ಟ್ರಂಪ್ ತಮ್ಮ ಪೋಸ್ಟ್‌ನಲ್ಲಿ ಇರಾನ್‌ನಲ್ಲಿ ಹೊಸ ಆಡಳಿತದ ಅಧ್ಯಕ್ಷರು ಬಂದಿದ್ದಾರೆ ಎಂದು ಬರೆದುಕೊಂಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಇರಾನ್ ಕಾನ್ಸುಲೇಟ್, ಏಪ್ರಿಲ್ ಮೂರ್ಖರ ದಿನದಂದು ಟ್ರಂಪ್ ಅವರು ತಾವೊಬ್ಬರೇ ಅತಿ ದೊಡ್ಡ ಜೋಕ್ ಎಂದು ಸಾಬೀತುಪಡಿಸುತ್ತಿದ್ದಾರೆ. ಡಾ. ಪೆಜೆಶ್ಕಿಯನ್ ಅವರು ಮೊದಲಿನಿಂದಲೂ ಅಧಿಕಾರದಲ್ಲಿದ್ದಾರೆ, ಹೊಸ ಅಧ್ಯಕ್ಷರು ಎಲ್ಲಿಂದ ಬಂದರು ಎಂದು ಪ್ರಶ್ನಿಸಿದೆ.