೆಯಲ್ಲಿರುವ ಖ್ಯಾತ ಬ್ರ್ಯಾಂಡ್ಗಳ ಮಳಿಗೆಗಳನ್ನು ಗುರಿಯಾಗಿಸಿಕೊಂಡು, ಅಲ್ಲಿದ್ದ ಲೂಯಿ ವಿಟನ್, ಹರ್ಮೆಸ್, ಡಿಯರ್ ಮತ್ತು ರೋಲೆಕ್ಸ್ಗೆ ಸೇರಿದ ವಸ್ತುಳಿಗೆ ಕನ್ನ ಹಾಕಿದ್ದಾರೆ.
ಫ್ರಾನ್ಸ್ನ ಮಾರ್ಸೆಲ್ನಲ್ಲಿರುವ ರೋಲೆಕ್ಸ್ ಮಳಿಗೆಯಿಂದ ಸುಮಾರು 3 ಮಿಲಿಯನ್ ಯುರೋ ಹಾಗೂ ಬೋರ್ಡೆಕ್ಸ್ನಲ್ಲಿರುವ ಲೂಯಿ ವಿಟನ್ ಮಳಿಗೆಯಿಂದ 1.25 ಮಿಲಿಯನ್ ಯುರೋ ಮೌಲ್ಯದ ವಸ್ತುಗಳು ಲೂಟಿ ಮಾಡಿದ್ದಾರೆ. ಇಷ್ಟೇ ಅಲ್ಲದೇ ಸೂಪರ್ಮಾರ್ಕೆಟ್ಗಳು, ಔಷಧಾಲಯಗಳು, ಪುರಭವನಗಳು ಹಾಗೂ ಸರ್ಕಾರದ ಕಚೇರಿಗಳು ಮತ್ತು ನೂರಾರು ವಾಹನಗಳನ್ನು ಬೆಂಕಿ ಹಚ್ಚಿ ನಾಶಪಡಿಸಲಾಗಿದೆ.
ದುಬಾರಿ ಹಣ ಹಾಗೂ ಬ್ರಾಂಡೆಡ್ ವಸ್ತುಗಳಾದ ಸುಗಂಧ ದ್ರವ್ಯಗಳು, ಡಿಸೈನರ್ ಹ್ಯಾಂಡ್ಬ್ಯಾಗ್, ಸೌಂದರ್ಯವರ್ಧಕ, ಚಪ್ಪಲಿ, ಶೂಗಳನ್ನು ಅಸಲಿ ಬೆಲೆಗಿಂತ ಶೇ. 90ರಷ್ಟು ಕಡಿಮೆ ರಿಯಾಯಿತಿ ನೀಡಿ ಮಾರಾಟ ಮಾಡಲಾಗುತ್ತಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊಗಳು ವೈರಲ್ ಆಗಿವೆ.
ಲೂಟಿ ಮಾಡಿದ ವಸ್ತುಗಳನ್ನು ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಾದ 'ವಿಂಟೆಡ್' ಆನ್ಲೈನ್ ಪ್ಲಾಟ್ಫಾರ್ಮ್ನಲ್ಲಿ ಮಾರಾಟ ಮಾಡಲು ಯತ್ನಿಸಲಾಗಿದೆ. ಈ ಬಗ್ಗೆ ಎಚ್ಚೆತ್ತುಕೊಂಡ ಕಂಪನಿಯು ಅಂತಹ ಪಟ್ಟಿಗಳನ್ನು ತಕ್ಷಣವೇ ತೆಗೆದುಹಾಕಿದೆ.
ಶಿಕ್ಷಣ ವ್ಯವಸ್ಥೆಯಲ್ಲಿನ ತೊಂದರೆಗಳು, ಶಿಕ್ಷಕರ ಕೊರತೆ ಹಾಗೂ ಜನಜೀವನ ದುಬಾರಿಯಾಗಿರುವುದರ ವಿರುದ್ಧ ವಿದ್ಯಾರ್ಥಿಗಳು ಆರಂಭಿಸಿದ ಪ್ರತಿಭಟನೆಯು ಬಳಿಕ ಹಿಂಸಾಚಾರಕ್ಕೆ ತಿರುಗಿದ್ದು, ಮಳಿಗೆಗಳ ಗಾಜಿನ ಮೇಲೆ ಶ್ರೀಮಂತರ ಮೇಲೆ ತೆರಿಗೆ ವಿಧಿಸಿ ಎಂದು ಬರೆಯಲಾಗಿದೆ, (ಏಜೆನ್ಸೀಸ್).