ಮಾತಿಗಷ್ಟೇ ಶಾಂತಿ ಒಪ್ಪಂದ! ಬಹ್ರೇನ್, ಕುವೈತ್, ಕತಾರ್‌ ಮೇಲೆ ಇರಾನ್​ ದಾಳಿ; ಟ್ರಂಪ್​ಗೆ ಮತ್ತೊಮ್ಮೆ ಎಚ್ಚರಿಕೆ

ಇರಾನ್​ ಸುಪ್ರೀಂ ಲೀಡರ್​ ಅಂತ್ಯಕ್ರಿಯೆ ಕ್ಷಣಗಳು
ಇರಾನ್​ ಸುಪ್ರೀಂ ಲೀಡರ್​ ಅಂತ್ಯಕ್ರಿಯೆ ಕ್ಷಣಗಳು
Published on

ಪ್ರಮುಖ ಮುಖ್ಯಾಂಶಗಳು

  • ಕುವೈತ್, ಕತಾರ್ ಮತ್ತು ಬಹ್ರೇನ್‌ ಮೇಲೆ ಇರಾನ್ ದಾಳಿ
  • ಯುಎಸ್ ದಾಳಿಯಲ್ಲಿ ಇರಾನ್​14 ಸಾವು, 78 ಮಂದಿಗೆ ಗಾಯ
  • ಅಮೆರಿಕ ನಡೆಸಿದ ದಾಳಿಗೆ ಇದು ಪ್ರತಿಕಾರ ಎಂದ ಇರಾನ್​
US-Iran War: ಕೆಲವು ವಾರಗಳ ಹಿಂದೆಯಷ್ಟೇ ಇರಾನ್​ ಮತ್ತು ಅಮೆರಿಕ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿ, ಹೊರ್ಮುಜ್​ ಜಲಮಾರ್ಗವನ್ನು ಸಂಚಾರಕ್ಕೆ ಮುಕ್ತ ಮಾಡಿತ್ತು. ಆದರೀಗ, ಡೀಲ್​ ಕೇವಲ ಮಾತಿಗಷ್ಟೇ ಎನ್ನುವಂತೆ ಮತ್ತೊಮ್ಮೆ ಪರಸ್ಪರ ದಾಳಿ ಪ್ರಾರಂಭಿಸಿರುವ ಎರಡೂ ರಾಷ್ಟ್ರಗಳು, ಇದೀಗ ಎರಡನೇ ಬಾರಿಗೆ ಯುದ್ಧದ ಕಾರ್ಮೋಡಕ್ಕೆ ಸಾಕ್ಷಿಯಾಗಿವೆ.
ಅಮೆರಿಕ ಎರಡು ರಾತ್ರಿ ತಮ್ಮ ದೇಶದ ನೆಲೆಗಳ ಮೇಲೆ ಬಾಂಬ್ ದಾಳಿ ನಡೆಸಿದ್ದಕ್ಕೆ ಪ್ರತಿಕಾರವಾಗಿ ಇದೀಗ ಟ್ರಂಪ್​ನ ಮಿತ್ರ ರಾಷ್ಟ್ರಗಳಾದ ಬಹ್ರೇನ್, ಕುವೈತ್ ಮತ್ತು ಕತಾರ್‌ನಲ್ಲಿನ ಯುಎಸ್ ನೆಲೆ ಮತ್ತು ಕಾರ್ಯತಂತ್ರದ ಕೇಂದ್ರಗಳ ಮೇಲೆ ಅಟ್ಯಾಕ್​ ಮಾಡಿರುವುದಾಗಿ ಇರಾನ್​ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಬುಶೆಹರ್, ಚಬಹಾರ್, ಬಂದರ್ ಅಬ್ಬಾಸ್ ಮತ್ತು ಸಿರಿಕ್ ಸೇರಿದಂತೆ ಹೊರ್ಮುಜ್ ಜಲಸಂಧಿಯ ಉದ್ದಕ್ಕೂ ಅಮೆರಿಕ ನಡೆಸಿದ ಎರಡು ದಿನಗಳ ದಾಳಿಯಲ್ಲಿ 14 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 78 ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್​ ತಿಳಿಸಿದೆ. ಅತ್ತ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹೊರ್ಮುಜ್ ಮೂಲಕ ಸಾಗಿಸುವ ಹಡಗುಗಳ ಮೇಲೆ ಇರಾನಿನ ದಾಳಿಗೆ ಇದು ಪ್ರತ್ಯುತ್ತರ ಎಂದು ಹೇಳಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net