ಅನೇಕ ಅರ್ಥಶಾಸ್ತ್ರಜ್ಞರು ಮತ್ತು ವಿಮರ್ಶಕರ ಪ್ರಕಾರ, 113 ಬಿಲಿಯನ್ ಡಾಲರ್ ಅಧಿಕೃತ ಸೇನಾ ವೆಚ್ಚವು ತೀರ ಕಡಿಮೆ. ಆದರೆ, ಅಮೆರಿಕ ಅನುಭವಿಸಿದ ಪರೋಕ್ಷ ಆರ್ಥಿಕ ನಷ್ಟಗಳನ್ನೂ ಇಲ್ಲಿ ಸೇರಿಸಿದರೆ, ಒಟ್ಟು ಹೊರೆ 1 ಟ್ರಿಲಿಯನ್ (9.43 ಲಕ್ಷ ಕೋಟಿ ರೂ.) ತಲುಪುತ್ತದೆ. ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ಏರಿಕೆಯಾದಂತೆ, ಅಮೇರಿಕನ್ ನಾಗರಿಕರು ಮಾತ್ರ ಸುಮಾರು 40 ಬಿಲಿಯನ್ ಡಾಲರ್ ಹೆಚ್ಚುವರಿ ಹೊರೆಯನ್ನು ಹೊರುವಂತ ಪರಿಸ್ಥಿತಿ ನಿರ್ಮಾಣವಾಯಿತು. ಆದಾಗ್ಯೂ, ಡೆಮಾಕ್ರಟಿಕ್ ನಾಯಕರು ಮತ್ತು ಪ್ರಮುಖ ಅರ್ಥಶಾಸ್ತ್ರಜ್ಞರ ಅಂದಾಜಿನ ಪ್ರಕಾರ, ಅಮೇರಿಕನ್ ಆರ್ಥಿಕತೆ ಮತ್ತು ಜನರಿಗೆ ಉಂಟಾದ ಹಾನಿ 630 ಬಿಲಿಯನ್‌ನಿಂದ 1 ಟ್ರಿಲಿಯನ್ ವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ.