ಮಂಗಳವಾರ ರಾತ್ರಿ ಇಡೀ ಇರಾನ್ ನಾಗರಿಕತೆಯೇ ಸರ್ವನಾಶವಾಗಲಿದೆ ಎಂದು ಅಬ್ಬರಿಸಿದ್ದ ಡೊನಾಲ್ಡ್ ಟ್ರಂಪ್, ಕೊನೆ ಕ್ಷಣದಲ್ಲಿ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಅಸೀಮ್ ಮುನಿರ್ ಅವರು ಮಧ್ಯಸ್ಥಿಕೆಯಿಂದ ಇರಾನ್ ಮೇಲಿನ ದಾಳಿಯನ್ನು ಎರಡು ವಾರಗಳ ಕಾಲ ಮುಂದೂಡುವಂತಯೆ ಮನವಿ ಮಾಡಿದ್ದು, ಹೋರ್ಮುಜ ಜಲಸಂಧಿಯನ್ನು ಸಂಪೂರ್ಣ ಮತ್ತು ತಕ್ಷಣದ ತೆರೆಯುವಿಕೆಗೆ ಇರಾನ್ ಒಪ್ಪಿಕೊಂಡರೆ ಎರಡು ವಾರಗಳ ಕದನ ವಿರಾಮಕ್ಕೆ ಒಪ್ಪಿಕೊಳ್ಳುವುದಾಗಿ ಘೋಷಿಸಿದ್ದರು.