ಪಾಕ್​ನಲ್ಲಿ ಮುಗಿಯದ ಉಗ್ರರ ಬೇಟೆ: ಲಷ್ಕರ್ ಸಹ ಸಂಸ್ಥಾಪಕನ ಮೇಲೆ ಗುಂಡಿನ ದಾಳಿ; ಅಮೀರ್ ಹಂಜಾ ಸ್ಥಿತಿ ಗಂಭೀರ! Lashkar E Taiba Amir Hamza

ಅಮೀರ್​ ಹಂಜಾನ ಮೇಲೆ ಅಪರಿಚಿತ ಬಂದೂಕುದಾರಿಯಿಂದ ಶೂಟೌಟ್​
ಅಮೀರ್​ ಹಂಜಾನ ಮೇಲೆ ಅಪರಿಚಿತ ಬಂದೂಕುದಾರಿಯಿಂದ ಶೂಟೌಟ್​
Published on

ಪ್ರಮುಖ ಮುಖ್ಯಾಂಶಗಳು

  • ಪಾಕಿಸ್ತಾನದ ಲಾಹೋರ್‌ನಲ್ಲಿ ಲಷ್ಕರ್-ಎ-ತೊಯ್ಬಾ ಸಹ-ಸಂಸ್ಥಾಪಕನ ಮೇಲೆ ಗುಂಡಿನ ದಾಳಿ
  • ಅಮೀರ್​ ಹಂಜಾನ ಮೇಲೆ ಅಪರಿಚಿತ ಬಂದೂಕುದಾರಿಯಿಂದ ಶೂಟೌಟ್​
  • ಭಯೋತ್ಪಾದಕ ಅಮೀರ್​ ಹಂಜಾ ಸ್ಥಿತಿ ಗಂಭೀರ
  • 2001 ರ ಸಂಸತ್​ ದಾಳಿ, 2008 ರ ಮುಂಬೈ ದಾಳಿಯ ಮಾಸ್ಟರ್​ ಮೈಂಡ್​ ಹಂಜಾ ಅಮೀರ್​
ಪಾಕಿಸ್ತಾನ: ಕುಖ್ಯಾತ ಭಯೋತ್ಪಾದಕ ಸಂಘಟನೆ ಲಷ್ಕರ್​-ಎ-ತೊಯ್ಬಾದ ಸಹ ಸಂಸ್ಥಾಪಕನಾದ ಅಮೀರ್​ ಹಂಜಾ (Lashkar E Taiba Amir Hamza) ನ ಮೇಲೆ ಲಾಹೋರಿನಲ್ಲಿ ಅಪರಿಚಿತ ಬಂದೂಕುಧಾರಿಗಳು ಗುಂಡನ್ನು ಹಾರಿಸಿದ್ದು, ಹಂಜಾ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಗಿ ವರದಿಯಾಗಿದೆ.
ಲಭ್ಯ ಮಾಹಿತಿ ಪ್ರಕಾರ, ಲಾಹೋರಿನ ನ್ಯೂಸ್​ ಚಾನೆಲ್​ ಹೊರಗಡೆ ನಿಂತಿದ್ದ ಅಮೀರ್​ ಹಂಜಾನ ಮೇಲೆ ಆಗಂತುಕರು ಏಕಾಏಕಿ ಗುಂಡಿನ ಮಳೆ ಹರಿಸಿ ಪರಾರಿಯಾಗಿದ್ದಾರೆ. ಸದ್ಯ ಹಂಜಾನ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಲಷ್ಕರ್​-ಎ-ತೊಯ್ಬಾದ ಸಹ ಸಂಸ್ಥಾಪಕ ಹಂಜಾ!

ಈಗ ಅಪರಿಚಿತ ವ್ಯಕ್ತಿಯಿಂದ ಗುಂಡು ತಿಂದಿರುವ ಅಮೀರ್​ ಹಂಜಾ, ಲಷ್ಕರ್​-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯ ಸಹ ಸಂಸ್ಥಾಪಕನಾಗಿದ್ದಾನೆ. ಇವನು ಅಂತರಾಷ್ಟ್ರೀಯ ಉಗ್ರ ಮಸೂದ್​ ಅಜರ್​ನ ಆಪ್ತ ವ್ಯಕ್ತಿಯಾಗಿದ್ದು, ಭಾರತದಲ್ಲಿ ನಡೆದ ಹಲವಾರು ಭಯೋತ್ಪಾದಕ ದಾಳಿಯ ಹಿಂದಿನ ಮಾಸ್ಟರ್​ ಮೈಂಡ್​ ಇವನದೇ ಎಂದು ಹೇಳಲಾಗುತ್ತದೆ.
ಇವನು ಲಷ್ಕರ್​ ಸಂಘಟನೆಯನ್ನು ಸೇರುವ ಮೊದಲು ರಷ್ಯಾ ವಿರುದ್ಧ ಅಫ್ಘಾನಿಸ್ಥಾನದಲ್ಲಿ ಮುಜಾಹಿದ್ದೀನಾಗಿ ಕಾಫೀರರ ವಿರುದ್ಧ ಹೋರಾಡಿದ್ದ ಎಂದು ಹೇಳಲಾಗುತ್ತದೆ. ಇವನು ಲಷ್ಕರ್​ ನಡೆಸುವ ಸುದ್ದಿ ಪತ್ರಿಕೆಯ ಸಂಪಾದಕನಾಗಿ ಸಹ ಕೆಲಸ ಮಾಡಿದ್ದಾನೆ ಎಂಬ ಮಾಹಿತಿಯಿದೆ.

ಭಾರತದಲ್ಲಿ ಲಷ್ಕರ್​ ಕಾರ್ಯಾಚರಣೆ

ಭಾರತದಲ್ಲಿ ನಡೆದಿರುವ ಬಹುತೇಕ ಭಯೋತ್ಪಾದಕ ದಾಳಿಗಳನ್ನು ಈ ಲಷ್ಕರ್​-ಎ-ತೊಯ್ಬಾ ಸಂಘಟನೆಯೇ ಮಾಡಿದೆ. ಅದು 2001 ರ ಸಂಸತ್​ ದಾಳಿ, 2008 ರ ಮುಂಬೈ ದಾಳಿ, 2000 ರಲ್ಲಿ ಕೆಂಪು ಕೋಟೆ ಬಳಿ ಬಾಂಬ್​ ಸ್ಪೋಟ, 2016 ರಲ್ಲಿ ಉರಿ ಸೈನ್ಯ ಶಿಬಿರದ ಮೇಲೆ ದಾಳಿ ಮತ್ತು ಇತ್ತೀಚೆಗೆ ಪೆಹಲ್ಗಾಂವ್​ ದಾಳಿ ಇದರೆಲ್ಲರ ಹಿಂದೆ ಈ ಸಂಘಟನೆಯ ಕೈವಾಡವಿದ್ದರೆ. ಈ ದಾಳಿ ಹೇಗೆ ನಡೆಬೇಕು ಎಂದು ಸಂಚು ರೂಪಿಸುವಲ್ಲಿ ಈ ಅಮೀರ್​ ಹಂಜಾನ ಪಾತ್ರ ಪ್ರಮುಖವಾಗಿತ್ತು ಎಂದು ಹೇಳಲಾಗುತ್ತದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net