ಅಮೆರಿಕ ಟು ಇಂಡಿಯಾ: 'ಆಂಟಿಗಳ' ಪ್ರಶ್ನೆ ಮತ್ತು ಟ್ರಾಫಿಕ್ ಗದ್ದಲದ ನಡುವೆ ಭಾರತವನ್ನು ಪ್ರೀತಿಸಲು ಕಲಿತ 22ರ ಯುವತಿ! Culture Shock

Culture Shock (ಸಾಂದರ್ಭಿಕ ಚಿತ್ರ)
Culture Shock (ಸಾಂದರ್ಭಿಕ ಚಿತ್ರ)
Published on

ಪ್ರಮುಖ ಮುಖ್ಯಾಂಶಗಳು

  • ಭಾರತಕ್ಕೆ ಸ್ಥಳಾಂತರಗೊಳ್ಳುವ ನಿರ್ಧಾರ ತಿಳಿಸಿದಾಗ ಯುವತಿ ಅನುಭವಿಸಿದ ಆತಂಕದ ಬಗ್ಗೆ ಪೋಸ್ಟ್ ವೈರಲ್​
  • ಅಮೆರಿಕಾದ ನಿವಾಸಿಯೊಬ್ಬರು ಚಿಕ್ಕ ವಯಸ್ಸಿನಿಂದಲೂ ಭಾರತದ ಬಗ್ಗೆ ನಕರಾತ್ಮಕ ವಿಚಾರಗಳನ್ನೇ ಕೇಳುತ್ತಿದ್ದರಂತೆ
  • ಜನಸಂಖ್ಯೆ ಹೆಚ್ಚಳ, ಅಶುಚಿತ್ವ ಮತ್ತು ಭದ್ರತೆಯ ಕೊರತೆಯಂತಹ ತಪ್ಪು ಕಲ್ಪನೆಗಳು ಆಕೆಯ ಮನಸ್ಸಿನಲ್ಲಿ ಆಳವಾಗಿ ಬೇರೂರಿದ್ದವು
  • ಭಾರತದಲ್ಲಿ ಎಲ್ಲವೂ ಪರಿಪೂರ್ಣವಾಗಿದೆ ಎಂದು ನಾನು ಹೇಳುವುದಿಲ್ಲ. ನಾನಿನ್ನೂ ಈ ದೇಶಕ್ಕೆ ಹೊಂದಿಕೊಳ್ಳುತ್ತಿದ್ದೇನೆ
Culture Shock: ಅಮೆರಿಕದಲ್ಲಿ ಹುಟ್ಟಿ ಬೆಳೆದ 22 ವರ್ಷದ ಯುವತಿಯೊಬ್ಬರು, ತಮ್ಮ ತಾಯಿ ಭಾರತಕ್ಕೆ ಸ್ಥಳಾಂತರಗೊಳ್ಳುವ ನಿರ್ಧಾರ ತಿಳಿಸಿದಾಗ ಅನುಭವಿಸಿದ ಆತಂಕದ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು, ಸಧ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ನಕಾರಾತ್ಮಕ ಸ್ಟೀರಿಯೊಟೈಪ್‌ಗಳ ಭಯ

ಯುವತಿಯು ಚಿಕ್ಕ ವಯಸ್ಸಿನಿಂದಲೂ ಭಾರತದ ಬಗ್ಗೆ ನಕರಾತ್ಮಕ ವಿಚಾರಗಳನ್ನೇ ಕೇಳುತ್ತಿದ್ದರಂತೆ. ಜನಸಂಖ್ಯೆ ಹೆಚ್ಚಳ, ಅಶುಚಿತ್ವ ಮತ್ತು ಭದ್ರತೆಯ ಕೊರತೆಯಂತಹ ತಪ್ಪು ಕಲ್ಪನೆಗಳು (Stereotypes) ಆಕೆಯ ಮನಸ್ಸಿನಲ್ಲಿ ಆಳವಾಗಿ ಬೇರೂರಿದ್ದವು. ಆದಾಗ್ಯೂ, ಆಕೆಯ ತಾಯಿ ಭಾರತಕ್ಕೆ ಹೋಗುವ ಬಗ್ಗೆ ಹೇಳಿದಾಗ, ಅಮೆರಿಕದ ಸುಕಕರ ಜೀವನವನ್ನು ಬಿಟ್ಟು ಅಂತಹ ದೇಶಕ್ಕೆ ಹೋಗಲು ನನಗೆ ಇಷ್ಟವಿಲ್ಲ ಎಂದು ಹೇಳುವ ಮೂಲಕ ಆರಂಭಿಕವಾಗಿ ಭಯವನ್ನು ವ್ಯಕ್ತಪಡಿಸಿದ್ದರಂತೆ.
ಅವರ ಭಯಕ್ಕೆ ವಿರುದ್ಧವಾಗಿ ಅವಳ ಕುಟುಂಬದ ಮೂಲಕ ಉತ್ತಮ ಭಾಂದವ್ಯವನ್ನು ಹೊಂದಲು ಪ್ರಾರಂಭಿಸಿದರು. ಪೋನ್​ ಕರೆಗಳ ಮೂಲಕ ಮಾತ್ರ ಮಾತನಾಡುತ್ತಿದ್ದ ಅವರು ಸಂಬಂಧಿಕರನ್ನು ಹತ್ತಿರದಿಂದ ನೋಡಿ ಸಂತೋಷಗೊಂಡಿರುವುದಾಗಿ ತಿಳಿಸಿದ್ದಾರೆ.
ಆದಾಗ್ಯೂ, ಅಮೆರಿಕದ ಶಾಂತಿಯುತ ಪರಿಸರದಲ್ಲಿ ಬೆಳೆದ ಆಕೆಗೆ ಭಾರತದ ಗದ್ದಲ, ಬಣ್ಣ ಬಣ್ಣದ ರಸ್ತೆಗಳು, ಜನದಟ್ಟಣೆ ಮತ್ತು ವೈವಿಧ್ಯಮಯ ವಾಸನೆಗಳು ಆರಂಭದಲ್ಲಿ ದೊಡ್ಡ 'ಸಂಸ್ಕೃತಿ ಆಘಾತ' (Culture Shock) ನೀಡಿದೆ. ಇಲ್ಲಿ ಎಲ್ಲವೂ ಅತಿಯಾಗಿ ಮತ್ತು ವೇಗವಾಗಿ ಚಲಿಸುವಂತೆ ಭಾಸವಾಗುತ್ತದೆ ಎಂದು ಆಕೆ ಒಪ್ಪಿಕೊಂಡಿದ್ದಾಳೆ.
ಭಾರತದಲ್ಲಿ ಎಲ್ಲವೂ ಪರಿಪೂರ್ಣವಾಗಿದೆ ಎಂದು ನಾನು ಹೇಳುವುದಿಲ್ಲ. ನಾನಿನ್ನೂ ಈ ದೇಶಕ್ಕೆ ಹೊಂದಿಕೊಳ್ಳುತ್ತಿದ್ದೇನೆ. ಕೆಲವೊಮ್ಮೆ ಅತಿಯಾದ ಒತ್ತಡಕ್ಕೆ ಒಳಗಾಗಿ ಸೌಕರ್ಯ ವಲಯದಿಂದ ಹೊರಗುಳಿದ ಕ್ಷಣಗಳಿವೆ. ಆದರೆ, ಭಾರತಕ್ಕೆ ಎಂದಿಗೂ ಭೇಟಿ ನೀಡದವರು ಈ ದೇಶವನ್ನು ಏಕೆ ಇಷ್ಟೊಂದು ದ್ವೇಷಿಸುತ್ತಾರೆ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಬರೆಯುವ ಮೂಲಕ ವಿದೇಶಿ ಸ್ಟೀರಿಯೊಟೈಪ್‌ಗಳನ್ನು ಆಕೆ ಕಿತ್ತೆಸೆದಿದ್ದಾರೆ.
ಈ ಪೋಸ್ಟ್​​ ವೈರಲ್ ಆಗುತ್ತಿದ್ದಂತೆಯೇ, ವೈವಿಧ್ಯಮಯ ಚರ್ಚೆಯನ್ನು ಹುಟ್ಟುಹಾಕಿತು. ಒಬ್ಬ ಬಳಕೆದಾರರು ನಮ್ಮ ದೇಶದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ನಿಮ್ಮಂತಹವರ ಅನುಭವಗಳು ಬಹಳ ಮುಖ್ಯ ಎಂದು ಕಾಮೆಂಟ್​ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, ಸಾಮಾನ್ಯವಾಗಿ ಜನ ತಾವು ಕೇಳಿದ ನಕಾರಾತ್ಮಕ ವಿಷಯಗಳನ್ನೇ ನಂಬಿ ಕುಳಿತುಬಿಡುತ್ತಾರೆ. ಆದರೆ ಈ ಯುವತಿ ಆ ಎಲ್ಲಾ ಕಲ್ಪನೆಗಳನ್ನು ಬದಿಗಿಟ್ಟು, ಸ್ವತಃ ಅನುಭವಿಸಿ ಸತ್ಯವನ್ನು ಕಂಡುಕೊಂಡಿದ್ದಾರೆ ಎಂದು ಬರೆದಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net