ಮಧ್ಯರಾತ್ರಿ ಉಪಯೋಗಕ್ಕೆ ಬಂತು ಎಐ! ಹೋಟೆಲ್​ ರೂಮ್​ನಲ್ಲಿ ನಿದ್ರೆಗಿಂತ ಹುಡುಕಾಡಿದ್ದೇ ಜಾಸ್ತಿ ಈ ಪ್ರವಾಸಿಗ

ಎಐ
ಎಐ
Published on

ಪ್ರಮುಖ ಮುಖ್ಯಾಂಶಗಳು

  • ಉದ್ಯೋಗ ಕಸಿಯುತ್ತಿರುವ ಎಐಯಿಂದ ಹೀಗೊಂದು ಸಹಾಯ
  • ಮಧ್ಯರಾತ್ರಿಯಲ್ಲಿ ಉಂಟಾದ ಸಮಸ್ಯೆಗೆ ಕೃತಕ ಬುದ್ಧಿಮತ್ತೆಯಿಂದ ಸಿಕ್ಕಿತು ಉತ್ತರ
AI: ಇದು ಡಿಜಿಲಟ್​ ಯುಗ. ಅದರಲ್ಲೂ ಆರು ಇಂಚಿನ ಸ್ಮಾರ್ಟ್​​ಫೋನ್​ ಕೈಯುಲ್ಲಿದ್ದರೆ, ಪ್ರಪಂಚವೇ ಬೇಡ ಎನ್ನುವ ಕಾಲ. ಈ ಮಧ್ಯೆ, ಹೊಚ್ಚ ಹೊಸ ಆವಿಷ್ಕಾರಗಳು ಜಗತ್ತಿಗೆ ಪರಿಚಯವಾಗುತ್ತಿದ್ದು, ಇದಕ್ಕೆಲ್ಲ ಜನರು ಬಹಳ ವೇಗವಾಗಿ ಒಗ್ಗಿಕೊಳ್ಳುತ್ತಿದ್ದಾರೆ. ಇನ್ನು ಕೃತಕ ಬುದ್ಧಿಮತ್ತೆ (ಎಐ) ಕೆಲಸ ಮಾಡಲು ಆರಂಭಿಸಿದ ಮೇಲಂತು, ಬಹುತೇಕರ ಉದ್ಯೋಗಗಳೇ ಮಾಯಾವಾಗಿಬಿಟ್ಟಿದೆ. 
ಎಐ ಟೆಕ್ನಾಲಜಿ ಈಗಾಗಲೇ ಸಾಫ್ಟ್​ವೇರ್​ ಉದ್ಯೋಗಿಗಳ ಕೆಲಸವನ್ನು ಕಸಿದುಕೊಂಡಿದೆ. ಅದರೊಟ್ಟಿಗೆ, ಹಲವು ಕೆಲಸಗಳನ್ನು ತಾನೇ ಸುಲಭವಾಗಿ, ಕಡಿಮೆ ಸಮಯದಲ್ಲಿ ಮುಗಿಸುವ ಸಾಮರ್ಥ್ಯವನ್ನು ಬಳಕೆದಾರರಿಗೆ ಸಾಬೀತುಪಡಿಸಿದೆ. ಇದು ಉದ್ಯೋಗಿಗಳ ಜೀವನೋಪಾಯಕ್ಕೆ ಕೊಡಲಿ ಪೆಟ್ಟು ನೀಡಿರುವುದು ಸದ್ಯ ಚಿಂತಾತೀತ. ಈ ಮಧ್ಯೆ, ಕೃತಕ ಬುದ್ಧಿಮತ್ತೆಯಿಂದ ಸಾಕಷ್ಟು ಲಾಭ ಕೂಡ ಆಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಉಪಯುಕ್ತ ಕೆಲಸಗಳಿಗೆ ಬಳಕೆಯಾಗುತ್ತಿದೆ. ಗೊತ್ತಿರದ ಪ್ರಶ್ನೆಗಳು ಅಥವಾ ಇದೇನಿದು ಎಂದು ತಿಳಿದುಕೊಳ್ಳಲು ಎಐ ಸಹಾಯ ಮಾಡುತ್ತಿದೆ. ಇದಕ್ಕೆ ಇಲ್ಲೊಂದು ಘಟನೆ ಜ್ವಲಂತ ಸಾಕ್ಷಿ.    
ಅಮೆರಿಕ ಮೂಲದ ಪ್ರಯಾಣಿಕರೊಬ್ಬರು, ಜಪಾನ್​ಗೆ ತೆರಳಿದ್ದಾಗ, ಅಲ್ಲಿನ ಹೋಟೆಲ್​ ರೂಮ್​ನಲ್ಲಿ ಉಳಿದುಕೊಂಡಿದ್ದರು. ಈ ವೇಳೆ, ಜಪಾನಿನ ಭಾಷೆ ಗೊತ್ತಿರದ ಅವರು, ಇಂಗ್ಲಿಷ್​ನಲ್ಲೇ ಸಿಬ್ಬಂದಿಗಳೊಂದಿಗೆ ವ್ಯವಹರಿಸಿದ್ದಾರೆ. ಆದರೆ, ರೂಮ್​ನಲ್ಲಿದ್ದ ಎಸಿ ರಿಮೋಟ್​ ಮೇಲಿದ್ದ ಜಪಾನ್​ ಭಾಷೆಯನ್ನು ಕಂಡು ಒಂದು ನಿಮಿಷ ತಲೆಕೆಡಿಸಿಕೊಂಡಿದ್ದಾರೆ. ಮಧ್ಯರಾತ್ರಿಯಲ್ಲಿ ನಿದ್ರೆಗೆ ಭಂಗ ಉಂಟಾದ ಕಾರಣ, ಎಸಿ ಬೇಕೆನ್ನಿಸಿದೆ. ಆದರೆ, ಆ ಸಮಯದಲ್ಲಿ ಯಾರನ್ನೂ ಕರೆಯೋದು? ಏನು ಮಾಡೋದು ಎಂದು ಯೋಚಿಸಿದ ವ್ಯಕ್ತಿ, ರಿಮೋಟ್​ನ ಫೋಟೋವನ್ನು ಎಐಗೆ ಹಾಕಿದ್ದೇ ತಡ ಕ್ಷಣಮಾತ್ರದಲ್ಲಿ ಸಮಸ್ಯೆ ಬಗೆಹರಿದಿದೆ.  
ರಿಮೋಟ್​ನ ಬಟನ್​ಗಳ ಮೇಲೆ ಜಪಾನ್​ ಭಾಷೆಯಿತ್ತು. ಹೀಗಾಗಿ, ಯಾವುದು ಆನ್​, ಕಂಟ್ರೋಲ್​ ಎಂಬುದು ಅವರಿಗೆ ತಿಳಿಯಲಿಲ್ಲ. ಈ ನಿಟ್ಟಿನಲ್ಲಿ, ಅದರ ಫೋಟೋವನ್ನು ತೆಗೆದು ಎಐಗೆ ಹಾಕಿದ ವ್ಯಕ್ತಿ, ಇದನ್ನು ಇಂಗ್ಲಿಷ್​ನಲ್ಲಿ ಕೊಡು ಎಂದಿದ್ದಾರೆ. ಕೂಡಲೇ ಅದೇ ಇಮೇಜ್​ ಅನ್ನು ಆಂಗ್ಲ ಭಾಷೆಯಲ್ಲಿ ಕೃತಕ ಬುದ್ಧಿಮತ್ತೆ ನೀಡಿತು. ಈ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ವ್ಯಕ್ತಿ, ಎಐ ತನಗೆ ಮಾಡಿದ ಸಹಾಯವನ್ನು ಇತರರಿಗೂ ತಿಳಿಸಿದ್ದಾರೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net