ಬಿಸಿ ಕಾಫಿಯನ್ನು ವೇಟರ್ ಮುಖಕ್ಕೆ ಎರಚಿದ ಮಹಿಳೆ: ಅಷ್ಟಕ್ಕೂ ಆತ ಮಾಡಿದ ತಪ್ಪೇನು...?Hot Coffee

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ವಾಷಿಂಗ್ಟನ್: ತಾನು ಆರ್ಡರ್​ ಮಾಡಿದ ಕಾಫಿ 1 ಗಂಟೆಯಾದರೂ ನೀಡಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬಳು ಮೆಕ್‌ಡೊನಾಲ್ಡ್ಸ್ ಸಿಬ್ಬಂದಿ ಮೇಲೆ ಬಿಸಿ ಕಾಫಿ ಎರಚಿದ ಆಘಾತಕಾರಿ ಘಟನೆ ಅಮೆರಿಕದಲ್ಲಿ ನಡೆದಿದ್ದು, ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದೆ ಆಗಿದೆ.
ಬ್ಯೂನಾ ವಿಸ್ಟಾ ಪೊಲೀಸ್ ಇಲಾಖೆ ಹಂಚಿಕೊಂಡಿರುವ ವೀಡಿಯೊದಲ್ಲಿ, ಮಹಿಳೆ ಮಿಚಿಗನ್ ಅಂಗಡಿ ವ್ಯವಸ್ಥಾಪಕರೊಂದಿಗೆ ವಾಗ್ವಾಧ ನಡೆಸುತ್ತಿದ್ದಾಳೆ. ಸಿಬ್ಬಂದಿ ಆ ಮಹಿಳೆಯನ್ನು ಎಷ್ಟೇ ಮನವೊಲಿಸಲು ಪ್ರಾರಂಭಿಸಿದರೂ, ಆಕೆ ಶಾಂತಗೊಳ್ಳದೇ ವಾದ ಮಾಡುತ್ತಿರುವುದನ್ನು ತೋರಿಸಲಾಗಿದೆ.
ಆರೋಪಿ ಮಹಿಳೆಯು ಸಿಬ್ಬಂದಿಯನ್ನು ಕೂಗುತ್ತಾ ಸುಳ್ಳುಗಾರ ಎಂದು ಕರೆಯುವುದರೊಂದಿಗೆ ಜಗಳ ಪ್ರಾರಂಭವಾಗುತ್ತದೆ. ಅದಕ್ಕೆ ಪ್ರತಿಕ್ರಿಯಿಸಿದ ಮ್ಯಾನೇಜರ್​ ನಿಮ್ಮ ಕಾಫಿ ಬಂದಿದೆ. ಇದಕ್ಕೆ ಶುಲ್ಕ ವಿಧಿಸಲಾಗಿದೆ. ನಿನ್ನ ಮರುಪಾವತಿಗೆ 48 ಗಂಟೆಗಳವರೆಗೆ ತೆಗೆದುಕೊಳ್ಳುತ್ತದೆ ಎಂದು ಹೇಳಿ ತಿರುಗಿದ್ದಾಳೆ. ಇದಕ್ಕೆ ಕೋಪಗೊಂಡ ಮಹಿಳೆಯು ಬಿಸಿ ಕಾಫಿಯನ್ನು ಸಿಬ್ಬಂದಿ ಬೆನ್ನಿನ ಮೇಲೆ ಎರಚಿದ್ದಾಳೆ.
ಪೊಲೀಸರು ಆ ಗ್ರಾಹಕನನ್ನು ಕ್ಯಾಶರಾ ಬ್ರೌನ್ (48) ಎಂದು ಗುರುತಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಆತಂಕಕಾರಿ ವಿಡಿಯೋ ಪೋಸ್ಟ್​ ಮಾಡಿದ ನಂತರ ಆಕೆಯ ಬಂಧನಕ್ಕೆ ವಾರಂಟ್ ಹೊರಡಿಸಲಾಗಿದೆ.
ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ, ಸಾಮಾಜಿಕ ಮಾಧ್ಯಮ ಬಳಕೆದಾರರು ಬ್ರೌನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಅವಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಶಿಕ್ಷೆ ವಿಧಿಸಬೇಕು ಎಂದು ಬಳಕೆದಾರರು ಕಮೆಂಟ್​ ಮಾಡಿದ್ದಾರೆ. ಮತ್ತೋರ್ವ ಇಂತಹ ವ್ಯಕ್ತಿಯೊಂದಿಗೆ ವ್ಯವಹರಿಸಲು ಯಾವುದೇ ಮೆಕ್‌ಡೊನಾಲ್ಡ್ಸ್ ಮ್ಯಾನೇಜರ್‌ಗೆ ಅಧಿಕ ಸಂಪಾದನೆ ಇರುವುದಿಲ್ಲ ಎಂದು ನಾನು ಭರವಸೆ ನೀಡಬಲ್ಲೆ ಎಂದು ಕಾಮೆಂಟ್ ಮಾಡಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net