ಇದೇ ಕೊನೇ... ಇರಾನ್​ ಮುಂದೆ ಎರಡೇ ಆಯ್ಕೆ ಮುಂದಿಟ್ಟು ಫೈನಲ್​ ಡೆಡ್​ಲೈನ್​ ಘೋಷಿಸಿದ ಟ್ರಂಪ್​ | Trump

ಇರಾನ್​ಗೆ ಕೊನೇ ಅವಕಾಶ ನೀಡಿದ ಅಮೆರಿಕ
ಇರಾನ್​ಗೆ ಕೊನೇ ಅವಕಾಶ ನೀಡಿದ ಅಮೆರಿಕ
Published on

ಪ್ರಮುಖ ಮುಖ್ಯಾಂಶಗಳು

  • ಡೀಲ್​ಗೆ ಒಪ್ಪಿಗೆ ಸೂಚಿಸಲು ಇನ್ನಿಲ್ಲ ಸಮಯ
  • ಸಂಪೂರ್ಣ ಶರಣಾಗತಿಗೆ ಎಚ್ಚರಿಕೆ
Trump: ಯಾವುದೇ ಕಾರಣಕ್ಕೂ ಇರಾನ್​ಗೆ ಇನ್ನೂ ಹೆಚ್ಚಿನ ಕಾಲಾವಕಾಶ ಕೊಡುವುದಿಲ್ಲ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿಡಿನುಡಿಗಳು ಸದ್ಯ ಭೀಕರ ಯುದ್ಧದ ಮುನ್ಸೂಚನೆಯನ್ನು ನೀಡಿದೆ.
ಇರಾನ್ ನಾಯಕತ್ವವನ್ನು ತರಾಟೆಗೆ ತೆಗೆದುಕೊಂಡಿರುವ ಟ್ರಂಪ್​, ತೆರೆಮರೆಯಲ್ಲಿ ಅಮೆರಿಕ ಜತೆ ಮಾತುಕತೆಗೆ ಪ್ರಯತ್ನಿಸುತ್ತಿರುವ ಇರಾನ್​, ಅದೇ ಸಾರ್ವಜನಿಕವಾಗಿ ತಮ್ಮ ರಾಷ್ಟ್ರ ಯಾವುದೇ ಮಾತುಕತೆಯಲ್ಲಿ ತೊಡಗಿಲ್ಲ ಎಂದು ಹೇಳುವ ಮೂಲಕ ನಾಟಕವಾಡುತ್ತಿರುವುದು ಏಕೆ? ಒಪ್ಪಂದಕ್ಕೆ ಅಸ್ತು ಎನ್ನಲಿಲ್ಲ ಎಂದರೆ, ನೀವು ಸಂಪೂರ್ಣವಾಗಿ ಶರಣಾಗಲು ರೆಡಿಯಿರಿ ಎಂದು ಟ್ರಂಪ್​ ಗುಡುಗಿದ್ದಾರೆ.
ನಮ್ಮ ಅನುಮತಿಯಿಲ್ಲದೆ ಯಾವುದೇ ಸರಬರಾಜುಗಳು ಇರಾನ್‌ಗೆ ತಲುಪುವುದಿಲ್ಲ ಎಂದಿದ್ದಾರೆ. ಇರಾನ್‌ನ ಪರಮಾಣು ಯೋಜನೆ ಮತ್ತು ಹೊರ್ಮುಜ್ ಜಲಸಂಧಿಯ ಬಗ್ಗೆ ನಡೆಯುತ್ತಿರುವ ಉದ್ವಿಗ್ನತೆಯ ಮಧ್ಯೆ ಟ್ರಂಪ್​ರ ಈ ಇತ್ತೀಚಿನ ಹೇಳಿಕೆಗಳು ಹೊರಬಂದಿರುವುದು ಯುದ್ಧ ಭೀತಿಯನ್ನು ಸೂಚಿಸಿದೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದ ಖಾತೆ 'ಟ್ರುತ್ ಸೋಷಿಯಲ್'ನಲ್ಲಿ ಪೋಸ್ಟ್‌ ಮಾಡಿರುವ ಟ್ರಂಪ್​, ಇರಾನ್ ನಾಯಕತ್ವವು ದ್ವಂದ್ವ ಎಂದು ಆರೋಪಿಸಿದ್ದಾರೆ.
"ಇರಾನ್ ನಾಯಕತ್ವವು ನಂಬಲಾಗದಷ್ಟು ದ್ವಂದ್ವದಿಂದ ಕೂಡಿದೆ. ತೆರೆ ಮೆರೆಯಲ್ಲಿ ನಮ್ಮ ಜತೆ ಸಭೆ ನಡೆಸಲು ಕೇಳಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಾತುಕತೆಗಳನ್ನು ನಿರೀಕ್ಷಿಸಲಾಗಿದೆ. ಆದರೆ, ಸಾರ್ವಜನಿಕವಾಗಿ ಅವರು ಅಮೆರಿಕದೊಂದಿಗೆ ನಾವು ಯಾವುದೇ ಮಾತುಕತೆಯನ್ನೂ ನಡೆಸುತ್ತಿಲ್ಲ ಎಂದು ಗರ್ವದಿಂದ ಹೇಳುತ್ತಿರುವುದು ಸರಿಯಾದ ನಡೆಯಲ್ಲ. ಇರಾನ್​ ಒಮಾನ್‌ನೊಂದಿಗೆ ಮಾತ್ರ ಮಾತುಕತೆ ನಡೆಸುತ್ತಿರುವುದು ಗೊತ್ತಿದೆ" ಎಂದಿದ್ದಾರೆ.
ಹೊರ್ಮುಜ್ ಜಲಮಾರ್ಗವನ್ನು ಬಲವಂತವಾಗಿ ನಿಯಂತ್ರಿಸುವುದಾಗಿ ಇರಾನ್ ಹೇಳಿದ್ದರೂ, ಅದು ಈಗಾಗಲೇ ಯುಎಸ್ ನೌಕಾಪಡೆಯ ಸಂಪೂರ್ಣ ಕಂಟ್ರೋಲ್​ನಲ್ಲಿದೆ. ನಮ್ಮ ದಿಗ್ಬಂಧನ ಅಥವಾ ಕೆಲವರು ಹೇಳುವಂತೆ, ಯುಎಸ್ ಉಕ್ಕಿನ ಗೋಡೆ ಅಲ್ಲಿ ನೆಲೆಯೂರಿದೆ. ಒಪ್ಪಂದ ಮಾಡಿಕೊಳ್ಳದೆ ಅಥವಾ ಸಂಪೂರ್ಣವಾಗಿ ಶರಣಾಗದೆ ಹೋದರೆ, ಖಂಡಿತ ಯಾವುದೇ ಸರಬರಾಜುಗಳು ಅಲ್ಲಿಗೆ ತಲುಪುವುದಿಲ್ಲ ಎಂದು ಟ್ರಂಪ್ ನೀಡಿರುವ ಎಚ್ಚರಿಕೆಗೆ ಇರಾನ್​ನಿಂದ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ,(ಏಜೆನ್ಸೀಸ್).​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net