

ಶುಕ್ರವಾರ ಇರಾನ್ ಮೇಲೆ ಅಮೆರಿಕ ಸೇನೆಯು ಮತ್ತೊಂದು ಸುತ್ತಿನ ದಾಳಿ ನಡೆಸಿದೆ .
ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆ ಮೇಲೆ ದಾಳಿ ನಡೆಸಿದ ಬಗ್ಗೆ ಡೊನಾಲ್ಡ್ ಟ್ರಂಪ್ ಮಾಹಿತಿ.
ಹಾರ್ಮುಜ್ ಜಲಸಂಧಿಯಲ್ಲಿರುವ ಕೇಶ್ಮ್ ದ್ವೀಪದ ಸುಜಾ ಪ್ರದೇಶದಲ್ಲಿ ಎರಡು ಸ್ಫೋಟದ ಸದ್ದು ಕೇಳಿ ಬಂದ ಬಗ್ಗೆ ಮಾಹಿತಿ .
ವಾಷಿಂಗ್ಟನ್,ಟೆಹ್ರಾನ್: ಅಮೆರಿಕ ಮತ್ತೆ ಇರಾನ್ ಮೇಲೆ ಮುಗಿಬಿದ್ದಿದ್ದು, ಇಲ್ಲಿನ ಕೇಶ್ಮ್ ದ್ವೀಪದ ಮೇಲೆ ಎರಡು ಕ್ಷಿಪಣಿಗಳು ಅಪ್ಪಳಿಸಿವೆ ಎಂದು ವಿದೇಶಿ ಮಾಧ್ಯಮಗಳು ವರರಿಯಾಗಿದೆ. ಅಮೆರಿಕದ ಮಧ್ಯಂತರ ಚುನಾವಣೆಯ ಫಲಿತಾಂಶ ಪ್ರಕಟವಾಗಲು ಇನ್ನೇನು ಕೆಲವೇ ಗಂಟೆಗಳು ಇರುವಾಗ ಅಮೆರಿಕ ಸೇನೆ ಈ ದಾಳಿ ನಡೆಸಿದೆ ಎನ್ನಲಾಗುತ್ತಿದೆ.
ಫೆಬ್ರವರಿಯಲ್ಲಿ ಅಮೆರಿಕ-ಇರಾನ್ ಯುದ್ಧ ಆರಂಭವಾದಾಗಿನಿಂದ ತೈಲ ಸಾಗಣೆಗೆ ಅತ್ಯಂತ ದೊಡ್ಡ ಮಾರ್ಗವಾಗಿರುವ ಹೊರ್ಮುಜ್ ಜಲಸಂಧಿಯ ಪ್ರದೇಶದಲ್ಲಿ ಅಶಾಂತಿ ಮುಂದುವರಿದಿದೆ. ಸದ್ಯ ಜಲಸಂಧಿಯಲ್ಲಿರುವ ಕೇಶ್ಮ್ ದ್ವೀಪದ ಸುಜಾ ಪ್ರದೇಶದಲ್ಲಿ ಎರಡು ಸ್ಫೋಟಗಳ ಸದ್ದು ಕೇಳಿಬಂದಿದೆ ಎಂದು ಇರಾನಿನ ರಾಜ್ಯ ಮಾಧ್ಯಮಗಳು ವರದಿ ಮಾಡಿವೆ.
ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಮತ್ತು ಇರಾನ್ ಒಪ್ಪಂದಕ್ಕೆ ಬರಲು ವಿಫಲವಾಗಿವೆ ಎಂದು ಕೇಳಿ ಬರುತ್ತಿರುವ ಸುದ್ದಿಗಳು, ವರದಿಗಳನ್ನು ಕತಾರ್ ನಿರಾಕರಿಸಿದೆ. ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ವಿಮಾನವು ಸಂಚರಿಸುತ್ತಿದ್ದ ವೇಳೆ ಅದನ್ನು ಹೊಡೆದುರುಳಿಸಲು ಇರಾನ್ ಯತ್ನಿಸಿತ್ತು. ಇದನ್ನೇ ಗುರಿಯಾಗಿಸಿಕೊಂಡ ಅಮೆರಿಕ ಸೆಂಟ್ರಲ್ ಕಮಾಂಡ್ ಆತ್ಮರಕ್ಷಣೆಗಾಗಿ ಕ್ಷಿಪಣಿ ದಾಳಿ ಮಾಡಲಾಗಿದೆ ಎಂದು ಸ್ಟಷ್ಟ ಪಡಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, 'ಇರಾನ್ ಮೇಲೆ ಹೊಸ ಸುತ್ತಿನ ಸೀಮಿತ ದಾಳಿಗಳನ್ನು ನಡೆಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದು, ಇದು ಕೇವಲ ಸಣ್ಣ ದಾಳಿ ಎಂದು ಬಣ್ಣಿಸಿದ್ದಾರೆ. 'ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಯನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ. ಅವರು ಸ್ವಲ್ಪ ಆಂಟಿ-ಏರ್‌ಕ್ರಾಫ್ಟ್ ಸಾಧನವನ್ನು ನಿರ್ಮಿಸಿದ್ದರು, ಅದನ್ನು ನಾವು ಸುಮಾರು 15 ನಿಮಿಷಗಳಲ್ಲಿ, ಬಹುಶಃ ಐದು ನಿಮಿಷಗಳಲ್ಲಿ ನಾಶಪಡಿಸಿದೆವು' ಎಂದು ಹೇಳಿದರು.
ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಮಿಲಿಟರಿ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡುವ ಯುಎಸ್ ಸೆಂಟ್ರಲ್ ಕಮಾಂಡ್, ಶುಕ್ರವಾರ ತಡರಾತ್ರಿ 'ಎಕ್ಸ್' ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಇರಾನ್‌ನ ಪರಮಾಣು ಕಾರ್ಯಕ್ರಮ, ಅದರ ಸೌಲಭ್ಯಗಳು, ಉಪಕರಣಗಳು ಮತ್ತು ವಿಜ್ಞಾನಿಗಳಂತಹ ಸಂಬಂಧಿತ ಸಿಬ್ಬಂದಿಗಳ ಬಗ್ಗೆ ಮಾಹಿತಿ ನೀಡುವವರಿಗೆ 20 ಮಿಲಿಯನ್ ಡಾಲರ್‌ವರೆಗೆ ಬಹುಮಾನ ಹಾಗೂ ಸ್ಥಳಾಂತರದ ನೆರವು ನೀಡುವುದಾಗಿ ಘೋಷಿಸಿದೆ. ಈ ಪೋಸ್ಟ್‌ನಲ್ಲಿ ಸ್ಟೇಟ್ ಡಿಪಾರ್ಟ್‌ಮೆಂಟ್‌ನ 'ರಿವಾರ್ಡ್ಸ್ ಫಾರ್ ಜಸ್ಟೀಸ್' ಕಾರ್ಯಕ್ರಮದ ಲಿಂಕ್ ಅನ್ನು ಸಹ ನೀಡಲಾಗಿದೆ,(ಏಜೆನ್ಸೀಸ್).