ಮಧ್ಯಂತರ ಚುನಾವಣೆ ಬಗ್ಗೆ ಮಾತನಾಡಿರುವ ಡೊನಾಲ್ಡ್ ಟ್ರಂಪ್, ನೀವು ರಿಪಬ್ಲಿಕ್ ಪಕ್ಷಕ್ಕೆ ಮತ ನೀಡಿದರೆ ಮಾತ್ರ ದೇಶ ಸುಭಿಕ್ಷವಾಗಿ, ಮುಂದಿನ 200-250 ವರ್ಷಗಳ ಕಾಲ ಸದೃಡ ಆಡಳಿತವನ್ನು ಕಾಣಲಿದೆ. ಒಂದು ವೇಳೆ ನಮ್ಮನ್ನು ಬಿಟ್ಟು ಬೇರೆ ಪಕ್ಷಕ್ಕೆ ಮತ ನೀಡಿದರೆ, ಅಲ್ಲಿಗೆ ಅಮೆರಿಕದಲ್ಲಿ ಕಮ್ಯೂನಿಸ್ಟ್ ಸಿದ್ಧಾಂತದ ಜನರಿಗೆ ಅಧಿಕಾರ ದೊರೆತು, ದೇಶ ನಾಶವಾಗಲಿದೆ ಎಂದು ಎಚ್ಚರಿಸಿದ್ದಾರೆ.