ಟೆಹ್ರಾನ್: ಇರಾನ್‌ನಲ್ಲಿ ಸರ್ಕಾರಿ ವಿರೋಧಿ ಪ್ರತಿಭಟನೆಗಳು ತೀವ್ರವಾಗಿ ಭುಗಿಲೆದ್ದಿದ್ದು, ರಾಜಧಾನಿ ಟೆಹ್ರಾನ್ ಮತ್ತು ಇತರ ನಗರಗಳಲ್ಲಿ ಜನರು ಬೀದಿಗಿಳಿದಿದ್ದಾರೆ. ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವ ಜನರು, ಮುಲ್ಲಾಗಳು ಜಾಗ ಖಾಲಿ ಮಾಡಬೇಕು, ಸರ್ವಾಧಿಕಾರಕ್ಕೆ ಕೊನೆ ಬೀಳಬೇಕು ಎನ್ನುತ್ತಿದ್ದಾರೆ. ಹೀಗೇಳುವ ಮೂಲಕ ಖಮೇನಿ ಸರ್ಕಾರಕ್ಕೆ ಛೀಮಾರಿ ಹಾಕುತ್ತಿದ್ದಾರೆ.