ಫೇವರಿಟ್​ ಫುಡ್​ ಶಾರ್ಕ್​, 12 ಮೀಟರ್​ ಉದ್ದ... ಇದೇ ನೋಡಿ ವಿಶ್ವದ ಅತಿ ದೊಡ್ಡ ಹಾವು! Unknown Facts

ಸಾಂಧರ್ಭಿಕ ಚಿತ್ರ
ಸಾಂಧರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಈ ಜಗತ್ತು ಸಾಕಷ್ಟು ನಿಗೂಢಗಳಿಂದ ಕೂಡಿರುವುದು ಹೊಸ ಸಂಗತಿಯೇನಲ್ಲ
  • ವಿಷ್ಮಯಕಾರಿ ಜಗತ್ತಿನ ಬಗ್ಗೆ ಮನುಷ್ಯ ತಿಳಿದುಕೊಳ್ಳಬೇಕಾದ ವಿಚಾರ ಸಮುದ್ರದಷ್ಟಿದೆ
  • ಮಾನವರು ಈಗ ತಿಳಿದುಕೊಂಡಿರುವುದು ಒಂದು ಬೊಗಸೆಯಷ್ಟು ಮಾತ್ರ
Unknown Facts : ಈ ಜಗತ್ತು ಸಾಕಷ್ಟು ನಿಗೂಢಗಳಿಂದ ಕೂಡಿರುವುದು ಹೊಸ ಸಂಗತಿಯೇನಲ್ಲ. ವಿಷ್ಮಯಕಾರಿ ಜಗತ್ತಿನ ಬಗ್ಗೆ ಮನುಷ್ಯ ತಿಳಿದುಕೊಳ್ಳಬೇಕಾದ ವಿಚಾರ ಸಮುದ್ರದಷ್ಟಿದೆ. ಈಗ ತಿಳಿದುಕೊಂಡಿರುವುದು ಒಂದು ಬೊಗಸೆಯಷ್ಟು ಮಾತ್ರ. ನಮ್ಮ ಭೂಮಿ ಸಹಸ್ರಾರು ವರ್ಷಗಳಿಂದ ಬದಲಾಗುತ್ತಾ ಬರುತ್ತಿದೆ. ಈ ಹಿಂದೆ ಭೂಮಿಯಲ್ಲಿ ದೊಡ್ಡ ದೊಡ್ಡ ಜೀವಿಗಳಿದ್ದವು. ಅವೆಲ್ಲ ನಶಿಸಿ ಹೋಗಿವೆ. ಆದರೆ, ಆ ಜೀವಿಗಳ ಕುರುಹುಗಳು ಆಗಾಗ ಪತ್ತೆಯಾಗುತ್ತಿದ್ದು, ನಮ್ಮೆಲ್ಲರನ್ನು ಅಚ್ಚರಿಗೆ ದೂಡುತ್ತಿದೆ.
ಹೌದು, ಡೈನೋಸಾರ್‌ಗಳಂತೆ, ನಮಗೆ ತಿಳಿದಿಲ್ಲದ ಅನೇಕ ಜೀವಿಗಳು ಭೂಮಿಯ ಮೇಲೆ ಹುಟ್ಟಿ, ಬೆಳೆದು, ಕಣ್ಮರೆಯಾಗಿವೆ. ವಿಜ್ಞಾನಿಗಳು ಇತ್ತೀಚೆಗೆ ಹೊಸ ರೀತಿಯ ಸಮುದ್ರ ಹಾವನ್ನು ಕಂಡುಹಿಡಿದಿದ್ದಾರೆ. ಈ ಸಮುದ್ರ ಹಾವು ಸುಮಾರು 56 ರಿಂದ 34 ಮಿಲಿಯನ್ ವರ್ಷಗಳ ಹಿಂದೆ, ಅಂದರೆ ಈಯಸೀನ್ ಯುಗದಲ್ಲಿ ವಾಸಿಸುತ್ತಿತ್ತು. ವಿಜ್ಞಾನಿಗಳು ಇದಕ್ಕೆ ಪ್ಯಾಲಿಯೋಫಿಸ್ ಕೊಲೋಸಸ್ ಎಂದು ಹೆಸರಿಸಿದ್ದಾರೆ.
ಈ ಹಾವನ್ನು ಪಳೆಯುಳಿಕೆಗಳಿಂದ ಗುರುತಿಸಲಾಗಿದೆ. ಅದರ ಮೂಳೆಗಳು ಊಹಿಸಲಾಗದಷ್ಟು ದೊಡ್ಡದಾಗಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಹಾವು ಎಂಟರಿಂದ 12 ಮೀಟರ್‌ಗಳಿಗಿಂತ ಹೆಚ್ಚು ಉದ್ದವಿರುವುದು ಕಂಡುಬಂದಿದೆ. ಇಂದು ವಾಸಿಸುವ ಯಾವುದೇ ಸಮುದ್ರ ಹಾವಿಗಿಂತ ಇದು ದೊಡ್ಡದಾಗಿದೆ. 
2018ರಲ್ಲಿ ನಡೆಸಿದ ಅಧ್ಯಯನವು ಪ್ಯಾಲಿಯೋಫಿಸ್ ಕೊಲೋಸಸ್ ಅನ್ನು ಸಾಗರದಲ್ಲಿ ಅಥವಾ ಭೂಮಿಯಲ್ಲಿ ವಾಸಿಸುವ ಯಾವುದೇ ಹಾವಿನ ಜಾತಿಗಳಿಗಿಂತ ದೊಡ್ಡದಾಗಿದೆ ಎಂದು ವಿವರಿಸಿದೆ. 
ತಲೆಬುರುಡೆ ಅಥವಾ ಸಂಪೂರ್ಣ ದೇಹವಿಲ್ಲದಿದ್ದರೂ, ಮೂಳೆಗಳು ಸಮುದ್ರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸಿಕ್ಕಿವೆ ಎಂದು ಸಂಶೋಧಕರು ಹೇಳಿದ್ದಾರೆ. ಅವುಗಳ ತಲೆಬುರುಡೆ ತುಂಬಾ ಮೃದುವಾಗಿದ್ದು, ದೊಡ್ಡ ಬೇಟೆಯನ್ನು ನುಂಗಲು ಅವಕಾಶ ಮಾಡಿಕೊಡುತ್ತಿತ್ತು ಎಂದು ಸಂಶೋಧಕರು ತಿಳಿಸಿದ್ದಾರೆ.‘
ಈ ಹಾವುಗಳ ಮುಖ್ಯ ಆಹಾರ ದೊಡ್ಡ ಮೀನು ಮತ್ತು ಶಾರ್ಕ್ ಆಗಿತ್ತು ಎಂದು ನಂಬಲಾಗಿದೆ. ಮೂಳೆಗಳು ಮಾತ್ರ ಇರುವುದರಿಂದ, ಅವುಗಳ ಜೀವನಶೈಲಿಯ ಬಗ್ಗೆ ಹೆಚ್ಚು ಹೇಳಲು ಸಾಧ್ಯವಿಲ್ಲ ಮತ್ತು ವಿವರವಾದ ಅಧ್ಯಯನದ ಅಗತ್ಯವಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net