ಹಳೇ ಪ್ಯಾಂಟ್ ಜೇಬಲ್ಲೇ ಇತ್ತು 57 ಕೋಟಿ ರೂ.; ಸಾಮಾನ್ಯ ವ್ಯಕ್ತಿ ಜಗತ್ತೇ ತಿರುಗಿ ನೋಡುವಂತ ಕೋಟ್ಯಾಧಿಪತಿಯಾದ ರೋಚಕ ಸ್ಟೋರಿ! Lottery Winner

Lottery Winner (ಚಿತ್ರ X)
Lottery Winner (ಚಿತ್ರ X)
Published on

ಪ್ರಮುಖ ಮುಖ್ಯಾಂಶಗಳು

  • ನಾಳೆ ಏನಾಗುತ್ತದೆಯೋ ಯಾರಿಗೂ ತಿಳಿಯದು, ಆದರೆ ಕೆಲವೊಮ್ಮೆ ಅದೃಷ್ಟ ನಮ್ಮ ಪಕ್ಕದಲ್ಲೇ ಇದ್ದರೂ ಗೊತ್ತಾಗಲ್ಲ
  • ಪ್ಯಾಂಟ್‌ ಜೇಬಿನಲ್ಲಿ ಮರೆತುಹೋಗಿದ್ದ ಲಾಟರಿ ಟಿಕೆಟ್​ವೊಂದು ಅವಧಿ ಮುಗಿಯುವ ಮುನ್ನ ಸಿಕ್ಕಿದೆ
  • ವ್ಯಕ್ತಿ ಗೆದ್ದ ಒಟ್ಟು ಮೊತ್ತ ಬರೋಬ್ಬರಿ 5.9 ಮಿಲಿಯನ್ ಡಾಲರ್, ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು 57.11 ಕೋಟಿ ರೂಪಾಯಿ
Lottery Winner: ನಾಳೆ ಏನಾಗುತ್ತದೆಯೋ ಯಾರಿಗೂ ತಿಳಿಯದು, ಆದರೆ ಕೆಲವೊಮ್ಮೆ ಅದೃಷ್ಟ ನಮ್ಮ ಪಕ್ಕದಲ್ಲೇ ಇದ್ದರೂ ನಮಗೆ ತಿಳಿಯುವುದಿಲ್ಲ. ಇಂತಹದ್ದೇ ಒಂದು ನಂಬಲಸಾಧ್ಯವಾದ ಮತ್ತು ರೋಮಾಂಚನಕಾರಿ ಘಟನೆ ಅಮೆರಿಕದಲ್ಲಿ ನಡೆದಿದೆ. ಹಳೆಯ ಪ್ಯಾಂಟ್‌ ಒಂದರ ಜೇಬಿನಲ್ಲಿ ಮರೆತುಹೋಗಿದ್ದ ಲಾಟರಿ ಟಿಕೆಟ್ ಕೇವಲ ಕೆಲವೇ ದಿನಗಳಲ್ಲಿ ಅವಧಿ ಮುಗಿಯುವ ಮುನ್ನ ಸಿಕ್ಕಿದ್ದು, ಆ ವ್ಯಕ್ತಿಯನ್ನು ರಾತ್ರೋರಾತ್ರಿ ಕೋಟ್ಯಧಿಪತಿಯನ್ನಾಗಿ ಮಾಡಿದೆ. ಆ ವ್ಯಕ್ತಿ ಗೆದ್ದ ಒಟ್ಟು ಮೊತ್ತ ಬರೋಬ್ಬರಿ 5.9 ಮಿಲಿಯನ್ ಡಾಲರ್, ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು 57.11 ಕೋಟಿ ರೂಪಾಯಿಗಳು.
ಪೀಪಲ್ ಮ್ಯಾಗಜೀನ್ ವರದಿ ಪ್ರಕಾರ , ನ್ಯೂಜೆರ್ಸಿಯ ಆ ವ್ಯಕ್ತಿ ಕಳೆದ ವರ್ಷ ಮೇ ತಿಂಗಳಲ್ಲಿ ತಾವು ನಿಯಮಿತವಾಗಿ ಭೇಟಿ ನೀಡುತ್ತಿದ್ದ ಗ್ಯಾಸ್​ ಸ್ಟೇಷನ್​ನಿಂದ ಪಿಕ್​-6 ಲಾಟರಿ ಟಿಕೆಟ್​ ಖರೀದಿಸಿದ್ದರು. ನಂತರ ತಮ್ಮ ಹಳೆಯ ಪ್ಯಾಂಟಿನ ಜೇಬಿನಲ್ಲಿಟ್ಟು ಸಂಪೂರ್ಣವಾಗಿ ಮರೆತುಬಿಟ್ಟಿದ್ದರು. 
ಕಳೆದ ತಿಂಗಳು, ಲಾಟರಿ ಅಧಿಕಾರಿಗಳು ಲಾಟರಿ ಹೊಡೆದ ಟಿಕೆಟ್​ ಹಕ್ಕು ಪಡೆಯದೆ ಉಳಿದಿದೆ ಮತ್ತು ಶೀಘ್ರದಲ್ಲೇ ಅವಧಿ ಮುಗಿಯುತ್ತದೆ ಎಂದು ಸಾರ್ವಜನಿಕ ಪ್ರಕಟಣೆ ಹೊರಡಿಸಿದರು. ಆ ವ್ಯಕ್ತಿ ಟಿಕೆಟ್​ನ್ನು ಪೆಟ್ರೋಲ್​ ಬಂಕ್​ನಲ್ಲಿ ಪಡೆದುಕೊಂಡಿದ್ದರಿಂದ ಆ ಪ್ರಕಟಣೆ ಅವರ ಗಮನ ಸೆಳೆಯಿತು.
ಕುತೂಹಲದಿಂದ ಅವರು ನಿಲ್ದಾಣಕ್ಕೆ ಹೋಗಿ ಅಲ್ಲಿನ ಉದ್ಯೋಗಿಗಳೊಂದಿಗೆ ಮಾತನಾಡಿದಾಗ, ಕೇವಲ ಕೆಲವೇ ಕೆಲವು ನಿಯಮಿತ ಗ್ರಾಹಕರು ಪಿಕ್-6' ಲಾಟರಿ ಆಟವನ್ನು ಆಡುವವರಾಗಿದ್ದರು ಎಂದು ಸಿಬ್ಬಂದಿ ತಿಳಿಸಿದದ್ದಾರೆ. ಆದಾಗ್ಯೂ, ಬಂಪರ್ ಬಹುಮಾನ ಗೆದ್ದವರು ಬೇರೆ ಯಾರೂ ಅಲ್ಲ, ತಮ್ಮ ನಿಲ್ದಾಣಕ್ಕೆ ಬರುವ ಆ ಕೆಲವು ಗ್ರಾಹಕರಲ್ಲಿ ಒಬ್ಬರೇ ಇರಬೇಕು ಎಂದು ಸೂಚನೆ ನೀಡಿದರು. 
ನಂತರ ಆ ವ್ಯಕ್ತಿ ತನ್ನ ಮನೆಯನ್ನು ಹುಡುಕಲು ಪ್ರಾರಂಭಿಸಿದನು, ಡ್ರಾಯರ್‌ಗಳು, ಕಪಾಟುಗಳು ಮತ್ತು ಶೇಖರಣಾ ಸ್ಥಳಗಳನ್ನು ಎಲ್ಲವನ್ನು ಪರಿಶೀಲಿಸಿದರು. ಆದಾಗ್ಯೂ, ಅಂತಿಮವಾಗಿ ಅವರು ತಮ್ಮ ಹಳೆಯ ಬಟ್ಟೆಗಳನ್ನು ಪರಿಶೀಲನೆ ನಡೆಸಿದರು. ಆಗ ಹಳೆಯ ಪ್ಯಾಂಟ್​ನ ಜೇಬಿನಲ್ಲಿ ಅಡಗಿಸಿಟ್ಟಿದ್ದ ಸುಕ್ಕುಗಟ್ಟಿದ ಲಾಟರಿ ಟಿಕೆಟ್​ನ್ನು ಕಂಡುಕೊಂಡನು. 
ಸಂಖ್ಯೆಗಳನ್ನು ಪರಿಶೀಲಿಸಿದ ನಂತರ, ಅವರು $5.9 ಮಿಲಿಯನ್ (ಸರಿಸುಮಾರು ರೂ. 57.11 ಕೋಟಿ) ಮೌಲ್ಯದ ವಿಜೇತ ಟಿಕೆಟ್ ಅನ್ನು ಹೊಂದಿದ್ದಾರೆಂದು ಅರಿತುಕೊಂಡು, ತಕ್ಷಣವೇ ಲಾಟರಿ ಪ್ರಧಾನ ಕಚೇರಿಗೆ ಧಾವಿಸಿ ಅವಧಿ ಮುಗಿಯುವ ಕೇವಲ ಎಂಟು ದಿನಗಳ ಮೊದಲು ಬಹುಮಾನವನ್ನು ಪಡೆದರು. 
ನಂತರ ಲಾಟರಿ ಅಧಿಕಾರಿಗಳು ಹಳೆಯ ಟಿಕೆಟ್‌ಗಳನ್ನು ನಿಯಮಿತವಾಗಿ ಪರಿಶೀಲಿಸುವಂತೆ ಜನರನ್ನು ಒತ್ತಾಯಿಸಿದರು. ವಿಜೇತರು ಅವುಗಳನ್ನು ಇಟ್ಟು ಮರೆಯುವುದರಿಂದ ಅನೇಕ ಬಹುಮಾನಗಳು ಸಿಗದೇ ಹೋಗುತ್ತವೆ ಎಂದು ಹೇಳಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net