ಬಾಂಗ್ಲಾದಲ್ಲಿ ನಿಲ್ಲದ ಅಟ್ಟಹಾಸ.. ಮತ್ತೊಬ್ಬ ಹಿಂದು ವ್ಯಕ್ತಿಯ ಹತ್ಯೆ! | Bangladesh

Bangladesh
Bangladesh
Published on
ಢಾಕಾ: ಬಾಂಗ್ಲಾದಲ್ಲಿ(Bangladesh) ಅಲ್ಪಾಸಂಖ್ಯಾರ ಮೇಲಿನ ದಾಳಿ ಹೆಚ್ಚಾಗುತ್ತಿದ್ದು, ಇದೀಗ ಮತ್ತೊಬ್ಬ ಹಿಂದು ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಸೋಮವಾರ ವರದಿಯಾಗಿದೆ.
ಪತ್ರಕರ್ತ ಮತ್ತು ಬ್ಲಿಟ್ಜ್ ಸಂಪಾದಕ ಸಲಾಹ್ ಉದ್ದೀನ್ ಶೋಯೆಬ್ ಚೌಧರಿ ಅವರ ಪ್ರಕಾರ, ಹತ್ಯೆಯಾದ ಹಿಂದು ವ್ಯಕ್ತಿ ರಾಣಾ ಪ್ರತಾಪ್ ಬೈರಾಗಿ ಎಂದು ಗುರುತಿಸಲಾಗಿದ್ದು, ಜೆಸ್ಸೋರ್ ಜಿಲ್ಲೆಯ ಮೊನಿರಾಂಪುರ ಉಪಜಿಲ್ಲಾದಲ್ಲಿ ಅಪರಿಚಿತ ದುಷ್ಕರ್ಮಿಗಳು ಆತನ ಮೇಲೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.
ಕೊಪಾಲಿಯಾ ಬಜಾರ್‌ನಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ಗುಂಡಿನ ದಾಳಿ ನಡೆದಿದೆ. ಜೆಸ್ಸೋರ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಬುಲ್ ಬಷರ್ ಅವರನ್ನು ಉಲ್ಲೇಖಿಸಿ, ಸೋಮವಾರ ಸಂಜೆ 5:45 ರ ಸುಮಾರಿಗೆ (ಸ್ಥಳೀಯ ಸಮಯ) ಈ ಘಟನೆ ಸಂಭವಿಸಿದೆ ಎಂದು ವರದಿ ತಿಳಿಸಿದೆ. ಆಗ ಮಾರುಕಟ್ಟೆಯಲ್ಲಿ ಯುವಕನ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ.
ಸರಣಿ ಹತ್ಯೆಗಳು: ಕಳೆದ 20 ದಿನಗಳಲ್ಲಿ ಬಾಂಗ್ಲಾದೇಶದಲ್ಲಿ ನಡೆದ 5ನೇ ಹಿಂದೂ ಹತ್ಯೆ ಇದಾಗಿದೆ. ಇದಕ್ಕೂ ಮೊದಲು ದೀಪು ಚಂದ್ರ ದಾಸ್, ಬಜ್ವೇಂದ್ರ ಬಿಸ್ವಾಸ್ ಮತ್ತು ಅಮೃತ್ ಮೊಂಡಲ್ ಎಂಬುವವರನ್ನು ಗುಂಪು ಹತ್ಯೆ (Lynching) ಮಾಡಲಾಗಿತ್ತು,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net