ಅಮೆರಿಕದ ವಿನಾಶಕಾರಿ ಯುದ್ಧನೌಕೆ ಮೇಲೆ ಇರಾನ್ ಕ್ಷಿಪಣಿ ದಾಳಿ! ಹಾರ್ಮುಜ್ ಜಲಸಂಧಿ ಈಗ ಡೆತ್ ಝೋನ್! USS Destroyer

ಅಮೆರಿಕದ ವಿನಾಶಕಾರಿ ಯುದ್ಧನೌಕೆ ಮೇಲೆ ಇರಾನ್ ಕ್ಷಿಪಣಿ ದಾಳಿ! ಹಾರ್ಮುಜ್ ಜಲಸಂಧಿ ಈಗ ಡೆತ್ ಝೋನ್!
ಅಮೆರಿಕದ ವಿನಾಶಕಾರಿ ಯುದ್ಧನೌಕೆ ಮೇಲೆ ಇರಾನ್ ಕ್ಷಿಪಣಿ ದಾಳಿ! ಹಾರ್ಮುಜ್ ಜಲಸಂಧಿ ಈಗ ಡೆತ್ ಝೋನ್!
Published on
ಟೆಹ್ರಾನ್: ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ಈಗ ಅತ್ಯಂತ ಅಪಾಯಕಾರಿ ಹಂತಕ್ಕೆ ತಲುಪಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್, ಹಿಂದೂ ಮಹಾಸಾಗರದಲ್ಲಿ ಅಮೆರಿಕದ ಬೃಹತ್ ಯುದ್ಧನೌಕೆಯನ್ನು(USS Destroyer) ಗುರಿಯಾಗಿಸಿ ಭೀಕರ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯಿಂದಾಗಿ ಸಾಗರದ ಮಧ್ಯದಲ್ಲೇ ಅಮೆರಿಕದ ಹಡಗುಗಳು ಹೊತ್ತಿ ಉರಿಯುತ್ತಿದ್ದು, ಇಡೀ ಮಧ್ಯಪ್ರಾಚ್ಯವು ಜಾಗತಿಕ ಸಮರದ ಅಂಚಿನಲ್ಲಿ ಬಂದು ನಿಂತಿದೆ.

ಹಿಂದೂ ಮಹಾಸಾಗರದಲ್ಲಿ ಹಡಗುಗಳು ಭಸ್ಮ!

ಇರಾನ್ ಗಡಿಯಿಂದ ಸುಮಾರು 600 ಕಿಲೋಮೀಟರ್ ದೂರದಲ್ಲಿರುವ ಮುಕ್ತ ಸಮುದ್ರದಲ್ಲಿ ಈ ದಾಳಿ ನಡೆದಿದೆ. ಅಮೆರಿಕದ ಡೆಸ್ಟ್ರಾಯರ್ ನೌಕೆಯು ಅಮೆರಿಕನ್ ಟ್ಯಾಂಕರ್‌ನಿಂದ ಇಂಧನ ತುಂಬಿಸಿಕೊಳ್ಳುತ್ತಿದ್ದ ಸಂದರ್ಭದಲ್ಲೇ ಇರಾನ್ ತನ್ನ 'ಶಕ್ತಿ ಪ್ರದರ್ಶನ' ಮಾಡಿದೆ.
ಬಳಸಿದ ಆಯುಧಗಳು: ಈ ದಾಳಿಗಾಗಿ ಇರಾನ್ ಮಧ್ಯಮ ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿ 'ಘದರ್-380 ಮತ್ತು ಆಯಕಟ್ಟಿನ ಕ್ರೂಸ್ ಕ್ಷಿಪಣಿ ತಲೈಹ್ ಅನ್ನು ಬಳಸಿದೆ.
ಪರಿಣಾಮ: ಕ್ಷಿಪಣಿಗಳು ನೇರವಾಗಿ ಅಪ್ಪಳಿಸಿದ ಪರಿಣಾಮ ಅಮೆರಿಕದ ಯುದ್ಧನೌಕೆ ಮತ್ತು ಇಂಧನ ಟ್ಯಾಂಕರ್ ಎರಡರಲ್ಲೂ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಹಡಗುಗಳಲ್ಲಿದ್ದ ಅಣ್ವಸ್ತ್ರ ಮತ್ತು ಸ್ಫೋಟಕಗಳ ಕಾರಣದಿಂದಾಗಿ ವಿನಾಶದ ತೀವ್ರತೆ ಹೆಚ್ಚಿದೆ ಎಂದು ವರದಿಗಳು ತಿಳಿಸಿವೆ.

ಹಾರ್ಮುಜ್ ಜಲಸಂಧಿ ಯುದ್ಧ ವಲಯವಾಗಿ ಘೋಷಣೆ

ಇನ್ನೊಂದೆಡೆ, ಜಗತ್ತಿನ ಪ್ರಮುಖ ತೈಲ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಇರಾನ್ ಅಧಿಕೃತವಾಗಿ 'ವಾರ್ ಝೋನ್ ಎಂದು ಘೋಷಿಸಿದೆ.
ಇರಾನ್ ನೀಡಿದ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಸಂಚರಿಸುತ್ತಿದ್ದ ಸುಮಾರು 10ಕ್ಕೂ ಹೆಚ್ಚು ತೈಲ ಟ್ಯಾಂಕರ್‌ಗಳ ಮೇಲೆ ಇರಾನ್ ಪಡೆಗಳು ದಾಳಿ ನಡೆಸಿವೆ.
ನಮ್ಮ ಗಡಿಯ ಸಮೀಪ ಬರುವ ಯಾವುದೇ ಹಡಗು ನಮ್ಮ ಗುರಿಯಾಗಲಿದೆ ಎಂದು IRGC ಎಚ್ಚರಿಸಿದೆ. ಈ ದಿಗ್ಬಂಧನದಿಂದಾಗಿ ಸೌದಿ ಅರೇಬಿಯಾ, ಯುಎಇ ಮತ್ತು ಕುವೈತ್‌ನಿಂದ ಹೊರಬರುವ ತೈಲ ಪೂರೈಕೆ ಸಂಪೂರ್ಣ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ.

ನೆಲ, ಜಲ, ಆಕಾಶದಲ್ಲಿ ಮಲ್ಟಿ-ಫ್ರಂಟ್ ದಾಳಿ!

ಸಮುದ್ರದಲ್ಲಿ ಮಾತ್ರವಲ್ಲದೆ, ಭೂಮಿಯ ಮೇಲೂ ಅಮೆರಿಕದ ನೆಲೆಗಳ ಮೇಲೆ ಇರಾನ್ ತನ್ನ ದಾಳಿಯನ್ನು ತೀವ್ರಗೊಳಿಸಿದೆ.
ಇರಾಕ್‌ನ ಅರ್ಬಿಲ್ ನೆಲೆ: ಅರ್ಬಿಲ್‌ನಲ್ಲಿರುವ ಅಮೆರಿಕನ್ ಮಿಲಿಟರಿ ಬೇಸ್ ಮೇಲೆ ಸರಣಿ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳು ನಡೆದಿವೆ.
ಕುವೈತ್ ನೆಲೆಗಳು: ಕುವೈತ್‌ನಲ್ಲಿರುವ ಅಮೆರಿಕದ ಪ್ರಮುಖ ನೆಲೆಗಳನ್ನೂ ಇರಾನ್ ಟಾರ್ಗೆಟ್ ಮಾಡಿದ್ದು, ಅಲ್ಲಿನ ರಕ್ಷಣಾ ಕವಚಗಳು ಇರಾನ್‌ನ ಡ್ರೋನ್ ಸೈನ್ಯದ ಮುಂದೆ ವಿಫಲವಾಗುತ್ತಿವೆ ಎಂದು ಹೇಳಲಾಗುತ್ತಿದೆ.

ಜಾಗತಿಕ ತಲ್ಲಣ ಮತ್ತು ಭಾರತದ ಮೇಲಿನ ಪರಿಣಾಮ

ಈ ಯುದ್ಧವು ಮುಕ್ತ ಜಲಪ್ರದೇಶಕ್ಕೆ ಹರಡಿರುವುದು ಭಾರತದ ಪಾಲಿಗೆ ಆತಂಕಕಾರಿ ವಿಷಯವಾಗಿದೆ. ಹಿಂದೂ ಮಹಾಸಾಗರದಲ್ಲಿ ನಡೆಯುವ ಯಾವುದೇ ಸಂಘರ್ಷವು ಭಾರತದ ಸಮುದ್ರ ಮಾರ್ಗದ ವ್ಯಾಪಾರದ ಮೇಲೆ ನೇರ ಪರಿಣಾಮ ಬೀರಲಿದೆ. ಈಗಾಗಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದು, ಇದು ಜಾಗತಿಕ ಹಣದುಬ್ಬರಕ್ಕೆ ದಾರಿಯಾಗುವ ಸಾಧ್ಯತೆಯಿದೆ.

ಅಮೆರಿಕದ ಮುಂದಿನ ನಡೆ ಏನು..?

ಈ ಭೀಕರ ದಾಳಿಯ ನಂತರ ಪೆಂಟಗನ್ ಮತ್ತು ವೈಟ್‌ಹೌಸ್ ತುರ್ತು ಸಭೆ ನಡೆಸಿವೆ. ಅಧ್ಯಕ್ಷ ಟ್ರಂಪ್ ಅವರು ಅಮೆರಿಕದ ನೌಕಾಪಡೆಗೆ ಬೆಂಗಾವಲು ನೀಡಲು ಆದೇಶಿಸಿದ್ದರೂ, ಇರಾನ್‌ನ ಇತ್ತೀಚಿನ ಈ ಮಲ್ಟಿ-ಫ್ರಂಟ್ ದಾಳಿಯು ಅಮೆರಿಕದ ರಕ್ಷಣಾ ತಂತ್ರಗಳನ್ನು ಬುಡಮೇಲು ಮಾಡಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net