ವೈಟ್ ಹೌಸ್ ಬಳಿ ಗುಂಡಿನ ದಾಳಿ; ತೃತೀಯ ಜಗತ್ತಿನ ದೇಶಗಳಿಂದ ಶಾಶ್ವತವಾಗಿ ವಲಸೆ ಸ್ಥಗಿತಗೊಳಿಸುವುದಾಗಿ ಟ್ರಂಪ್ ಘೋಷಣೆ | Donald Trump

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Published on
ನ್ಯೂಯಾರ್ಕ್​: ಅಮೆರಿಕಾದ ಅಧ್ಯಕ್ಷರ ಕಚೇರಿ ಶ್ವೇತಭವನದ ಬಳಿ ಅಫ್ಗಾನ್ ವಲಸೆ ಪ್ರಜೆಯೊಬ್ಬ ಗುಂಡಿನ ದಾಳಿಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಭಯೋತ್ಪಾದಕ ದಾಳಿ ಎಂದು ಕರೆದಿದ್ದು, ತೃತೀಯ ಜಗತ್ತಿನ ದೇಶಗಳಿಂದ ಶಾಶ್ವತವಾಗಿ ವಲಸೆಯನ್ನು ಸ್ಥಗಿತಗೊಳಿಸುವುದಾಗಿ ಶುಕ್ರವಾರ(ನ. 28) ಘೋಷಣೆ ಮಾಡಿದ್ದಾರೆ.
ಈ ಕುರಿತು ತಮ್ಮ ಟ್ರೂತ್​ನಲ್ಲಿ ಪೋಸ್ಟ್ ಹಾಕಿರುವ ಅವರು, ದೇಶೀಯ ವ್ಯವಸ್ಥೆಗಳನ್ನು ಪುನರ್ನಿರ್ಮಿಸಲು, ಅನಧಿಕೃತ ವಲಸೆಯನ್ನು ಹಿಮ್ಮೆಟ್ಟಿಸಲು ಹಾಗೂ ವಿದೇಶಿ ಪ್ರಜೆಗಳ ಮೇಲಿನ ಪರಿಶೀಲನೆಯನ್ನು ಬಿಗಿಗೊಳಿಸುವ ಪ್ರಯತ್ನದ ಭಾಗವಾಗಿ, ತೃತೀಯ ಜಗತ್ತಿನ ದೇಶಗಳಿಂದ ವಲಸೆಯನ್ನು ಶಾಶ್ವತವಾಗಿ ನಿಲ್ಲಿಸಲು ತಮ್ಮ ಆಡಳಿತವು ಕೆಲಸ ಮಾಡುತ್ತದೆ ಎಂದು ಹೇಳಿದ್ದಾರೆ.
ಅಮೆರಿಕದ ವ್ಯವಸ್ಥೆಯು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ನಾನು ಎಲ್ಲಾ ತೃತೀಯ ಜಗತ್ತಿನ ದೇಶಗಳಿಂದ ವಲಸೆಯನ್ನು ಶಾಶ್ವತವಾಗಿ ನಿಲ್ಲಿಸುತ್ತೇನೆ. ಸ್ಲೀಪಿ ಜೋ ಬಿಡೆನ್‌ರ ಆಟೊಪೆನ್ ಸಹಿ ಮಾಡಿದವರು ಸೇರಿದಂತೆ ಲಕ್ಷಾಂತರ ಬಿಡೆನ್‌ರ ಅಕ್ರಮ ಪ್ರವೇಶಗಳನ್ನು ಕೊನೆಗೊಳಿಸುತ್ತೇನೆ. ಯುನೈಟೆಡ್ ಸ್ಟೇಟ್ಸ್‌ಗೆ ನಿವ್ವಳ ಆಸ್ತಿಯಲ್ಲದ ಅಥವಾ ನಮ್ಮ ದೇಶವನ್ನು ಪ್ರೀತಿಸಲು ಅಸಮರ್ಥರಾಗಿರುವ ಯಾರನ್ನಾದರೂ ತೆಗೆದುಹಾಕುತ್ತೇನೆ ಎಂದು ತಿಳಿಸಿದ್ದಾರೆ.
ನಾಗರಿಕರಲ್ಲದವರಿಗೆ ಎಲ್ಲಾ ಫೆಡರಲ್ ಸೌಲಭ್ಯಗಳು ಮತ್ತು ಸಬ್ಸಿಡಿಗಳನ್ನು ಅಮೆರಿಕ ಕೊನೆಗೊಳಿಸುವುದಾಗಿ ಘೋಷಿಸಿದ್ದು, ದೇಶೀಯ ಶಾಂತಿಯನ್ನು ಹಾಳು ಮಾಡುವ ವಲಸಿಗರನ್ನು ಸಾರ್ವಜನಿಕ ಆರೋಪ, ಭದ್ರತಾ ಅಪಾಯ ಅಥವಾ ಪಾಶ್ಚಿಮಾತ್ಯ ನಾಗರಿಕತೆಗೆ ಹೊಂದಿಕೆಯಾಗದ ಯಾವುದೇ ವಿದೇಶಿ ಪ್ರಜೆಯಡಿ ಗಡಿಪಾರು ಮಾಡಲಾಗುವುದು ಎಂದಿದ್ದಾರೆ.
ಮಧ್ಯಮ ಆದಾಯದ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ತೃತೀಯ ಜಗತ್ತಿನ ರಾಷ್ಟ್ರಗಳು ಎಂದು ಕರೆಯಲಾಗುತ್ತದೆ. ಇದು ಪ್ರಾಥಮಿಕವಾಗಿ ಆಫ್ರಿಕಾ, ಏಷ್ಯಾ, ಲ್ಯಾಟಿನ್ ಅಮೆರಿಕ ಮತ್ತು ಓಷಿಯಾನಿದ ದೇಶಗಳನ್ನು ಒಳಗೊಂಡಿವೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net