'ವಯೋನ್' ವರದಿ ಪ್ರಕಾರ, ಪ್ರಸ್ತುತ, ದಾಳಿಗೆ ಪ್ರತಿದಾಳಿ ಎನ್ನುವಂತೆ ಸೇಡಿಗೆ ಸೇಡು ಎಂದು ನಿಂತಿರುವ ಇರಾನ್ ಮತ್ತು ಇಸ್ರೇಲ್-ಅಮೆರಿಕ ಸದ್ಯ ಯುದ್ಧಕ್ಕೆಂದು ಇಟ್ಟಿರುವ ಹೆಜ್ಜೆಯನ್ನು ಯಾವುದೇ ಕಾರಣಕ್ಕೂ ಹಿಂದಿಡುವುದಿಲ್ಲ ಎಂದು ತಮ್ಮ ಬ್ರಹ್ಮಾಸ್ತ್ರಗಳ ಮೂಲಕ ಒತ್ತಿ ಹೇಳುತ್ತಿದೆ. ಈ ಯುದ್ಧದ ಪರಿಣಾಮದಿಂದ ಜಾಗತಿಕ ಮಟ್ಟದಲ್ಲಿ ಬಿಕ್ಕಟ್ಟು ಶುರುವಾಗಿದ್ದು, ತೈಲ ಮತ್ತು ಅನಿಲದಂತಹ ಹಲವು ಆಮದುಗಳಿಗೆ ದೊಡ್ಡ ಹೊಡೆತ ಬಿದ್ದಿದೆ. ಇದಕ್ಕೆ ಜ್ವಲಂತ ಸಾಕ್ಷಿ, ಇತ್ತೀಚೆಗೆ ಭಾರತದಲ್ಲಿ 60 ರೂ.ಗೇರಿದ ಎಲ್ಪಿಜಿ ಸಿಲಿಂಡರ್ ದರ.