ಯುಕ್ರೇನ್ ಇಂಧನ ಸಚಿವಾಲಯದ ಪ್ರಕಾರ, ರಷ್ಯಾದ ಪಡೆಗಳು ನೂರಾರು ಕ್ಷಿಪಣಿಗಳು ಮತ್ತು ಕಾಮಿಕೇಜ್ ಡ್ರೋನ್‌ಗಳನ್ನು ಬಳಸಿ ಈ ದಾಳಿ ನಡೆಸಿವೆ. ದೇಶದ ಪೂರ್ವದಿಂದ ಪಶ್ಚಿಮದವರೆಗೆ ಇರುವ ಪ್ರಮುಖ ವಿದ್ಯುತ್ ಉತ್ಪಾದನಾ ಕೇಂದ್ರಗಳು ಮತ್ತು ವಿತರಣಾ ಕೇಂದ್ರಗಳನ್ನು ಗುರಿಯಾಗಿಸಿಕೊಳ್ಳಲಾಗಿದೆ. ಇದು ಕಳೆದ ಒಂದು ವರ್ಷದಲ್ಲಿ ನಡೆದ ಅತಿದೊಡ್ಡ ಸಂಘಟಿತ ದಾಳಿ ಎಂದು ವಿಶ್ಲೇಷಿಸಲಾಗುತ್ತಿದೆ.