ಹೊಸ ವರ್ಷಾಚರಣೆ ವೇಳೆ ಐಸಿಸ್ ಉಗ್ರಕೃತ್ಯ ವಿಫಲಗೊಳಿಸಿದ ಎಫ್ಬಿಐ; 18 ವರ್ಷದ ಯುವಕನೊಬ್ಬನ ಬಂಧನ | FBI
ಶಂಕಿತ ಕ್ರಿಶ್ಚಿಯನ್ ಸ್ಟರ್ಡಿವಂಟ್
Published on:
Copied
Follow Us
ನ್ಯೂಯಾರ್ಕ್: ಅಮೆರಿಕಾದ ಉತ್ತರ ಕೆರೊಲಿನಾದಲ್ಲಿ ಹೊಸ ವರ್ಷಾಚರಣೆ ವೇಳೆ ಐಸಿಸ್ ಉಗ್ರಕೃತ್ಯ ನಡೆಸಲು ರೂಪಿಸಿದ್ದ ಸಂಚನ್ನು ವಿಫಲಗೊಳಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 18 ವರ್ಷದ ಓರ್ವನನ್ನು ಬಂಧಿಸಲಾಗಿದೆ ಎಂದು ಎಫ್ಬಿಐ ಅಧಿಕಾರಿಗಳು ಶುಕ್ರವಾರ(ಜ. 02) ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಎಫ್ಬಿಐ, ಶಂಕಿತ ಕ್ರಿಶ್ಚಿಯನ್ ಸ್ಟರ್ಡಿವಂಟ್ (18) ಎಂಬ ಯುವಕನನ್ನು ಬಂಧಿಸಲಾಗಿದೆ. ವಿದೇಶಿದಲ್ಲಿದ್ದಾಗ ಐಸಿಸ್ ವ್ಯಕ್ತಿಯ ಸಂಪರ್ಕದಲ್ಲಿ ಈತನ ಮೇಲೆ 2022ರಿಂದಲೂ ನಿಗಾ ಇಡಲಾಗಿದೆ. ಐಸಿಸ್ ನಿರ್ವಾಹಕ ಕಪ್ಪು ಬಟ್ಟೆ ಧರಿಸಿ ಸುತ್ತಿಗೆ ಮತ್ತು ಚಾಕುಗಳನ್ನು ಬಳಸಿ ಜಿಹಾದಿ ಶೈಲಿಯ ದಾಳಿ ನಡೆಸುವಂತೆ ಸ್ಟರ್ಡಿವಂಟ್ಗೆ ಸೂಚಿಸಲಾಗಿತ್ತು ಎಂದು ತಿಳಿಸಿದೆ.
ತನ್ನನ್ನು ಉಗ್ರ ಎಂದು ಪರಿಚಯಿಸಿಕೊಂಡ ಅಧಿಕಾರಿಯೊಬ್ಬರು ಸ್ಟರ್ಡಿವಂಟ್ ಜೊತೆ ಸ್ನೇಹ ಬೆಳೆಸಿದರು. ಈ ಪ್ರಕ್ರಿಯೆಯಲ್ಲಿ, ಶಂಕಿತನು ತನ್ನ ಯೋಜನೆಗಳನ್ನು ಅವನೊಂದಿಗೆ ಹಂಚಿಕೊಂಡು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಡಿ. 29ರಂದು ಅಧಿಕಾರಿಗಳು ಅವನ ಮನೆಯನ್ನು ಶೋಧಿಸಿದ್ದಾರೆ. ಅಲ್ಲಿ ನ್ಯೂಯಾರ್ಕ್ ದಾಳಿ-2026 ಎಂದು ಬರೆದಿರುವ ಬರಹವನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಆ ಬರಹದಲ್ಲಿ ಚಾಕುಗಳು, ಮುಖವಾಡಗಳು ಸೇರಿದಂತೆ ಇತರ ವಸ್ತುಗಳು ಪಟ್ಟಿಯೂ ಇತ್ತು. ಪೊಲೀಸರು ಕೊಲ್ಲುವ ಮೊದಲು ಚಾಕುಗಳು ಮತ್ತು ಸುತ್ತಿಗೆಗಳಿಂದ ಬಹು ಜನರ ಮೇಲೆ ದಾಳಿಯ ಬಗ್ಗೆ ವಿವರಿಸಲಾಗಿತ್ತು ಎಂದು ತಿಳಿಸಿದ್ದು, ಪ್ರಸ್ತುತ ಶಂಕಿತ ಉಗ್ರ ಯುಎಸ್ ಫೆಡರಲ್ ಕಸ್ಟಡಿಯಲ್ಲಿದ್ದಾನೆ ಎಂದು ಹೇಳಿದೆ.
ಇನ್ನೂ ಭಯೋತ್ಪಾದಕ ದಾಳಿಯನ್ನು ವಿಫಲಗೊಳಿಸಿದ್ದಕ್ಕೆ, ಎಫ್ಬಿಐ ನಿರ್ದೇಶಕ ಕಾಶ್ ಪಟೇಲ್ ಅಧಿಕಾರಿಗಳನ್ನು ಅಭಿನಂದಿಸಿದ್ದಾರೆ. ಒಟ್ಟಾಗಿ ನಾವು ಅನೇಕ ಜೀವಗಳನ್ನು ಉಳಿಸಲು ಸಾಧ್ಯವಾಯಿತು ಎಂದಿದ್ದಾರೆ (ಏಜೆನ್ಸೀಸ್).