ಡೊನಾಲ್ಡ್ ಟ್ರಂಪ್ ಹತ್ಯೆಗೆ ಸಂಚು: 3 ಬಂದೂಕುಗಳೊಂದಿಗೆ ಸಿಕ್ಕಿಬಿದ್ದ ವ್ಯಕ್ತಿಯ ಹೇಳಿಕೆ ಕೇಳಿ ಪೊಲೀಸರೇ ಶಾಕ್! | Donald Trump

ಡೊನಾಲ್ಡ್ ಟ್ರಂಪ್ ಹತ್ಯೆಗೆ ಸಂಚು: 3 ಬಂದೂಕುಗಳೊಂದಿಗೆ ಸಿಕ್ಕಿಬಿದ್ದ ವ್ಯಕ್ತಿ
ಡೊನಾಲ್ಡ್ ಟ್ರಂಪ್ ಹತ್ಯೆಗೆ ಸಂಚು: 3 ಬಂದೂಕುಗಳೊಂದಿಗೆ ಸಿಕ್ಕಿಬಿದ್ದ ವ್ಯಕ್ತಿ
Published on: 

ವಾಷಿಂಗ್ಟನ್‌: ಇಲ್ಲಿನ ವೈಟ್‌ಹೌಸ್ (ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ) ಬಳಿ ಮಾರಕಾಸ್ತ್ರಗಳು ಹಾಗೂ ಅಪಾರ ಪ್ರಮಾಣದ ಗುಂಡುಗಳೊಂದಿಗೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಯುಎಸ್ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ಬಂಧಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು​ (Donald Trump) ಹತ್ಯೆ ಮಾಡಲು ತನ್ನ ತಲೆಯಲ್ಲಿ ಕೇಳಿಸಿದ ಧ್ವನಿಗಳು ಸೂಚನೆ ನೀಡಿದ್ದವು ಎಂದು ಬಂಧಿತ ಆರೋಪಿ ವಿಚಾರಣೆ ವೇಳೆ ಸ್ಫೋಟಕ ಹೇಳಿಕೆ ನೀಡಿದ್ದಾನೆ.

ವೈಟ್‌ಹೌಸ್ ಸಮೀಪ ನಿಲ್ಲಿಸಲಾಗಿದ್ದ ಕಾರಿನಲ್ಲಿ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ವರ್ತಿಸುತ್ತಿರುವುದನ್ನು ಗಮನಿಸಿದ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ಗುರುವಾರ ರಾತ್ರಿ ಆತನನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಯ ಹಿನ್ನೆಲೆ!

ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆ ನೀಡಿದ ಹೇಳಿಕೆಯ ಪ್ರಕಾರ, ಬಂಧಿತ ಆರೋಪಿಯನ್ನು ರೋನಿ ಯೋರ್ಡ್ರಿಕ್ಸ್ ಗ್ವಾನಿಪಾ ಕ್ರಿನೋಸ್ ಎಂದು ಗುರುತಿಸಲಾಗಿದೆ. ಈತ ವೆನೆಜುವೆಲಾ ಮೂಲದ ಕಾನೂನುಬಾಹಿರ ವಲಸಿಗನಾಗಿದ್ದು, 2024ರ ಮಾರ್ಚ್‌ನಲ್ಲಿ ಟೆಕ್ಸಾಸ್ ಗಡಿಯ ಮೂಲಕ ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆತನ ಕಾರನ್ನು ತಪಾಸಣೆ ನಡೆಸಿದಾಗ ಅದು ಕಳುವಾದ ವಾಹನ ಎಂಬುದು ತಿಳಿದುಬಂದಿದೆ. ವಾಹನದ ಒಳಗಡೆಯಿಂದ ಮೂರು ವಿಭಿನ್ನ ಬಂದೂಕುಗಳು ಮತ್ತು ಹತ್ತಾರು ರೌಂಡ್ ಸ ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಿಚಾರಣೆ ವೇಳೆ ಆರೋಪಿ ಕ್ರಿನೋಸ್, ನನ್ನ ತಲೆಯಲ್ಲಿ ಕೆಲವು ಧ್ವನಿಗಳು ನಿರಂತರವಾಗಿ ಕೇಳಿಸುತ್ತಿದ್ದವು. ವಾಷಿಂಗ್ಟನ್‌ಗೆ ತೆರಳಿ ರಿಪಬ್ಲಿಕನ್ ಪಕ್ಷದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕೊಲ್ಲುವಂತೆ ಆ ಧ್ವನಿಗಳು ನನಗೆ ಸೂಚಿಸಿದವು ಎಂದು ಸೀಕ್ರೆಟ್ ಸರ್ವಿಸ್ ಅಧಿಕಾರಿಗಳ ಬಳಿ ಒಪ್ಪಿಕೊಂಡಿದ್ದಾನೆ. ಪ್ರಸ್ತುತ ಆರೋಪಿಯ ಮೇಲೆ ವಿವಿಧ ಗಂಭೀರ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆತನನ್ನು ಯುಎಸ್ ಮಾರ್ಷಲ್ಸ್ ಸರ್ವಿಸ್ ವಶಕ್ಕೆ ಒಪ್ಪಿಸಲಾಗಿದೆ.

Also Read
ಭಾರತದಲ್ಲಿ ದಿನಗಳು, ಅಮೆರಿಕದಲ್ಲಿ ಕೇವಲ ಗಂಟೆಗಳು!: ಬ್ಯಾಲೆಟ್ ಪೇಪರ್ ಮತ ಎಣಿಕೆಯ ಸ್ಪೀಡ್ ಕೌಂಟಿಂಗ್ ಸೀಕ್ರೆಟ್ ಏನು ಗೊತ್ತಾ? | US Midterm Elections
ಡೊನಾಲ್ಡ್ ಟ್ರಂಪ್ ಹತ್ಯೆಗೆ ಸಂಚು: 3 ಬಂದೂಕುಗಳೊಂದಿಗೆ ಸಿಕ್ಕಿಬಿದ್ದ ವ್ಯಕ್ತಿ

ಅಧಿಕಾರಿಗಳ ಸಮಯಪ್ರಜ್ಞೆಗೆ ಶ್ಲಾಘನೆ

ಈ ಜಾಗರೂಕತೆಯ ಕಾರ್ಯಚರಣೆಯನ್ನು ಶ್ಲಾಘಿಸಿರುವ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಮಾರ್ಕ್‌ವೇನ್ ಮುಲ್ಲಿನ್ (Markwayne Mullin), ನಮ್ಮ ಧೈರ್ಯಶಾಲಿ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳ ತ್ವರಿತ ಕಾರ್ಯಾಚರಣೆಯಿಂದಾಗಿ, ಮೂರು ಮಾರಕಾಸ್ತ್ರಗಳೊಂದಿಗೆ ವೈಟ್‌ಹೌಸ್ ಬಳಿ ಬಂದಿದ್ದ ಅಕ್ರಮ ವಲಸಿಗ ಯಾರ ಮೇಲಾದರು ದಾಳಿ ಮಾಡುವ ಮುನ್ನವೇ ಬಂಧನಕ್ಕೀಡಾಗಿದ್ದಾರೆ ಎಂದು ಹೇಳಿದ್ದಾರೆ.

ಈ ಘಟನೆಯ ಕುರಿತು ವೈಟ್‌ಹೌಸ್ ಇಲ್ಲಿಯವರೆಗೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ ಹಾಗೂ ಹೆಚ್ಚಿನ ಮಾಹಿತಿಗಾಗಿ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಮತ್ತು ಸೀಕ್ರೆಟ್ ಸರ್ವಿಸ್ ಇಲಾಖೆಯನ್ನು ಸಂಪರ್ಕಿಸುವಂತೆ ತಿಳಿಸಿದೆ. ಕಳೆದ ವರ್ಷ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಅಧಿಕಾರಕ್ಕೆ ಮರಳಿದ ನಂತರ ಅವರ ಹಾಗೂ ಅವರ ಕುಟುಂಬದ ಮೇಲೆ ಜೀವ ಬೆದರಿಕೆಗಳು ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಭದ್ರತಾ ಸಂಸ್ಥೆಗಳು ನಿರಂತರವಾಗಿ ಕಟ್ಟುನಿಟ್ಟಿನ ತನಿಖೆ ನಡೆಸುತ್ತಿವೆ(ಏಜೆನ್ಸೀಸ್​).

Related Stories

Donald Trump says he would become Israel's PM if Americans get bored!
ಡೊನಾಲ್ಡ್ ಟ್ರಂಪ್ ವಿರುದ್ಧ ಗಂಭೀರ ಆರೋಪ ಮಾಡಿದ ಮಾಜಿ ಮಿಸ್ ಸ್ವಿಟ್ಜರ್ಲೆಂಡ್
ಸೋಷಿಯಲ್ ಮೀಡಿಯಾದಲ್ಲಿ ಟ್ರಂಪ್ ಟ್ರೋಲ್
Donald Trump | ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್