'ಮೂಸೆವಾಲಾ' ಹಂತಕನಿಗೆ ಶುರುವಾದ ಕಂಟಕ: 'ಗೋಲ್ಡಿ ಬ್ರಾರ್' ಹಿಡಿದುಕೊಟ್ಟವರಿಗೆ 10.5 ಕೋಟಿ ರೂ. ಬಹುಮಾನ! Goldy Brar

Gangster Goldy Brar, who is on the Canadian police's 'most wanted' list, and Punjabi singer Sidhu Moosewala.
ಕೆನಡಾ ಪೊಲೀಸರ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್, ಪಂಜಾಬಿ ಗಾಯಕ ಸಿಧು ಮೂಸೆವಾಲಾ
Published on: 

ಟೊರಾಂಟೊ: ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್‌ನನ್ನು ಹಿಡಿಯಲು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಬೇಟೆ ಶುರುವಾಗಿದೆ. ಭಾರತ, ಕೆನಡಾ ಮತ್ತು ಅಮೆರಿಕ ಪೊಲೀಸರಿಗೆ ತಲೆನೋವಾಗಿರುವ ಈ ಕುಖ್ಯಾತ ಗ್ಯಾಂಗ್​​ಸ್ಟರ್​​ ಬಗ್ಗೆ ಸುಳಿವು ಕೊಟ್ಟವರಿಗೆ ಬರೋಬ್ಬರಿ 10.5 ಕೋಟಿ ರೂಪಾಯಿಗೂ ಹೆಚ್ಚು ಬಹುಮಾನ ಸಿಗಲಿದೆ. ಅಮೆರಿಕದ ಎಫ್‌ಬಿಐ (FBI) ಬೆನ್ನಲ್ಲೇ ಈಗ ಕೆನಡಾ ಸರ್ಕಾರವೂ ಗೋಲ್ಡಿ ಬ್ರಾರ್ ತಲೆಗೆ ಭಾರಿ ಮೊತ್ತದ ಬಹುಮಾನ ಘೋಷಿಸಿದೆ.

ಕೆನಡಾದ ಕ್ರಿಮಿನಲ್ಸ್ ಪಟ್ಟಿಯಲ್ಲಿ ನಂಬರ್ 1!

ಕೆನಡಾದಲ್ಲಿ ತಲೆಮರೆಸಿಕೊಂಡಿರುವ ಸತಿಂದರ್‌ಜೀತ್ ಸಿಂಗ್ ಅಲಿಯಾಸ್​ ಗೋಲ್ಡಿ ಬ್ರಾರ್ ಬಗ್ಗೆ ಮಾಹಿತಿ ನೀಡಿದವರಿಗೆ 2,50,000 ಕೆನಡಿಯನ್ ಡಾಲರ್ (ಸುಮಾರು 1.63 ಕೋಟಿ ರೂಪಾಯಿ) ಬಹುಮಾನ ನೀಡುವುದಾಗಿ ಕೆನಡಾದ ಬೋಲೋ ಪ್ರೋಗ್ರಾಂ ಗುರುವಾರ ಘೋಷಿಸಿದೆ.

ಅಷ್ಟೇ ಅಲ್ಲ, ಕೆನಡಾದ ಮೋಸ್ಟ್​ ವಾಟೆಂಡ್​ 25 ಅಪರಾಧಿಗಳ ಪಟ್ಟಿಯಲ್ಲಿ ಗೋಲ್ಡಿ ಬ್ರಾರ್‌ಗೆ ಮೊದಲ ಸ್ಥಾನ ನೀಡಲಾಗಿದೆ. ಕೆನಡಾ ಅಥವಾ ಅಮೆರಿಕದಲ್ಲಿ ಈತನನ್ನು ಬಂಧಿಸಲು ಸಹಾಯವಾಗುವ ಯಾವುದೇ ಸಣ್ಣ ಸುಳಿವು ನೀಡಿದರೂ ಈ ಭಾರಿ ಮೊತ್ತದ ಹಣ ನಿಮ್ಮದಾಗಲಿದೆ ಎಂದು ಸಂಸ್ಥೆ ತಿಳಿಸಿದೆ.

ಅಮೆರಿಕದಿಂದ 8.9 ಕೋಟಿ ರೂ. ಆಫರ್!

ಕೆನಡಾದ ಈ ಘೋಷಣೆಗೂ ಮುನ್ನ, ಸೆಪ್ಟೆಂಬರ್ 28 ರಂದು ಅಮೆರಿಕದ ತನಿಖಾ ಸಂಸ್ಥೆ ಎಫ್‌ಬಿಐ (FBI) ಕೂಡ ಗೋಲ್ಡಿ ಬ್ರಾರ್‌ನನ್ನು ತನ್ನ ಟಾಪ್ 10 ಮೋಸ್ಟ್ ವಾಂಟೆಡ್ ಪಟ್ಟಿಗೆ ಸೇರಿಸಿತ್ತು. ಆತನನ್ನು ಹಿಡಿದುಕೊಟ್ಟವರಿಗೆ 1 ಮಿಲಿಯನ್ ಅಮೆರಿಕನ್ ಡಾಲರ್ ಅಂದರೆ ಭಾರತೀಯ ಮೌಲ್ಯದಲ್ಲಿ ಸುಮಾರು 8.9 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಎಫ್‌ಬಿಐ ಘೋಷಿಸಿದೆ. ಒಟ್ಟಾರೆಯಾಗಿ, ಈತನ ಸುಳಿವು ನೀಡಿದವರಿಗೆ ಎರಡೂ ದೇಶಗಳಿಂದ ಸೇರಿ 10.5 ಕೋಟಿ ರೂಪಾಯಿಗೂ ಅಧಿಕ ಬಹುಮಾನ ಸಿಗುವ ಅವಕಾಶವಿದೆ.

Also Read
ಲಕ್ಷಾಂತರ ಬೆಲೆಯ ಜೀವಂತ ಆಮೆಗಳ ಕಳ್ಳಸಾಗಣೆ: ಬನಾರಸ್ ರೈಲು ನಿಲ್ದಾಣದಲ್ಲಿ ಇಬ್ಬರು ಮಹಿಳೆಯರು ಅರೆಸ್ಟ್​! Turtle Smuggling
Gangster Goldy Brar, who is on the Canadian police's 'most wanted' list, and Punjabi singer Sidhu Moosewala.

ಏನಿದು ಕೆನಡಾದ ಹತ್ಯೆ ಪ್ರಕರಣ?

2023 ರ ಸೆಪ್ಟೆಂಬರ್ 20ರಂದು ಕೆನಡಾದ ವಿನ್ನಿಪೆಗ್ ನಗರದ ಹೇಝಲ್‌ಟನ್ ಡ್ರೈವ್‌ನ ಮನೆಯೊಂದರಲ್ಲಿ 39 ವರ್ಷದ ಸುಖ್‌ದೂಲ್ ಸಿಂಗ್ ಗಿಲ್ ಎಂಬುವವರನ್ನು ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ ವಿನ್ನಿಪೆಗ್ ಪೊಲೀಸರು ಮತ್ತು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು, ಈ ಕೊಲೆಯ ಹಿಂದೆ ಗೋಲ್ಡಿ ಬ್ರಾರ್ ಮತ್ತು ಕರಣ್‌ಬೀರ್ ಸಿಂಗ್ ಕೈವಾಡ ಇರುವುದನ್ನು ಪತ್ತೆಹಚ್ಚಿದ್ದರು. ಈ ಹಿನ್ನೆಲೆಯಲ್ಲಿ ಫೆಬ್ರವರಿ 23, 2026 ರಂದು ಇವರಿಬ್ಬರ ವಿರುದ್ಧ ಪ್ರಥಮ ದರ್ಜೆ ಕೊಲೆ ಮತ್ತು ಸಂಚು ರೂಪಿಸಿದ ಆರೋಪದ ಮೇಲೆ ಅರೆಸ್ಟ್​ ವಾರಂಟ್ ಹೊರಡಿಸಲಾಗಿತ್ತು.

ಮೂಸೆವಾಲಾ ಕೊಲೆ ನಂಟು

ಗೋಲ್ಡಿ ಬ್ರಾರ್ ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಪ್ರಮುಖ ಸದಸ್ಯನಾಗಿದ್ದಾನೆ. ಅಮೆರಿಕ ಮತ್ತು ಕೆನಡಾದಲ್ಲಿ ಸುಪಾರಿ ಹತ್ಯೆ, ಹಫ್ತಾ ವಸೂಲಿ, ಡ್ರಗ್ಸ್ ದಂಧೆ ಸೇರಿದಂತೆ ಹಲವು ಕ್ರಿಮಿನಲ್ ಚಟುವಟಿಕೆಗಳನ್ನು ಈ ಗ್ಯಾಂಗ್ ನಡೆಸುತ್ತಿದೆ ಎಂದು ಎಫ್‌ಬಿಐ ಗಂಭೀರ ಆರೋಪ ಮಾಡಿದೆ.

ಇನ್ನು ಭಾರತದಲ್ಲಿ 2022 ರಲ್ಲಿ ನಡೆದ ಖ್ಯಾತ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಭೀಕರ ಹತ್ಯೆಯ ಮಾಸ್ಟರ್ ಮೈಂಡ್ ಕೂಡ ಇದೇ ಗೋಲ್ಡಿ ಬ್ರಾರ್ ಎನ್ನಲಾಗಿದೆ. ಅಂದಿನಿಂದ ಭಾರತೀಯ ತನಿಖಾ ಸಂಸ್ಥೆಗಳು ಈತನನ್ನು ದೇಶಕ್ಕೆ ಕರೆತರಲು ಸತತ ಪ್ರಯತ್ನ ನಡೆಸುತ್ತಿವೆ.

ಸದ್ಯ ಕೆನಡಾ ಮತ್ತು ಅಮೆರಿಕ ಎರಡೂ ದೇಶಗಳ ಪೊಲೀಸರು ಈತನ ಪತ್ತೆಗಾಗಿ ಬಲೆ ಬೀಸಿದ್ದು, ಸಾರ್ವಜನಿಕರ ಸಹಾಯ ಕೋರಿದ್ದಾರೆ. ವಿದೇಶದಲ್ಲಿ ಕೂತು ಅಪರಾಧ ಸಾಮ್ರಾಜ್ಯ ನಡೆಸುತ್ತಿರುವ ಗೋಲ್ಡಿ ಬ್ರಾರ್‌ಗೆ ಈಗ ಎರಡೂ ದೇಶಗಳಿಂದ ಕಂಟಕ ಎದುರಾಗಿದೆ, (ಏಜೆನ್ಸೀಸ್​).