ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಟ್ರಂಪ್, ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುವ ಹಡಗು ಸಂಚಾರಕ್ಕೆ ಯಾವುದೇ ಬೆದರಿಕೆ ಇರಬಾರದು ಮತ್ತು ಅದು ಸಂಪೂರ್ಣವಾಗಿ ಮುಕ್ತವಾಗಿರಬೇಕು ಎಂದು ಆಗ್ರಹಿಸಿದ್ದು, ಒಂದು ವೇಳೆ ಟೆಹ್ರಾನ್ ಈ ಗಡುವನ್ನು ಮೀರಿದರೆ, ಅಮೆರಿಕ ಮಿಲಿಟರಿಯು ಇರಾನಿನ ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ಮಾಡಿ ನಾಶಪಡಿಸುತ್ತದೆ, ಇದು ಅಲ್ಲಿನ ಅತಿದೊಡ್ಡ ವಿದ್ಯುತ್ ಸ್ಥಾವರದಿಂದ ಆರಂಭವಾಗುತ್ತದೆ ಎಂದಿದ್ದಾರೆ.