ಬೀಜಿಂಗ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Trump In China) ಬುಧವಾರ (ಮೇ.13) ಚೀನಾದ ರಾಜಧಾನಿ ಬೀಜಿಂಗ್‌ಗೆ ಆಗಮಿಸಿದ್ದು, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಲಿದ್ದಾರೆ. 2017ರ ನಂತರ ಟ್ರಂಪ್ ಅವರ ಮೊದಲ ಚೀನಾ ಭೇಟಿ ಇದಾಗಿದ್ದು, ವಿಶ್ವದ ಎರಡು ಬಲಿಷ್ಠ ಆರ್ಥಿಕತೆಗಳ ನಡುವಿನ ಈ ಭೇಟಿಯು ಅತ್ಯಂತ ಆತಂಕಕಾರಿ ಮತ್ತು ಕುತೂಹಲಕಾರಿ ಸನ್ನಿವೇಶದಲ್ಲಿ ನಡೆಯುತ್ತಿದೆ.