ಅಮೆರಿಕದ ಜೊತೆಗೆ ನೇರವಾಗಿ ಮಾತನಾಡಲು ನಮಗೆ ಇಷ್ಟವಿಲ್ಲ ಎಂದು ಇರಾನ್ ಹೇಳಿದೆ. ಹೀಗಾಗಿ, ಪಾಕಿಸ್ತಾನ, ಟರ್ಕಿ ಮತ್ತು ಈಜಿಪ್ಟ್ ದೇಶಗಳು ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ, ಈ ಒಪ್ಪಂದದ ಪ್ರಕಾರ, ತಕ್ಷಣದ ಕದನ ವಿರಾಮದ ಬಳಿಕ ವಿಶಾಲ ಮತ್ತು ಸಮಗ್ರ ಒಪ್ಪಂದದೊಂದಿಗೆ ಎರಡು ಹಂತದ ಪ್ರಕ್ರಿಯೆ ಇದೆ. ವರದಿಗಳ ಪ್ರಕಾರ, ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್, ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ಟ್ರಂಪ್ ಅವರ ವಿಶೇಷ ರಾಯಭಾರಿ ಸ್ಟೀವ್ ವಿಟ್ಟಾಕ್ ಮತ್ತು ಇರಾನಿನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಒಪ್ಪಂದದ ಬಗ್ಗೆ ಚರ್ಚಿಸುತ್ತಿದ್ದಾರೆ ಎಂದು ವರದಿಯಾಗಿದೆ.