US and Iran peace Deal : ಅಮೆರಿಕ ಮತ್ತು ಇರಾನ್ ನಡುವೆ ಪ್ರಸ್ತಾವಿತವಾಗಿರುವ ಶಾಂತಿ ಒಪ್ಪಂದವು ಕೇವಲ ರಾಜತಾಂತ್ರಿಕ ಬೆಳವಣಿಗೆಯಷ್ಟೇ ಅಲ್ಲದೆ, ಜಾಗತಿಕವಾಗಿ ಹಾಗೂ ವಿಶೇಷವಾಗಿ ಭಾರತೀಯರ ದೈನಂದಿನ ಜೀವನದ ಮೇಲೆ ಅತ್ಯಂತ ಪಾಸಿಟಿವ್ ಪರಿಣಾಮ ಬೀರಲಿದೆ. ಈ ಒಪ್ಪಂದದಿಂದಾಗಿ ಅಡುಗೆ ಅನಿಲ (LPG), ಪೆಟ್ರೋಲ್, ಡೀಸೆಲ್ ದರಗಳು, ವಿಮಾನ ಪ್ರಯಾಣದ ಟಿಕೆಟ್ ವೆಚ್ಚ, ಆಹಾರ ಪದಾರ್ಥಗಳ ಬೆಲೆಗಳು ಮತ್ತು ಗೃಹ ಸಾಲದ ಇಎಂಐ ಕೂಡ ಕಡಿಮೆಯಾಗುವ ಸಾಧ್ಯತೆಗಳಿವೆ.