U19 Asia Cup; ಬದ್ದವೈರಿಗಳ ಎದುರು ಸೋತ ಭಾರತ, 2ನೇ ಬಾರಿಗೆ ಏಷ್ಯಾಕಪ್ ಎತ್ತಿಹಿಡಿದ ಪಾಕ್​

U19 Asia Cup 2025 ಫೈನಲ್: ಪಾಕಿಸ್ತಾನ ಭಾರತವನ್ನು ಸೋಲಿಸಿತು
U19 Asia Cup 2025 ಫೈನಲ್: ಪಾಕಿಸ್ತಾನ ಭಾರತವನ್ನು ಸೋಲಿಸಿತು
Published on
ದುಬೈ: ದುಬೈನ ಐಸಿಸಿ ಅಕಾಡೆಮಿ ಮೈದಾನದಲ್ಲಿ ನಡೆದ ಪುರುಷರ U19 ಏಷ್ಯಾ ಕಪ್(U19 Asia Cup) ಫೈನಲ್‌ನಲ್ಲಿ ಬದ್ದವೈರಿ ಪಾಕಿಸ್ತಾನ ಭಾರತವನ್ನು 191 ರನ್‌ಗಳಿಂದ ಸೋಲಿಸಿದೆ. ಅಲ್ಲದೆ, ಏಷ್ಯಾ ಕಪ್ ಟ್ರೋಫಿನಯನ್ನು ತನ್ನದಾಗಿಸಿಕೊಂಡಿದೆ.
ಟಾಸ್​ ಸೋತು ಮೊದಲು ಬ್ಯಾಟಿಂಗ್​ ಆರಂಭಿಸಿದ ಪಾಕ್​ ತಂಡ ಆರಂಭಿಕ ಆಟಗಾರ ಸಮೀರ್ ಮಿನ್ಹಾಸ್ ಸ್ಪೋಟಕ​ 113 ಎಸೆತಗಳಲ್ಲಿ 172 ರನ್​ಗಳ ನೆರವಿನಿಂದ ಪಾಕ್​ 8 ವಿಕೆಟ್‌ಗಳಿಗೆ 347 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿತು. ಅಲ್ಲದೆ, ಭಾರತದ ಪರ ದೇವೇಂದ್ರನ್ 3 ವಿಕೆಟ್​ ಪಡೆದುಕೊಂಡರು. 
ಪಾಕಿಸ್ತಾನ 348 ರನ್​ಗಳ ಬೃಹತ್​ ಗುರಿಯನ್ನು ಬೆನ್ನಟ್ಟಿದ ಭಾರತ 156 ರನ್‌ಗಳಿಗೆ ಆಲೌಟ್ ಆಯಿತು. ಇಂಡಿಯಾದ ನಾಯಕ ಆಯುಷ್ ಮಾತ್ರೆ 2ರನ್​ಗಳಿಸಿ ನಿರ್ಗಮಿಸಿದರು. ನಂತರ ಬಂದ ಆರನ್ ಜಾರ್ಜ್ 16ರನ್​ ಬೇಗನೆ ವಿಕೆಟ್​ ನೀಡಿದರು. ಇನ್ನೋಂದು ಬದಿಯಲ್ಲಿ ಉತ್ತಮವಾಗಿ ಬ್ಯಾಟ್​ ಮಾಡುತ್ತಿದ್ದ ವೈಭವ್ ಸೂರ್ಯವಂಶಿ 26 ರನ್​ ತಮ್ಮ ಆಟವನ್ನು ಕೊನಗೊಳಿಸಿದರು. ಇದರೊಂದಿಗೆ ಭಾರತದ ಗೆಲುವಿನ ಭರವಸೆಯು ಆಂತ್ಯವಾಗಿತು. 
ಪಾಕ್​ ಪರವಾಗಿ ಮಾರಕ ಬೌಲಿಂಗ್​ ದಾಳಿ ನಡೆಸಿದ ತ್ರಿವಳಿಗಳಾದ ಅಲಿ ರೆಜಾ (4/42), ಮೊಹಮ್ಮದ್ ಸಯ್ಯಮ್ (2/38), ಮತ್ತು ಅಬ್ದುಲ್ ಸುಭಾನ್ (2/29) ಬಿಗುವಿನ ಬೌಲಿಂಗ್​ನಿಂದ ಭಾರತ 156 ರನ್​ಗಳಿಗೆ ಸರ್ವಪತನ ಕಂಡಿತು. 
ಅತಿಹೆಚ್ಚು ಬಾರಿ ACC ಅಂಡರ್-19 ಏಷ್ಯಾ ಕಪ್ ಗೆದ್ದವರು ಯಾರು?
1989 ರಲ್ಲಿ ಪಂದ್ಯಾವಳಿ ಪ್ರಾರಂಭವಾದಾಗಿನಿಂದ ಭಾರತ 8 ಬಾರಿ ದಾಖಲೆಯ ಪ್ರಶಸ್ತಿಯನ್ನು ಗೆದ್ದಿದೆ. 2012 ರ ಆವೃತ್ತಿಯಲ್ಲಿ ಪಂದ್ಯವು ಟೈನಲ್ಲಿ ಕೊನೆಗೊಂಡಾಗ ಭಾರತ ಪಾಕಿಸ್ತಾನದೊಂದಿಗೆ ಜಂಟಿ ವಿಜೇತರಾಗಿದ್ದರು.
ಪಾಕಿಸ್ತಾನ ತಂಡವು ಮಲೇಷ್ಯಾದಲ್ಲಿ ತನ್ನ ಸಾಂಪ್ರದಾಯಿಕ ಎದುರಾಳಿಗಳೊಂದಿಗೆ ಪ್ರಶಸ್ತಿಯನ್ನು ಹಂಚಿಕೊಂಡ ನಂತರ ಈಗ ಎರಡು ಬಾರಿ ಟ್ರೋಫಿಯನ್ನು ಎತ್ತಿ ಹಿಡಿದಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net