ಖೆಶ್ಮ್ ದ್ವೀಪದ ಮೇಲೆ ಯುಎಸ್ ವೈಮಾನಿಕ ದಾಳಿ: ಅಮೆರಿಕ-ಇರಾನ್ ಶಾಂತಿ ಒಪ್ಪಂದಕ್ಕೆ ನೆತನ್ಯಾಹು ಬ್ರೇಕ್? Qeshm Island

Airstrike by American forces on Qeshm Island in the Strait of Hormuz.
ಹೊರ್ಮುಜ್ ಜಲಸಂಧಿಯ ಖೆಶ್ಮ್ ದ್ವೀಪದ ಮೇಲೆ ಅಮೆರಿಕ ಪಡೆಗಳಿಂದ ವೈಮಾನಿಕ ದಾಳಿ.
Published on: 

ವಾಷಿಂಗ್ಟನ್​​: ಕಳೆದ ಎಂಟು ತಿಂಗಳಿನಿಂದ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಅಮೆರಿಕ, ಇರಾನ್​ ನಡುವಿನ ಸಂಘರ್ಷಕ್ಕೆ ಕೊನೆ ಹಾಡಲು ಒಂದು ಕಡೆ ಶಾಂತಿ ಮಾತುಕತೆ ನಡೆಯುತ್ತಿದ್ದರೆ, ಇನ್ನೊಂದು ಕಡೆ ಯುಎಸ್​ ಪಡೆಗಳು ಇರಾನ್​​ ಮೇಲೆ ದಾಳಿ ಮುಂದುವರಿಸಿದೆ ಎಂದು ವರದಿಯಾಗುತ್ತಿದೆ.

ಕೆಲ ದಿನಗಳ ಹಿಂದೆ, ಅಮೆರಿಕ ಮತ್ತು ಇರಾನ್​ ಎರಡು ದೇಶಗಳು ಶಾಂತಿ ಒಪ್ಪಂದಕ್ಕೆ ಮನಸ್ಸು ಮಾಡಿದ್ದು, ಕೆಲವೇ ದಿನಗಳಲ್ಲಿ ಕತಾರ್​ನಲ್ಲಿ ಮಾತುಕತೆ ಆರಂಭವಾಗಲಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಹೊರ್ಮುಜ್​ ಜಲಸಂಧಿ ಸಮೀಪದಲ್ಲಿರುವ ಖೆಶ್ಮ್ ದ್ವೀಪ (Qeshm Island) ದ ಮೇಲೆ ಅಮೆರಿಕ ಪಡೆಗಳು ಮಿಸೈಲ್​ ದಾಳಿ ನಡೆಸಿವೆ ಎಂದು ತಿಳಿದುಬಂದಿದೆ.

ಖೆಶ್ಮ್ ದ್ವೀಪದ ಮೇಲೆ ಮಿಸೈಲ್​ ಅಟ್ಯಾಕ್​!

ಜಾಗತಿಕ ಮಾಧ್ಯಮಗಳ ವರದಿ ಪ್ರಕಾರ, ಹೊರ್ಮುಜ್​ ಜಲಸಂಧಿಗೆ ಹತ್ತಿರದಲ್ಲಿರುವ ಖೆಶ್ಮ್ ದ್ವೀಪದ ಮೇಲೆ ಅಮೆರಿಕ ವೈಮಾನಿಕ ದಾಳಿ ಮಾಡಿದೆ, ಹಾಗೂ ದ್ವೀಪದ ನಿವಾಸಿಗಳು ಎರಡು ವಿಮಾನಗಳ ಹಾರಾಟವನ್ನು ಗುರುತಿಸಿದ್ದಾಗಿ ಹೇಳಿದ್ದಾರೆಂದು ಇರಾನ್​ ಮಾಧ್ಯಮಗಳು ವರದಿ ಮಾಡಿದೆ.

ಈ ಮಾತನ್ನು ಭಗಶಃ ತಳ್ಳಿ ಹಾಕಿರುವ ಅಮರಿಕ ಮಾಧ್ಯಮಗಳು, ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ಮಾಡುತ್ತಿರುವ ಇರಾನ್​ ಪಡೆಗಳ ಮೇಲೆ ಅಮೆರಿಕ ಸೀಮಿತ ದಾಳಿ ನಡೆಸುತ್ತಿದೆ. ಆದರೆ ಇದು ಸಂಪೂರ್ಣ ಯುದ್ಧಕ್ಕೆ ಮುನ್ನುಡಿಯಲ್ಲ ಎಂಬ ಸ್ಪಷ್ಟನೆ ನೀಡಿದೆ.

ಆದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ಸದ್ಯ ಯುಎಸ್​ನಲ್ಲಿ ಮಧ್ಯಂತರ ಚುನಾವಣೆ ನಡೆಯಲಿದೆ, ಅದು ಮುಗಿಯುವವರೆಗೆ ಇರಾನ್ ಮೇಲೆ ಯಾವುದೇ ದಾಳಿ ನಡೆಸುವುದಿಲ್ಲವೆಂದು ಹೇಳಿಕೆ ನೀಡಿದ್ದರು. ಆದರೀಗ ಖೆಶ್ಮ್ ದ್ವೀಪದ ಮೇಲೆ ದಾಳಿ ನಡೆದಿದ್ದು, ಶಾಂತಿ ಒಪ್ಪಂದ ಯಾವ ದಿಕ್ಕನ್ನು ಪಡೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.

Also Read
ಅಣಕು ಸಂಸತ್‌ನಲ್ಲೂ ರಾಹುಲ್‌ಗೆ ಪ್ರಧಾನಿ ಪಟ್ಟ ಸಿಗಲಿಲ್ಲ: ಮೋದಿ ಎದುರು ಮಾತನಾಡಲು ತಾಕತ್ತಿಲ್ಲ; ಅಮಿತ್​ ಶಾ ಲೇವಡಿ! Amit Shah
Airstrike by American forces on Qeshm Island in the Strait of Hormuz.

ಈ ದಾಳಿ ಹಿಂದಿರುವುದು ನೆತನ್ಯಾಹು?

ಇನ್ನು ಖೆಶ್ಮ್ ದ್ವೀಪದ ಮೇಲೆ ಅಮೆರಿಕ ನಡೆಸಿದ ದಾಳಿಯ ಹಿಂದೆ ಇಸ್ರೇಲ್​ ಪ್ರಧಾನಿ ಬೆಂಜಾಮಿನ್​ ನೆತನ್ಯಾಹುವಿನ ಕೈವಾಡವಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಅಮೆರಿಕ ಹಾಗೂ ಇರಾನ್ ನಡುವೆ ಶಾಂತಿ ಸಂಭವಿಸಿದರೆ, ತಮ್ಮ ಮಧ್ಯಂತರ ಸರ್ಕಾರಕ್ಕೆ ತೊಂದರೆಯಾಗುತ್ತದೆ ಎಂದು ಬೆಂಜಾಮಿನ್​ ನೆತನ್ಯಾಹು ಭಾವಿಸಿದ್ದಾರೆ.

ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ನೆತನ್ಯಾಹು ಬಹುಮತ ಪಡೆಯುವಲ್ಲಿ ವಿಫಲರಾಗಿದ್ದು, ಇದರ ಲಾಭವನ್ನು ಇರಾನ್​ ಪಡೆದುಕೊಂಡು, ತನ್ನ ದೇಶದ ವಿರುದ್ಧ ಕುತಂತ್ರ ಮಾಡಬಹುದು ಎಂಬ ಕಾರಣಕ್ಕೆ ನೆತನ್ಯಾಹು, ಡೊನಾಲ್ಡ್​ ಟ್ರಂಪ್​ ಬಳಿ, ಇರಾನ್​ ಮೇಲೆ ದಾಳಿ ನಿಲ್ಲಿಸಬೇಡಿ ಎಂದು ಹೇಳಿದ್ದಾರೆಂಬ ವದಂತಿ ಹೇಳಿಬಂದಿದೆ, (ಏಜೆನ್ಸೀಸ್​).