ದೋಹಾ, ಖತಾರ್: ಭಾರತೀಯ ರಾಯಭಾರ ಕಚೇರಿಯ ಅಡಿಯಲ್ಲಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರದ (ICC) ಪ್ರಮುಖ ಅಂಗಸಂಸ್ಥೆಯಾದ ತುಳುಕೂಟ ಖತಾರ್, ತನ್ನ 25 ವರ್ಷಗಳ ಸುದೀರ್ಘ ಪಯಣದ ನೆನಪಿಗಾಗಿ 'ತುಳುಸಿರಿ' ( Tulusiri ) ಎಂಬ ಬೆಳ್ಳಿ ಹಬ್ಬದ ಸಂಭ್ರಮಾಚರಣೆಯನ್ನು ಜನವರಿ 23, 2026 ರಂದು ದೋಹಾದ ಡಿಪಿಎಸ್ ಎಂಐಎಸ್ ಶಾಲಾ ಸಭಾಂಗಣದಲ್ಲಿ ಅತ್ಯಂತ ವೈಭವದಿಂದ ಆಚರಿಸಿತು. ಈ ಸಮಾರಂಭವು ತುಳುನಾಡಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಏಕತೆ ಮತ್ತು ಸಮುದಾಯ ಸೇವೆಯ ಸಂಕೇತವಾಗಿ ಮೂಡಿಬಂತು.